ಢಾಕಾ: ಪಂದ್ಯದಲ್ಲಿ ಸಹ ಆಟಗಾರನ ಮೇಲೆ ಹಲ್ಲೆೆ ನಡೆಸಿದ ಹಿನ್ನೆೆಲೆಯಲ್ಲಿ ಬಾಂಗ್ಲಾಾದೇಶ ಮಾಜಿ ವೇಗಿ ಶಹದತ್ ಹುಸೇನ್ ಅವರರಿಗೆ ಐದು ವರ್ಷ ಕ್ರಿಿಕೆಟ್ ನಿಂದ ಅಮಾನತು ಶಿಕ್ಷೆೆಯನ್ನು ಬಾಂಗ್ಲಾಾದೇಶ ಕ್ರಿಿಕೆಟ್ ಮಂಡಳಿ ವಿಧಿಸಲಾಗಿದೆ.
ಇಲ್ಲಿನ ಖುಲ್ನಾಾದಲ್ಲಿ ಭಾನುವಾರ ನಡೆದಿದ್ದ ಪಂದ್ಯದಲ್ಲಿ ಶಹದತ್ ಹುಸೇನ್ ಅವರು ಸಹ ಆಟಗಾರನನ್ನು ಥಳಿಸಿದ್ದರು ಎಂದು ಪಂದ್ಯದ ತೀರ್ಪುಗಾರರು ಹಾಗೂ ಅಧಿಕಾರಿಗಳು ಬಾಂಗ್ಲಾಾ ಕ್ರಿಿಕೆಟ್ ಮಂಡಳಿಗೆ ಮಾಹಿತಿ ನೀಡಿದ್ದರು. ಹಾಗಾಗಿ, ವೇಗಿಯ ಮೇಲೆ ಐದು ವರ್ಷ ನಿಷೇಧ ಹಾಗೂ 3 ಲಕ್ಷ ರೂ. ದಂಡ ವಿಧಿಸಲಾಗಿದೆ.
ಢಾಕಾ ಹಾಗೂ ಖುಲ್ನಾಾ ನಡುವಿನ ಪಂದ್ಯದಲ್ಲಿ ಶಹದತ್ ಅವರು ಚೆಂಡನ್ನು ಹೇಗೆ ಶೈನ್ ಮಾಡಬೇಕೆಂಬ ವಿಷಯವಾಗಿ ಯುವ ವೇಗಿ ಅರಾಫತ್ ಸನ್ನಿಿ ಅವರ ಮೇಲೆ ಹಲ್ಲೆೆ ಮಾಡಿದ್ದರು ಎಂದು ಪಂದ್ಯದ ಅಧಿಕಾರಿಗಳು ಮಾಹಿತಿ ನಿಡಿದ್ದರು. 33ರ ಪ್ರಾಾಯದ ಶಹದತ್ ಹುಸೇನ್ ಅವರು 2005 ರಿಂದ 2015ರ ಅವಧಿಯಲ್ಲಿ ಬಾಂಗ್ಲಾಾದೇಶ ಪರ 38 ಟೆಸ್ಟ್, 51 ಏಕದಿನ ಹಾಗೂ ಆರು ಟಿ-20 ಪಂದ್ಯಗಳಾಡಿದ್ದಾಾರೆ. ಈ ಪಂದ್ಯಗಳಿಂದ ಒಟ್ಟಾಾರೆ 100 ವಿಕೆಟ್ ಕಿತ್ತಿಿದ್ದರು.
===