Wednesday, 11th December 2024

ದೆಹಲಿ ಕ್ಯಾಪಿಟಲ್ಸ್‌ನ ಮಾಜಿ ಸ್ಪಿನ್ನರ್‌ ಸಂದೀಪ್ ಲಾಮಿಚ್ಚಾನೆ ಬಂಧನ

ಕಠ್ಮಂಡು: ನೇಪಾಳ ರಾಷ್ಟ್ರೀಯ ಕ್ರಿಕೆಟ್ ತಂಡ ಮತ್ತು ದೆಹಲಿ ಕ್ಯಾಪಿಟಲ್ಸ್‌ನ ಮಾಜಿ ಲೆಗ್ ಸ್ಪಿನ್ನರ್‌ ಸಂದೀಪ್ ಲಾಮಿಚ್ಚಾನೆ ಅವರನ್ನು ನೇಪಾಳ ಪೊಲೀಸರು ಗುರುವಾರ ಬಂಧಿಸಿದೆ

ಕಠ್ಮಂಡುವಿನ ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದೇಶಕ್ಕೆ ಮರಳಿದ ನಂತರ ಕಸ್ಟಡಿಗೆ ತೆಗೆದುಕೊಂಡರು. ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಲಾಮಿಚ್ಚಾನೆ ಮೇಲಿದೆ.

ತನಿಖೆಯ ಎಲ್ಲಾ ಹಂತಗಳಲ್ಲಿ ನಾನು ಸಂಪೂರ್ಣವಾಗಿ ಸಹಕರಿಸುತ್ತೇನೆ ಮತ್ತು ನನ್ನ ನಿರಪರಾಧಿ ಎಂದು ಸಾಬೀತುಪಡಿಸಲು ಕಾನೂನು ಹೋರಾಟ ನಡೆಸುತ್ತೇನೆ. ನ್ಯಾಯವು ಜಯಿಸಲಿ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿದ್ದಾರೆ.ಆಗಸ್ಟ್ 21ರಂದು ಸಂದೀಪ್ ಲಾಮಿಚ್ಚಾನೆ ಅವರು ತನ್ನನ್ನು ಕಠ್ಮಂಡು ಮತ್ತು ಭಕ್ತಾ ಪುರದ ವಿವಿಧ ಸ್ಥಳಗಳಿಗೆ ಕರೆದೊಯ್ದು ಕಠ್ಮಂಡುವಿನ ಸಿನಮಂಗಲದ ಹೋಟೆಲ್‌ಗೆ ಕರೆತಂದು ಅದೇ ರಾತ್ರಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು 17 ವರ್ಷದ ಬಾಲಕಿ ಪ್ರಕರಣ ದಾಖಲಿಸಿದ್ದಾಳೆ. ಆತನ ವಿರುದ್ಧ ಪ್ರಕರಣ ದಾಖಲಾದಾಗಿನಿಂದ ಆತ ತನ್ನ ಸ್ಥಳ ಅಜ್ಞಾತವಾಗಿ ತಲೆಮರೆಸಿ ಕೊಂಡಿದ್ದರಿಂದ ಇಂಟರ್‌ಪೋಲ್ ನಿಂದ ಈಗಾಗಲೇ ಡಿಫ್ಯೂಷನ್ ನೋಟಿಸ್ ನೀಡಲಾಗಿತ್ತು.

ಕಠ್ಮಂಡು ಜಿಲ್ಲಾ ನ್ಯಾಯಾಲಯವು 17 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ನೇಪಾಳದ ಇಮಿಗ್ರೇಷನ್ ಡಿಪಾರ್ಟ್‌ಮೆಂಟ್ ಲಾಮಿಚ್ಚಾನೆ ಅವರನ್ನು ಕಪ್ಪುಪಟ್ಟಿಗೆ ಸೇರಿಸಿದ್ದಕ್ಕಾಗಿ ಆತನ ವಿರುದ್ಧ ಬಂಧನ ವಾರಂಟ್ ಹೊರಡಿಸಿತ್ತು.