Wednesday, 11th December 2024

ಚೇತನ್ ಶರ್ಮಾ ನೇತೃತ್ವದ ರಾಷ್ಟ್ರೀಯ ಆಯ್ಕೆ ಸಮಿತಿ ವಜಾ

ನವದೆಹಲಿ: ಆಸ್ಟ್ರೇಲಿಯದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಭಾರತ ಕ್ರಿಕೆಟ್ ತಂಡ ಫೈನಲ್‌ಗೆ ತಲುಪಲು ವಿಫಲವಾದ ಹಿನ್ನೆಲೆ ಯಲ್ಲಿ ಚೇತನ್ ಶರ್ಮಾ ನೇತೃತ್ವದ ನಾಲ್ವರು ಸದಸ್ಯರ ಹಿರಿಯ ರಾಷ್ಟ್ರೀಯ ಆಯ್ಕೆ ಸಮಿತಿಯನ್ನು ಬಿಸಿಸಿಐ ವಜಾ ಗೊಳಿಸಿದೆ.

ಭಾರತವು 2021ರ T20 ವಿಶ್ವಕಪ್‌ನಲ್ಲಿ ನಾಕೌಟ್ ಹಂತವನ್ನು ತಲುಪಲು ವಿಫಲವಾ ಯಿತು. ಮತ್ತು ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್‌ನ ಫೈನಲ್‌ನಲ್ಲಿ ಸೋತಿತ್ತು.

ಚೇತನ್ (ಉತ್ತರ ವಲಯ), ಹರ್ವಿಂದರ್ ಸಿಂಗ್ (ಕೇಂದ್ರ ವಲಯ), ಸುನಿಲ್ ಜೋಶಿ (ದಕ್ಷಿಣ ವಲಯ) ಮತ್ತು ದೇಬಾಶಿಶ್ ಮೊಹಾಂತಿ (ಪೂರ್ವ ವಲಯ) ಅವರು ಇತ್ತೀಚಿನ ದಿನಗಳಲ್ಲಿ ಹಿರಿಯ ರಾಷ್ಟ್ರೀಯ ಆಯ್ಕೆಗಾರರಾಗಿ ಕಡಿಮೆ ಅವಧಿ ಹೊಂದಿದ್ದಾರೆ.

ಹಿರಿಯ ರಾಷ್ಟ್ರೀಯ ಆಯ್ಕೆದಾರರು ಸಾಮಾನ್ಯವಾಗಿ ನಾಲ್ಕು ವರ್ಷಗಳ ಅವಧಿಯ ವಿಸ್ತರಣೆಗೆ ಒಳಪಟ್ಟಿರುತ್ತಾರೆ. ಚೇತನ್ ಅವರನ್ನು ವಜಾಗೊಳಿಸಲಾಗುವುದು ಎಂದು ಅಕ್ಟೋಬರ್ 18 ರಂದು ಬಿಸಿಸಿಐ ತಿಳಿಸಿದೆ ಎಂದು ವರದಿ ಉಲ್ಲೇಖಿಸಿದೆ.

ಬಿಸಿಸಿಐ ರಾಷ್ಟ್ರೀಯ ಆಯ್ಕೆಗಾರರ (ಸೀನಿಯರ್ ಮೆನ್) ಸ್ಥಾನಕ್ಕೆ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 28 ಆಗಿದೆ.