Saturday, 5th October 2024

ಫ್ರಾಂಚೈಸಿಯ ಮೂರು ತಂಡಗಳಿಗೆ ಗಂಗೂಲಿ ನಿರ್ದೇಶಕ

ವದೆಹಲಿ: ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಮತ್ತೊಮ್ಮೆ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನ ಸೇರಿಕೊಂಡಿದ್ದಾರೆ.

ಫ್ರಾಂಚೈಸಿ ಈ ಬಾರಿ ದೊಡ್ಡ ಸ್ಥಾನ ನೀಡಿದ್ದು, ಗಂಗೂಲಿ ಫ್ರಾಂಚೈಸಿಯ ಮೂರು ತಂಡಗಳಿಗೆ ನಿರ್ದೇಶಕರಾಗಿರುತ್ತಾರೆ. ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯ ಇತರ ಎರಡು ತಂಡಗಳು ಇಂಟರ್ನ್ಯಾಷನಲ್ ಲೀಗ್ ಟಿ20 ಮತ್ತು ಎಸ್‌ಎ ಟಿ 20 ನಲ್ಲಿವೆ.

ಗಂಗೂಲಿ ಕಳೆದ ವರ್ಷ ಅಕ್ಟೋಬರಿನಲ್ಲಿ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಈ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್ ಜೊತೆ ಕೆಲಸ ಮಾಡಿದ್ದರು. ಗಂಗೂಲಿ 2019ರಲ್ಲಿ ತಂಡದ ಮಾರ್ಗದರ್ಶಕರಾಗಿದ್ದರು. ಈ ಬಾರಿ ಅವರು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಇಂಟ ರ್ನ್ಯಾಷನಲ್ ಲೀಗ್ ಟಿ20 ತಂಡ ದುಬೈ ಕ್ಯಾಪಿಟಲ್ಸ್ ಮತ್ತು ಎಸ್‌ಎ ಟಿ20 ತಂಡ ಪ್ರಿಟೋರಿಯಾ ಕ್ಯಾಪಿಟಲ್ಸ್’ಗೆ ನಿರ್ದೇಶಕ ರಾಗಿದ್ದಾರೆ.