ಮುಂಬೈ: ಮ್ಯಾಕ್ಸ್ವೆಲ್ ಮತ್ತು ಹ್ಯಾಝಲ್ವುಡ್ ಆಗಮನದಿಂದ ಆರ್‌ಸಿಬಿ ವಿಶ್ವಾಸ ಹೆಚ್ಚಿಸಿದೆ. ಮತ್ತೊಂದು ಕಡೆಯಲ್ಲಿ ಸತತ ಸ್ಥಿರ ಪ್ರದರ್ಶನ ರಾಜಸ್ಥಾನ ರಾಯಲ್ಸ್ ಬಲವನ್ನು ಹೆಚ್ಚಿಸಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಶಫೇನ್ ರುದರ್ ಫೋರ್ಡ್ ಜಾಗದಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ ಆಡಿದರೆ, ಜೋಶ್ ಹ್ಯಾಜಲ್ ವುಡ್ ಡೇವಿಡ್ ವಿಲ್ಲಿಯ ಜಾಗದಲ್ಲಿ ಆಡಲಿದ್ದಾರೆ. ನಾಯಕ ಫಾಫ್ ಡು ಪ್ಲೆಸಿಸ್ ಮತ್ತು ವನಿಂದು ಹಸರಂಗ ಇನ್ನೆರಡು ಫಾರಿನ್ ಕೋಟಾದ ಅಟಗಾರರು.
ಫಾಫ್ ಡು ಪ್ಲೆಸಿಸ್ ಜೊತೆಗೆ ಇನ್ನಿಂಗ್ಸ್ ಆರಂಭಿಸುವ ಅನೂಜ್ ರಾವತ್ ಸ್ಥಿರತೆ ಬಗ್ಗೆ ಪ್ರಶ್ನೆ ಇದೆ. ದಿನೇಶ್ ಕಾರ್ತಿಕ್ ಮತ್ತು ಶಹಬಾಝ್ ನದೀಮ್ ಫಿನಿಷರ್ ಕೆಲಸವನ್ನು ಮಾಡಬೇಕಿದೆ. ವನಿಂದು ಹಸರಂಗ ಲೆಗ್ ಸ್ಪಿನ್ ಸ್ಪೆಷಲಿಸ್ಟ್. ಇವರಿಗೆ ಈ ಬಾರಿ ಮ್ಯಾಕ್ಸ್ವೆಲ್ ಆಫ್ ಸ್ಪಿನ್ ಬಲವೂ ಸಿಗಲಿದೆ. ಮೊಹಮ್ಮದ್ ಸಿರಾಜ್ ಜೊತೆ ಹ್ಯಾಝಲ್ ವುಡ್ ಹೊಸ ಚೆಂಡು ಹಂಚಿಕೊಳ್ಳ ಲಿದ್ದಾರೆ. ಹರ್ಷಲ್ ಪಟೇಲ್ ಮತ್ತು ಆಕಾಶ್ ದೀಪ್ ಇನ್ನಿಬ್ಬರು ಬೌಲರ್ಗಳು.
ರಾಜಸ್ಥಾನ ರಾಯಲ್ಸ್ ಟೂರ್ನಿಯಲ್ಲಿ ಬ್ಯಾಲೆನ್ಸ್ ಆಗಿರುವ ತಂಡದಂತೆ ಕಾಣುತ್ತಿದೆ. ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ದೇವದತ್ ಪಡಿಕಲ್ ಮತ್ತು ಸಂಜು ಸ್ಯಾಮ್ಸನ್ ಬ್ಯಾಟಿಂಗ್ ಬಲ ಎದುರಾಳಿ ಬೌಲರ್ಗಳ ಎದುರಾಳಿಗಳ ಎದೆ ಬಡಿತ ಹೆಚ್ಚಿಸಿದೆ. ಶಿಮ್ರನ್ ಹೆಟ್ಮಾಯರ್ ಬ್ಯಾಟಿಂಗ್ನ ಫಿನಿಷಿಂಗ್ ಟಚ್ ಸಿಕ್ಕಿದೆ. ರಿಯಾನ್ ಪರಾಗ್ ಆಲ್ರೌಂಡರ್ ಕೋಟಾ ಭರ್ತಿ ಮಾಡಿದ್ದಾರೆ. ಅಶ್ವಿನ್ ಮತ್ತು ಯಜ್ವೆಂದರ್ ಚಹಲ್ ಎದುರಾಳಿಗಳಿಗೆ ಬಿಡಿಸಲಾಗದ ಕಗ್ಗಂಟು. ಟ್ರೆಂಟ್ಬೋಲ್ಟ್ ಮತ್ತು ಪ್ರಸಿಧ್ ಕೃಷ್ಣ ವೇಗ ಮತ್ತು ಸ್ವಿಂಗ್ ಎದುರಾಳಿಗೆ ಆರಂಭದಲ್ಲೇ ಚಾಲೆಂಜ್.