Wednesday, 11th December 2024

ಆರ್‌ಸಿಬಿ ಮುಖ್ಯ ಕೋಚ್‌ ಆಗಿ ಸಂಜಯ್ ಬಂಗಾರ್ ನೇಮಕ

ಬೆಂಗಳೂರು: ಟೀಂ ಇಂಡಿಯಾದ ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮುಖ್ಯ ಕೋಚ್ ಆಗಿ ನೇಮಕ ಮಾಡಲಾಗಿದೆ. ಬಂಗಾರ್ ಅವರು ಮೈಕ್ ಹೆಸ್ಸನ್ ಅವರ ಸ್ಥಾನ  ತುಂಬಲಿ ದ್ದಾರೆ.

ಹೆಸ್ಸನ್‌ ಅವರು ತಂಡದ ಕ್ರಿಕೆಟ್ ಕಾರ್ಯಾಚರಣೆಗಳ ನಿರ್ದೇಶಕರಾಗಿ ಜೊತೆಗಿರಲಿ ದ್ದಾರೆ. ಯುಎಇಯಲ್ಲಿ ನಡೆದ ಐಪಿಎಲ್ 2021ರ ಎರಡನೇ ಲೀಗ್‌ನಲ್ಲಿ ಹೆಸ್ಸನ್ ಮುಖ್ಯ ಕೋಚ್‌ ಆಗಿ ಹೆಚ್ಚುವರಿ ಪಾತ್ರ ನಿರ್ವಹಿಸಿದ್ದರು.

ಸಂಜಯ್ ಅವರಿಗೆ ಅಭಿನಂದನೆಗಳು. ಈ ಆಯ್ಕೆಗೆ ಮತ್ತು ತಮ್ಮ ಹೊಸ ಅಧ್ಯಾಯ ಪ್ರಾರಂಭಿಸುತ್ತಿರುವ ಸಂಜಯ್‌ ಬಂಗಾರ್‌ ಅವರಿಗೆ ಶುಭ ಕೋರುತ್ತೇನೆ,’ ಎಂದು ಆರ್‌ಸಿಬಿ ಮುಖ್ಯಸ್ಥ ಪ್ರಥಮೇಶ್ ಮಿಶ್ರಾ ಹೇಳಿದ್ದಾರೆ.

ಆರ್‌ಸಿಬಿಯಂಥ ಉತ್ತಮ ಫ್ರಾಂಚೈಸಿಗೆ ಮುಖ್ಯ ಕೋಚ್‌ ಆಗಿ ಸೇವೆ ಸಲ್ಲಿಸುವುದು ಗೌರವ. ಐಪಿಎಲ್ ಮೆಗಾ ಹರಾಜು ಮತ್ತು ಅದರ ನಂತರದ ಋತುವಿನಲ್ಲಿ ಸಾಕಷ್ಟು ಕೆಲಸ ಗಳನ್ನು ಮಾಡಬೇಕಾಗಿದೆ. ಜಗತ್ತಿನಾದ್ಯಂತ ಇರುವ ನಮ್ಮ ಅಭಿಮಾನಿಗಳನ್ನು ಹುರಿದುಂಬಿಸಬಹುದು ಎಂಬ ನಂಬಿಕೆ ನನಗಿದೆ,’ ಎಂದು ನೂತನ ಕೋಚ್‌ ಬಂಗಾರ್ ಹೇಳಿದ್ದಾರೆ.