Wednesday, 11th December 2024

ವಿವಾಹದ ಚಿತ್ರ ಸೋರಿಕೆ: ಶಾಹೀನ್‌ ಅಫ್ರಿದಿ ಅಸಮಾಧಾನ

ವದೆಹಲಿ: ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹೀದ್‌ ಅಫ್ರಿದಿ ಅವರ ಮಗಳು ಅನ್ಶಾ ಜತೆಗಿನ ವಿವಾಹದ ಚಿತ್ರ, ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಸೋರಿಕೆಯಾಗಿ ರುವುದಕ್ಕೆ ವೇಗದ ಬೌಲರ್‌ ಶಾಹೀನ್‌ ಷಾ ಅಫ್ರಿದಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿವಾಹ ಕಳೆದ ಶುಕ್ರವಾರ ನಡೆದಿತ್ತು. ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಮ್ ಸೇರಿದಂತೆ ಹಲವರು ಈ ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದರಾದರೂ, ವಿಡಿಯೊ, ಫೋಟೊಗಳು ಹೊರ ಜಗತ್ತಿಗೆ ಅಧಿಕೃತವಾಗಿ ಬಿಡುಗಡೆಯಾಗಿರಲಿಲ್ಲ.

ಟ್ವೀಟ್‌ ಮಾಡಿರುವ ಶಾಹೀನ್‌ ಅಫ್ರಿದಿ, ‘ಹಲವಾರು ಬಾರಿ ಮಾಡಿದ ವಿನಂತಿಗಳ ಹೊರತಾ ಗಿಯೂ, ನಮ್ಮ ಗೌಪ್ಯತೆಗೆ ಧಕ್ಕೆ ಯುಂಟಾಗಿದೆ. ಜನರು ಯಾವುದೇ ಅಂಜಿಕೆ ಇಲ್ಲದೇ ನಮ್ಮ ಫೋಟೊಗಳನ್ನು, ವಿಡಿಯೊಗಳನ್ನು ಹಂಚಿಕೊಳ್ಳುತ್ತಿದ್ದಾರೆ ಎಂಬುದನ್ನು ತಿಳಿದು ತುಂಬಾ ನಿರಾಸೆಯಾಗಿದೆ. ನಮ್ಮ ಸ್ಮರಣೀಯ ದೊಡ್ಡ ದಿನವನ್ನು ಹಾಳುಮಾಡಲು ಪ್ರಯತ್ನಿಸಬೇಡಿ ಎಂದು ನಾನು ಮತ್ತೊಮ್ಮೆ ವಿನಮ್ರವಾಗಿ ವಿನಂತಿಸುತ್ತೇನೆ’ ಎಂದು ಹೇಳಿದ್ದಾರೆ.

ಪಾಕಿಸ್ತಾನದ ವೇಗದ ಬೌಲರ್‌ ಶಾಹೀನ್‌ ಅಫ್ರಿದಿ ಜತೆಗಿನ ತಮ್ಮ ಮಗಳ ವಿವಾಹದ ಫೋಟೊವನ್ನು ಶಾಹೀದ್‌ ಅಫ್ರಿದಿ ಟ್ವಿಟರ್‌ ನಲ್ಲಿ ಹಂಚಿಕೊಂಡಿದ್ದರಾದರೂ, ಮಗಳ ಮುಖ ಕಾಣದಂತೆ ಎಚ್ಚರ ವಹಿಸಿದ್ದರು.