Sunday, 13th October 2024

ಆರ್‌ಸಿಬಿಗೆ ಹೊಸ ಬಲ: ಕೇನ್ ರಿಚರ್ಡ್ಸನ್ ಬದಲಿಗೆ ಸ್ಕಾಟ್ ಕುಗೆಲಿಜಿನ್ ಸೇರ್ಪಡೆ

ಅಹಮದಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಟೂರ್ನಿಯನ್ನು ತೊರೆದು ತವರಿಗೆ ಮರಳಿರುವ ಆಸ್ಟ್ರೇಲಿಯಾ ವೇಗದ ಬೌಲರ್ ಕೇನ್ ರಿಚರ್ಡ್ಸನ್ ಬದಲಿ ಆಟಗಾರನ ಸ್ಥಾನಕ್ಕೆ ನ್ಯೂಜಿಲೆಂಡ್ ವೇಗದ ಬೌಲರ್ ಸ್ಕಾಟ್ ಕುಗೆಲಿಜಿನ್ ರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಸೇರ್ಪಡೆಗೊಳಿಸಿದೆ.

ಇದಕ್ಕೂ ಮುನ್ನ ವೈಯಕ್ತಿಕ ಕಾರಣಗಳ ಹಿನ್ನೆಲೆಯಲ್ಲಿ ಆರ್‌ಸಿಬಿ ಶಿಬಿರವನ್ನು ತೊರೆದು ಸ್ವದೇಶಕ್ಕೆ ಮರಳಲು ಕೇನ್ ರಿಚರ್ಡ್ಸನ್ ನಿರ್ಧರಿಸಿದ್ದರು.

ರಿಚರ್ಡ್ಸನ್ ಸ್ಥಾನಕ್ಕೆ ನ್ಯೂಜಿಲೆಂಡ್ ವೇಗಿ ಸ್ಕಾಟ್ ಕುಗೆಲಿಜಿನ್ ಆಗಮನದೊಂದಿಗೆ ಆರ್‌ಸಿಬಿ ಬೌಲಿಂಗ್ ವಿಭಾಗವು ಮತ್ತಷ್ಟು ಬಲಿಷ್ಠಗೊಳ್ಳಲಿದೆ. ಮುಂಬೈ ಇಂಡಿಯನ್ಸ್ ನೆಟ್ ಬೌಲರ್ ಆಗಿ ಸ್ಕಾಟ್ ಅವರು ನವದೆಹಲಿಯಲ್ಲಿದ್ದರು. ಐಸಿಸಿ ನಿಯಮಾವಳಿ ಯಂತೆ ಬಯೋಬಬಲ್‌ನಿಂದ ಬಯೋಬಬಲ್‌ಗೆ ವರ್ಗಾವಣೆಯಾಗಿದ್ದಾರೆ. ನ್ಯೂಜಿಲೆಂಡ್ ಪರ ಕುಗೆಲಿಜಿನ್ ಎರಡು ಏಕದಿನ ಹಾಗೂ 16 ಟಿ20 ಪಂದ್ಯಗಳಲ್ಲಿ ಪ್ರತಿನಿಧಿಸಿದ್ದಾರೆ. ಆಯಡಂ ಜಂಪಾ ಅವರಿಗೆ ಬದಲಿ ಆಟಗಾರರನ್ನು ಹೆಸರಿಸಲಾಗಿಲ್ಲ.