Monday, 16th September 2024

Saina Nehwal: ನಿವೃತ್ತಿ ಘೋಷಿಸುವ ಯೋಚನೆಯಲ್ಲಿ ಸೈನಾ ನೆಹ್ವಾಲ್

Saina Nehwal

ನವದೆಹಲಿ: ಸಂಧಿವಾತ ಸಮಸ್ಯೆಯಿಂದ ಬಳಲುತ್ತಿರುವ ಭಾರತದ ಭಾರತದ ಖ್ಯಾತ ಶಟ್ಲರ್, ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್(Saina Nehwal) ನಿವೃತ್ತಿ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಈ ವರ್ಷದ ಅಂತ್ಯದಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ. 34 ರ ಹರೆಯದ ಸೈನಾ ಇತ್ತೀಚಿನ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಚೆಫ್-ಡಿ-ಮಿಷನ್ ಆಗಿದ್ದ ಶೂಟರ್ ಗಗನ್ ನಾರಂಗ್‌ ಜತೆಗಿನ ಸಂದರ್ಶನದಲ್ಲಿ ಮಾತನಾಡುವ ವೇಳೆ ಅವರು ಈ ವಿಚಾರವನ್ನು ಹೇಳಿದರು.

“ಮೊಣಕಾಲು ನೋವಿನ ಜತೆಗೆ ಸಂಧಿವಾತದಿಂದ ಬಳಲುತ್ತಿದ್ದೇನೆ.  ನನ್ನ ಕಾರ್ಟಿಲೆಜ್ ಕೆಟ್ಟ ಸ್ಥಿತಿಗೆ ಹೋಗಿದೆ. ಎಂಟು-ಒಂಬತ್ತು ಗಂಟೆಗಳ ಕಾಲ ನಿಲ್ಲುವುದು ಕಷ್ಟವಾಗಿದೆ. ಇಂತಹ ಸ್ಥಿತಿಯಲ್ಲಿ ಆಡುವುದು ಕಷ್ಟ. ಹೀಗಾಗಿ ಕಳೆದ ಕೆಳವು ವರ್ಷಗಳಿಂದ ನಾನು ಸೀಮಿತ ಟೂರ್ನಿಯಲ್ಲಿ ಆಡುತ್ತಿದ್ದೇನೆ. ಎರಡು ಗಂಟೆಗಳ ತರಬೇತಿ ಪಡೆದು ಅತ್ಯುನ್ನತ ಮಟ್ಟದ ಆಟಗಾರರೊಂದಿಗೆ ಆಡುವುದು ಕಷ್ಟ. ಹೀಗಾಗಿ ನನ್ನ ಹಳೆಯ ಫಾರ್ಮ್‌ ಕಳೆದುಕೊಂಡೆ. ಎಲ್ಲರೂ ನಾನು ಸೋತಾಗ ಟೀಕಿಸುತ್ತಿದ್ದರು. ಆದರೆ, ನನ್ನ ಆರೋಗ್ಯ ಪರಿಸ್ಥಿತಿಯ ಬಗ್ಗೆ ಯೋಚಿಸುತ್ತಿಲ್ಲ. ತನ್ನ ವೃತ್ತಿಜೀವನವು ಅಂತಿಮ ಹಂತದಲ್ಲಿದೆ ಎಂಬ ಅಂಶವನ್ನು ಇನ್ನು ಮುಂದೆ ಕಡೆಗಣಿಸಲಾಗುವುದಿಲ್ಲ”ಎಂದು ಹೇಳಿದ್ದಾರೆ. ಸೈನಾರ ಈ ಹೇಳಿಕೆ ನೋಡುವಾಗ ಅವರು ಶೀಘ್ರದಲ್ಲೇ ತಮ್ಮ ನಿವೃತ್ತಿ ಪ್ರಕಟಿಸುವ(Saina Nehwa retirement) ಸಾಧ್ಯತೆ ಇದೆ.

https://x.com/sportstarweb/status/1830541243476041889

‘ನಾನು ಯಾವುದಾದರೊಂದು ಟೂರ್ನಿಯಲ್ಲಿ ಸೋತರೆ ಸಾಕು ಎಲ್ಲ ಕಡೆಗಳಿಂದ ಟೀಕೆಗಳು ಬರುತ್ತದೆ. ಬ್ಯಾಡ್ಮಿಂಟನ್​ ಎನ್ನುವುದು ಅಷ್ಟು ಸುಲಭದ ಆಟವಲ್ಲ. ಇಲ್ಲಿ ಉಸಿರು ತೆಗೆಯಲು ಕೂಡ ಕಷ್ಟಪಡಬೇಕು. ಇದು ಬ್ಯಾಡ್ಮಿಂಟನ್​ ಆಡಿದವರಿಗೆ ಮಾತ್ರ ಇದರ ಕಷ್ಟ ಅರಿವಾಗುತ್ತದೆ. ನಾವು ಒಬ್ಬರ ಬಗ್ಗೆ ಟೀಕೆ ಮಾಡುವುದು ಸಲಭ. ಆದರೆ ಈ ಕಷ್ಟ ಏನೆಂಬುದು ಕ್ರೀಡಾಪಟುಗಳಿಗೆ ಮಾತ್ರ ತಿಳಿದಿರುತ್ತದೆʼ ಎಂದು ಸೈನಾ ಹೇಳಿದರು.

ಲಂಡನ್ ಒಲಿಂಪಿಕ್ಸ್‌ನಲ್ಲಿ ಸೈನಾ  2012 ರಲ್ಲಿ ಕಂಚಿನ ಪದಕ ಗೆದ್ದಿದ್ದರು. ಈ ಮೂಲಕ ಒಲಿಂಪಿಕ್ಸ್‌ನ ಬ್ಯಾಡ್ಮಿಂಟನ್‌ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಶಟ್ಲರ್ ಎನಿಸಿಕೊಂಡಿದ್ದರು. 2010 ಮತ್ತು 2018 ರ ಕಾಮನ್‌ವೆಲ್ತ್ ಗೇಮ್ಸ್ ಚಿನ್ನದ ಪದಕ ಜಯಿಸಿದ್ದರು. ನಿವೃತ್ತಿ ಬಳಿಕ ರಾಜಕೀಯದಲ್ಲಿ ಮುಂದುವರಿಯುವ ಸಾಧ್ಯತೆ ಇದೆ. ಈಗಾಗಲೇ ಅವರು ಬಿಜೆಪಿ ಪಕ್ಷದ ಸದಸ್ಯೆಯಾಗಿದ್ದಾರೆ.

 

Leave a Reply

Your email address will not be published. Required fields are marked *