Friday, 13th December 2024

ಕ್ರಿಕೆಟಿಗೆ ವಿದಾಯ ಹೇಳಿದ ಶೇನ್ ವಾಟ್ಸನ್

ಮೇಲ್ಬರ್ನ್‌: ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ, ಚೆನ್ನೈ ಸೂಪರ್‌ ಕಿಂಗ್ಸ್‌ನ ಶೇನ್ಸ್ ವಾಟ್ಸನ್​ ಮಂಗಳವಾರ ಎಲ್ಲ ರೀತಿಯ ಕ್ರಿಕೆಟಿಗೆ ಅಧಿಕೃತ ರಾಜೀನಾಮೆ ನೀಡಿದ್ದಾರೆ.

39 ವರ್ಷದ ಕ್ರಿಕೆಟಿಗ ತಮ್ಮ ರಾಜೀನಾಮೆ ಕುರಿತಂತೆ ವಿಡಿಯೋ ಬಿಡುಗಡೆ ಮಾಡಿದ್ದು ಒಂದು ಅಧ್ಯಾಯ ಮುಚ್ಚಲ್ಪಡುತ್ತದೆ ಹಾಗೂ ಇನ್ನೊಂದು ಹೊಸ ಮಾರ್ಗ ತೆರೆದುಕೊಳ್ಳುತ್ತದೆ ಎಂದು ಹೇಳಿಕೊಂಡಿದ್ದಾರೆ.

2015ರಲ್ಲೇ ವಾಟ್ಸನ್​ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಪಡೆದಿದ್ದಾರೆ. 2018ರಲ್ಲಿ ಐಪಿಎಲ್​ ಟ್ರೋಫಿ ಗೆದ್ದ ಚೆನ್ನೈ ಸೂಪರ್​ ಕಿಂಗ್ಸ್ ತಂಡದಲ್ಲಿ ವಾಟ್ಸನ್​ ಪ್ರಮುಖ ಆಟಗಾರ ಎನಿಸಿಕೊಂಡಿದ್ದರು.