Wednesday, 18th September 2024

ಟೀಂ ಇಂಡಿಯಾ ಉಪ ವ್ಯವಸ್ಥಾಪಕ ಸಹಜಾನಂದ ಓಜಾ ನಿಧನ

ನಾಗಾಂವ್: ಅಸ್ಸೋಂ ಕ್ರಿಕೆಟ್ ಅಸೋಸಿಯೇಶನ್‌ನ ಮಾಜಿ ಕಾರ್ಯದರ್ಶಿ ಮತ್ತು ಟೀಂ ಇಂಡಿಯಾ ಉಪ ವ್ಯವಸ್ಥಾಪಕ ಹಜಾನಂದ ಓಜಾ (85) ನಿಧನರಾದರು.

ಅವರು ನಾಗಾಂವ್‌ನ ಆನಂದರಾಮ್ ಧೆಕಿಯಾಲ್ ಫುಕನ್ ಕಾಲೇಜಿನ ಮಾಜಿ ಪ್ರಾಂಶುಪಾಲ, ಖ್ಯಾತ ಶಿಕ್ಷಣ ತಜ್ಞ, ಕ್ರೀಡಾ ಸಂಘಟಕ, ಸಾಮಾಜಿಕ ಕಾರ್ಯಕರ್ತರೂ ಆಗಿದ್ದರು. ಓಜಾ ಅವರು ತಮ್ಮ ನಿವಾಸದಲ್ಲಿ ಕೊನೆಯು ಸಿರೆಳೆದಿದ್ದಾರೆ. ಕಳೆದ ಕೆಲವು ದಿನಗಳಿಂದ ಅವರು ವೃದ್ಧಾಪ್ಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದರು.

ಓಜಾ ಅವರು ಒಮ್ಮೆ ಅಸ್ಸೋಂ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿಯಾಗಿ 1977 ರಿಂದ 1986 ರವರೆಗೆ ಸೇವೆ ಸಲ್ಲಿಸಿದ್ದಾರೆ. ಅವರು ಅದಕ್ಕೂ ಮೊದಲು ನಾಗಾಂವ್ ಕ್ರೀಡಾ ಸಂಘದ ಕಾರ್ಯದರ್ಶಿ ಮತ್ತು ಅಧ್ಯಕ್ಷರಾಗಿದ್ದರು. ಅವರ ಅಧಿಕಾರಾವಧಿಯಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಮೊದಲ ಬಾರಿಗೆ ಗುವಾಹಟಿಯ ನೆಹರು ಕ್ರೀಡಾಂಗಣದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯವನ್ನು ನಡೆಸಲಾಯಿತು. ಅಸ್ಸೋಂ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿಯಾಗಿದ್ದಾಗ ಉಪ ವ್ಯವಸ್ಥಾಪಕರಾಗಿ ಭಾರತೀಯ ಕ್ರಿಕೆಟ್ ತಂಡದೊಂದಿಗೆ ಪಾಕಿ ಸ್ತಾನಕ್ಕೆ ಪ್ರಯಾಣ ಬೆಳೆಸಿದ್ದರು.

ಪ್ರಬಂಧಕಾರರೆಂದೇ ಹೆಸರಾಗಿರುವ ಸಹಜಾನಂದ ಓಜಾ ಅವರು ತಮ್ಮ ಆರಂಭಿಕ ದಿನಗಳಲ್ಲಿ ವೃತ್ತಪತ್ರಿಕೆ ಕ್ರೀಡಾ ಪತ್ರಿಕೋದ್ಯಮದೊಂದಿಗೆ ಸಂಬಂಧ ಹೊಂದಿದ್ದರು.

Leave a Reply

Your email address will not be published. Required fields are marked *