Friday, 4th October 2024

ಐಪಿಎಲ್‌ ಉದ್ಘಾಟನಾ ಪಂದ್ಯ: ಆರ್‌ಸಿಬಿಗೆ ಮುಂಬೈ ಇಂಡಿಯನ್ಸ್ ಎದುರಾಳಿ

ಚೆನ್ನೈ: ಇಂದಿನಿಂದ ದೇಶದಲ್ಲಿ ಐಪಿಎಲ್‌ ಜ್ವರ ಶುರು. ಪ್ರಸಕ್ತ ಸಾಲಿನ ಐಪಿಎಲ್‌ ಪಂದ್ಯಾವಳಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್ ತಂಡವನ್ನು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಶನಿವಾರ ಚೆನ್ನೈನಲ್ಲಿ ಎದುರಿಸಲಿದೆ.

ಐದು ಬಾರಿಯ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಹಾಗೂ ಮೊದಲ ಬಾರಿ ಕಪ್‌ ಗೆಲ್ಲಲು ಶತ ಪ್ರಯತ್ನ ನಡೆಸುತ್ತಿರುವ ಆರ್‌ಸಿಬಿ ತಂಡದ ನಡುವಿನ ಇಂದಿನ ಹಣಾಹಣಿ ರೋಮಾಂಚಕಾರಿಯಾಗಿರಲಿದೆ.

ಮುಂಬೈ ಇಂಡಿಯನ್ಸ್’ಗೆ ನಾಯಕ ರೋಹಿತ್‌, ಹಾರ್ದಿಕ್‌ ಪಾಂಡ್ಯ ಹಾಗೂ ಕೀರನ್‌ ಪೋಲಾರ್ಡ್‌ ಮತ್ತು ನವ ವಿವಾಹಿತ ಬೂಮ್ರಾ ಸಮರ್ಥ ಆಟಗಾರರ ಬೆಂಬಲವಿದ್ದರೆ, ಆರ್‌ಸಿಬಿಗೆ ನಾಯಕ ವಿರಾಟ್‌ ಕೊಹ್ಲಿ, ಕನ್ನಡಿಗ ದೇವದತ್‌ ಪಡಿಕ್ಕಲ್‌, ಮಿ.360 ಖ್ಯಾತಿಯ ಎಬಿಡಿ ವಿಲಿಯರ‍್ಸ್ ಬಲವಿದೆ.

ಪಂದ್ಯ ಇಂದು ಸಂಜೆ 7.30 ಕ್ಕೆ ಆರಂಭವಾಗಲಿದೆ.