Friday, 20th September 2024

Sachin Tendulkar: ಶಿವಾಜಿ ಪಾರ್ಕ್‌ನಲ್ಲಿ ನಿರ್ಮಾಣವಾಗಲಿದೆ ಕ್ರಿಕೆಟಿಗ ಸಚಿನ್‌ ಗುರು ಅಚ್ರೇಕರ್ ಪ್ರತಿಮೆ

Ramakant Achrekar

ಮುಂಬಯಿ: ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ(Shivaji Park) ದಿವಂಗತ ಕೋಚ್‌ ರಮಾಕಾಂತ್ ಅಚ್ರೇಕರ್(Ramakant Achrekar) ಅವರ ಪ್ರತಿಮೆಯನ್ನು(statue of Ramakant Achrekar) ನಿರ್ಮಿಸಲು ನಿರ್ಧರಿಸಿದ್ದಕ್ಕಾಗಿ ಭಾರತ ತಂಡದ ಮಾಜಿ ಕ್ರಿಕೆಟಿಗ, ದಿಗ್ಗಜ ಸಚಿನ್ ತೆಂಡೂಲ್ಕರ್(Sachin Tendulkar) ಮಹಾರಾಷ್ಟ್ರ ಸರ್ಕಾರಕ್ಕೆ(Maharashtra government) ಧನ್ಯವಾದ ತಿಳಿಸಿದ್ದಾರೆ.  ಅಚ್ರೇಕರ್ ಅವರು ತೆಂಡೂಲ್ಕರ್ ಅವರ ಬಾಲ್ಯದ(Tendulkar’s childhood coach )ತರಬೇತುದಾರರಾಗಿದ್ದರು. ಅಚ್ರೇಕರ್ ಭಾರತೀಯ ಕ್ರಿಕೆಟ್‌ಗೆ ನೀಡಿದ ಕೊಡುಗೆಗಾಗಿ ಅವರನ್ನು ಗೌರವಿಸಲು ಅವರ ಸ್ಮಾರಕವನ್ನು ನಿರ್ಮಿಸಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ.

ಕ್ರಿಕೆಟ್‌ ದೇವರು ಎಂದು ಕರೆಯಲ್ಪಡುವ ಸಚಿನ್​ ತೆಂಡೂಲ್ಕರ್(Sachin Tendulkar)​ ವಿಶ್ವ ಕ್ರಿಕೆಟ್​ನಲ್ಲಿ ಹಲವು ಸಾಧನೆ ಮಾಡಲು ಕಾರಣ ಅವರ ಗುರು ರಮಾಕಾಂತ್‌ ಅಚ್ರೇಕರ್(Ramakant Achrekar). ಬಾಲ್ಯದಿಂದಲೇ ಅಚ್ರೇಕರ್ ಗರಡಿಯಲ್ಲಿ ಪಳಗಿದ ಸಚಿನ್​ ಇಂದು ವಿಶ್ವ ಶ್ರೇಷ್ಠ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಕಾಣಿಸಿಕೊಳ್ಳುವಂತಾಗಿದೆ. 1932ರಲ್ಲಿ ಜನಿಸಿದ ಅಚ್ರೇಕರ್ ಮುಂಬೈ ಸ್ಥಳೀಯ ಕ್ರಿಕೆಟ್‍ನಲ್ಲಿ ಉತ್ತಮ ಆಟಗಾರರಾಗಿ ಹೆಸರು ಗಳಿಸಿದವರಾಗಿದ್ದರು. ಸಚಿನ್ ತೆಂಡೂಲ್ಕರ್ ಸೇರಿದಂತೆ ವಿನೋದ್ ಕಾಂಬ್ಳಿ, ಅಜಿತ್ ಆಗರ್ಕರ್, ಪ್ರವೀಣ್‌ ಆಮ್ರೆ, ಸಮೀರ್‌ ದಿಘೆ, ಬಲ್ವಿಂದರ್‌ ಸಿಂಗ್‌ ಸಂಧು ಸೇರಿದಂತೆ ಹಲವಾರು ಕ್ರಿಕೆಟಿಗರನ್ನು ದೇಶಕ್ಕೆ ಪರಿಚಯಿಸಿದ ಹೆಗ್ಗಳಿಕೆ ಅಚ್ರೇಕರ್ ಅವರದ್ದು.

1990ರಲ್ಲಿ ಭಾರತ ಸರ್ಕಾರ ಅಚ್ರೇಕರ್ ಅವರಿಗೆ ದ್ರೋಣಾಚಾರ್ಯ ಪ್ರಶಸ್ತಿ ನೀಡಿ ಗೌರವಿಸಿತ್ತು.2010ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಇವರು ಭಾಜನರಾಗಿದ್ದರು. ಸಚಿನ್​ ಎಷ್ಟೇ ದೊಡ್ಡ ಖ್ಯಾತಿ ಗಳಿಸಿದರೂ ಕೂಡ ತಮ್ಮ ಗುರುವಿನ ತ್ಯಾಗವನ್ನು ಸದಾ ನೆನಪಿಸಿಕೊಳ್ಳುತ್ತಿರುತ್ತಾರೆ. ಅಚ್ರೇಕರ್ ಅಂತಿಮ ಸಂಸ್ಕಾರಕ್ಕೆ ಶವವನ್ನು ತೆಗೆದುಕೊಂಡು ಹೋಗುವ ವೇಳೆ ಪಾರ್ಥೀವ ಶರೀರಕ್ಕೆ ಸಚಿನ್‌ ತೆಂಡುಲ್ಕರ್‌ ಕೂಡ ಹೆಗಲು ಕೊಡುವ ಮೂಲಕ ಗುರುವಿನ ಮೇಲಿನ ಪ್ರೀತಿಯನ್ನು ಮೆರೆದಿದ್ದರು. ಅಚ್ರೇಕರ್ 2019ರಲ್ಲಿ ನಿಧನ ಹೊಂದಿದ್ದರು.

https://x.com/sachin_rt/status/1829034397670019131

“ಅಚ್ರೇಕರ್ ಸರ್ ನನ್ನ ಜೀವನ ಮತ್ತು ಇತರರ ಹಲವಾರು ಜೀವನದ ಮೇಲೆ ಅಪಾರ ಪ್ರಭಾವ ಬೀರಿದ್ದಾರೆ. ನಾನು ಅವರ ಎಲ್ಲಾ ವಿದ್ಯಾರ್ಥಿಗಳ ಪರವಾಗಿ ಮಾತನಾಡುತ್ತಿದ್ದೇನೆ. ಅವರ ಜೀವನವು ಶಿವಾಜಿ ಪಾರ್ಕ್‌ನ ಸುತ್ತ ಸುತ್ತುತ್ತದೆ. ಶಿವಾಜಿ ಪಾರ್ಕ್‌ನಲ್ಲಿ ಅವರ ಕ್ರಿಕೆಟ್‌ ನೆನಪು ಶಾಶ್ವತವಾಗಿ ಇರಬೇಕೆಂದು ಅವರು ಬಯಸುತ್ತಿದ್ದರು. ಇದೀಗ ಮಹಾರಾಷ್ಟ್ರ ಸರ್ಕಾರ ಅಚ್ರೇಕರ್ ಸರ್ ಅವರ ಕರ್ಮಭೂಮಿಯಲ್ಲಿ ಅವರ ಪ್ರತಿಮೆಯನ್ನು ನಿರ್ಮಿಸುವ ಮೂಲಕ ಅವರ ಕನಸನ್ನು ನನಸು ಮಾಡುತ್ತಿರುವುದಕ್ಕೆ ಸಂತಸವಾಗಿದೆ” ಎಂದು ಸಚಿನ್‌ ಟ್ವಿಟರ್‌ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಸಿಎಂ ಏಕನಾಥ್ ಶಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರವು ಶಿವಾಜಿ ಪಾರ್ಕ್‌ನಲ್ಲಿ ಅಚ್ರೇಕರ್ ಅವರ ಸ್ಮರಣಾರ್ಥ ಪ್ರತಿಮೆ ಸ್ಥಾಪನೆಗೆ ಅನುಮತಿ ನೀಡುವಂತೆ ಬುಧವಾರ ಸರ್ಕಾರದ ನಿರ್ಣಯವನ್ನು ಹೊರಡಿಸಿದೆ. ಪ್ರತಿಮೆಯು ಆರು ಅಡಿ ಎತ್ತರವಿದ್ದು, ಶಿವಾಜಿ ಪಾರ್ಕ್‌ನಲ್ಲಿ ಗೇಟ್ ನಂ. 5. ಮಹಾರಾಷ್ಟ್ರ ಸರ್ಕಾರದ ಅಡಿಯಲ್ಲಿ ನಗರಾಭಿವೃದ್ಧಿ ಇಲಾಖೆಯು ಪ್ರಸ್ತಾವನೆಯನ್ನು ಅನುಮೋದಿಸಿದೆ. ಪ್ರತಿಮೆಯನ್ನು ವಿ ಕಾಮತ್ ಮೆಮೋರಿಯಲ್ ಕ್ರಿಕೆಟ್ ಕ್ಲಬ್ ನಿರ್ಣಯದಂತೆ ನಿರ್ವಹಿಸುತ್ತದೆ.