ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 20 ಸಾವಿರ ರನ್ ಪೂರ್ತಿಗೊಳಿಸಿದ ಭಾರತೀಯ ಬ್ಯಾಟರ್‌ಗಳು
Rohit Sharma: 38 ವರ್ಷದ ರೋಹಿತ್ ಅವರು 54 ಎಸೆತಗಳಲ್ಲಿ ಅರ್ಧಶತಕದ ಗಡಿ ಮುಟ್ಟಿದರು. ತಮ್ಮ ನೆಚ್ಚಿನ ಪುಲ್ ಶಾಟ್‌ಗಳ ಮೂಲಕ ಮೂರು ಸಿಕ್ಸರ್ ಗಳಿಸಿದರು. ರೋಹಿತ್ ವಿಕೆಟ್ ಪತನದ ಬಳಿಕ ಜೈಸ್ವಾಲ್ ಮತ್ತು ವಿರಾಟ್ ಸೇರಿ ಎರಡನೇ ವಿಕೆಟ್ ಜೊತೆಯಾಟದಲ್ಲಿ 156 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
Rohit Sharma -
ವಿಶಾಖಪಟ್ಟಣಂ, ಡಿ.7: ದಕ್ಷಿಣ ಆಫ್ರಿಕಾ(IND vs SA) ವಿರುದ್ಧ ಶನಿವಾರ ನಡೆದಿದ್ದ ಅಂತಿಮ ಏಕದಿನ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದ ರೋಹಿತ್ ಶರ್ಮ(Rohit Sharma) ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 20 ಸಾವಿರ ರನ್ ಪೂರೈಸಿದ ವಿಶ್ವದ 14ನೇ ಹಾಗೂ ಭಾರತದ 4ನೇ ಬ್ಯಾಟರ್ ಎಂಬ ದಾಖಲೆ ಬರೆದರು. 38 ವರ್ಷದ ರೋಹಿತ್ ಶರ್ಮ ಏಕದಿನದಲ್ಲಿ 11,516, ಟಿ20ಯಲಿ 4,231, ಹಾಗೂ ಟೆಸ್ಟ್‌ನಲ್ಲಿ 4,301 ರನ್ ಕಲೆಹಾಕಿ ಒಟ್ಟು 20,048 ರನ್ ಗಳಿಸಿದ್ದಾರೆ.
ವಿಶ್ವ ದಾಖಲೆ ದಿಗ್ಗಜ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ. ಸಚಿನ್ 34,357 ರನ್ ಬಾರಿಸಿದ್ದಾರೆ. ವಿರಾಟ್ ಕೊಹ್ಲಿ 27,910, ರಾಹುಲ್ ದ್ರಾವಿಡ್ 22,208 ರನ್ ಬಾರಿಸಿದ್ದಾರೆ.
ರೋಹಿತ್ ಶರ್ಮಾ ಜೂನ್ 23, 2007 ರಂದು ಐರ್ಲೆಂಡ್ ವಿರುದ್ಧ ಭಾರತ ಪರ ಏಕದಿನ ಪಂದ್ಯಕ್ಕೆ ಪದಾರ್ಪಣೆ ಮಾಡಿದರು. ಸೀಮಿತ ಓವರ್‌ಗಳ ವೃತ್ತಿಜೀವನದ ಆರಂಭಿಕ ವರ್ಷಗಳಲ್ಲಿ ಅವರು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು ಮತ್ತು ಕಠಿಣ ಪರಿಸ್ಥಿತಿಯನ್ನು ಎದುರಿಸಿದರು. 2013 ರ ಹೊತ್ತಿಗೆ, 86 ಏಕದಿನ ಪಂದ್ಯಗಳ ತನಕ ಅವರ ದಾಖಲೆ ಸಾಧಾರಣವಾಗಿತ್ತು. ಆದರೆ ಆರಂಭಿಕನಾಗಿ ಭಡ್ತಿ ಪಡೆದ ಬಳಿಕ ಅವರ ಪ್ರದರ್ಶನ ಉತ್ತಮ ಹಾದಿಯಲ್ಲಿ ಸಾಗಿತು. ಏಕದಿನದಲ್ಲಿ ಮೂರು ದ್ವಿಶತಕ ಕೂಡ ಬಾರಿಸಿ ಮಿಂಚಿದರು.
ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು ರನ್‌ಗಳು
ಸಚಿನ್ ತೆಂಡೂಲ್ಕರ್: 34,357 ರನ್‌ಗಳು
ವಿರಾಟ್ ಕೊಹ್ಲಿ: 27,910 ರನ್‌ಗಳು
ರಾಹುಲ್ ದ್ರಾವಿಡ್: 24,064 ರನ್‌ಗಳು
ರೋಹಿತ್ ಶರ್ಮಾ: 20,048 ರನ್‌ಗಳು
ಸೌರವ್ ಗಂಗೂಲಿ: 18,433 ರನ್‌ಗಳು
ಎಂ.ಎಸ್. ಧೋನಿ: 17,092 ರನ್‌ಗಳು
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ದಕ್ಷಿಣ ಆಫ್ರಿಕಾ ಕ್ವಿಂಟನ್ ಡಿಕಾಕ್ ಶತಕದ ಬಲದಿಂದ ದಕ್ಷಿಣ ಆಫ್ರಿಕಾ 47.5 ಓವರ್‌ಗಳಲ್ಲಿ 270 ರನ್ ಗಳಿಸಿತು. ವೇಗಿ, ಕನ್ನಡಿಗ ಪ್ರಸಿದ್ಧಕೃಷ್ಣ (66ಕ್ಕೆ4) ಮತ್ತು ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ (41ಕ್ಕೆ4) ವಿಕೆಟ್ ಕಿತ್ತರು. ಗುರಿ ಬೆನ್ನಟ್ಟಿದ ಭಾರತ ತಂಡ ಯಶಸ್ವಿ ಜೈಸ್ವಾಲ್ ಅವರ ಚೊಚ್ಚಲ ಶತಕ ಮತ್ತು ರೋಹಿತ್ ಹಾಗೂ ಕೊಹ್ಲಿಯ ಅರ್ಧಶತಕದ ನೆರವಿನಿಂದ 39.5 ಓವರ್‌ಗಳಲ್ಲಿ 1 ವಿಕೆಟ್‌ಗೆ 271 ರನ್ ಗಳಿಸಿ ಗೆದ್ದಿತು.
ಇದನ್ನೂ ಓದಿ IND vs SA: ಚೊಚ್ಚಲ ಒಡಿಐ ಶತಕ ಬಾರಿಸಿದ ವಿಶೇಷ ದಾಖಲೆ ಬರೆದ ಯಶಸ್ವಿ ಜೈಸ್ವಾಲ್!
38 ವರ್ಷದ ರೋಹಿತ್ ಅವರು 54 ಎಸೆತಗಳಲ್ಲಿ ಅರ್ಧಶತಕದ ಗಡಿ ಮುಟ್ಟಿದರು. ತಮ್ಮ ನೆಚ್ಚಿನ ಪುಲ್ ಶಾಟ್‌ಗಳ ಮೂಲಕ ಮೂರು ಸಿಕ್ಸರ್ ಗಳಿಸಿದರು. ರೋಹಿತ್ ವಿಕೆಟ್ ಪತನದ ಬಳಿಕ ಜೈಸ್ವಾಲ್ ಮತ್ತು ವಿರಾಟ್ ಸೇರಿ ಎರಡನೇ ವಿಕೆಟ್ ಜೊತೆಯಾಟದಲ್ಲಿ 156 ರನ್ ಗಳಿಸಿದರು. ಕೊಹ್ಲಿ ಅಜೇಯ 65 ರನ್ ಬಾರಿಸಿದರು.