Saturday, 14th December 2024

ಕ್ಯಾಪ್ಟನ್ ಕೂಲ್‌ ಪಡೆಗೆ ಕೊಹ್ಲಿ ದಂಡು ಸವಾಲು

ದುಬೈ: ಶನಿವಾರದ ಎರಡನೇ ಐಪಿಎಲ್ ಪಂದ್ಯ ದುಬೈನಲ್ಲಿ ನಡೆಯಲಿದ್ದು, ಕ್ಯಾಪ್ಟನ್ ಕೂಲ್ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್‌ಕಿಂಗ್ಸ್ ಹಾಗೂ ವಿರಾಟ್ ಕೊಹ್ಲಿ ನಾಯಕತ್ವದ ಆರ್.ಸಿ.ಬಿ. ತಂಡ ಮುಖಾಮುಖಿಯಾಗಲಿವೆ.

ವಿರಾಟ್ ಕೊಹ್ಲಿ ನಾಯಕತ್ವದ ಆರ್ಸಿಬಿ ತಂಡ 5 ಪಂದ್ಯಗಳನ್ನಾಡಿದ್ದು 3 ಪಂದ್ಯಗಳನ್ನು ಗೆದ್ದು 2 ರಲ್ಲಿ ಸೋತಿದೆ. ಪಾಯಿಂಟ್ ಟೇಬಲ್ ನಲ್ಲಿ 5ನೇ ಸ್ಥಾನದಲ್ಲಿದೆ. ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ 6 ಪಂದ್ಯಗಳಲ್ಲಿ 2 ಪಂದ್ಯದಲ್ಲಿ ಗೆಲುವು ಕಂಡು 4 ಪಂದ್ಯಗಳಲ್ಲಿ ಸೋತು ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ.