Saturday, 5th October 2024

ಡೆಲ್ಲಿಗೆ ಗೆಲುವಿನ ‘ಶ್ರೇಯಸ್ಸು’

ಶಾರ್ಜಾ: ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಕೋಲ್ಕತಾ ವಿರುದ್ದ ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿನ ನಗೆ ಬೀರಿದೆ. ಕೋಲ್ಕತಾವನ್ನು 18 ರನ್‌ಗಳಿಂದ ಮಣಿಸಿದ ಡೆಲ್ಲಿ ತಂಡ, ಅಂಕಪಟ್ಟಿಯಲ್ಲಿ ಆರ್‌ಸಿಬಿ ತಂಡವನ್ನು ಹಿಂದಿಕ್ಕಿ, ಮರಳಿ ಅಗ್ರಸ್ಥಾನಕ್ಕೇರಿತು.

ಡೆಲ್ಲಿ ನೀಡಿದ ಬೃಹತ್ ಸವಾಲಿಗೆ ಸಮರ್ಥ ಉತ್ತರ ನೀಡುವಲ್ಲಿ ಕೋಲ್ಕತಾ ನೈಟ್ ರೈಡರ‍್ಸ್ ಎಡವಿತು. ನಾಯಕ ದಿನೇಶ್ ಕಾರ್ತಿಕ್ ತನ್ನ ಕಳಪೆ ಫಾರ್ಮ್ ಅನ್ನು ಇಲ್ಲೂ ಮುಂದುವರೆಸಿ ದರು. ನಿತೀಶ್ ರಾಣಾ, ಇಯಾನ್ ಮಾರ್ಗನ್ ಹಾಗೂ ರಾಹುಲ್ ತ್ರಿಪಾಠಿ ಕೇವಲ ಸೋಲಿನ ಅಂತರವನ್ನು ಕಡಿಮೆ ಮಾಡಲಷ್ಟೇ ಶಕ್ತರಾದರು.  ಬೌಲರ್ ಏನ್ರಿಚ್ ಮೂರು ವಿಕೆಟ್ ಕಿತ್ತು ಮಿಂಚಿದರು. ಹರ್ಷಲ್ ಪಟೇಲ್ ಎರಡು ವಿಕೆಟ್ ಕಿತ್ತು ಸಮರ್ಥ ಬೆಂಬಲ ನೀಡಿದರು.

ಪಂದ್ಯ ವಿಶೇಷತೆ
ವೇಗಿ ಕಗಿಸೋ ರಬಾಡ 2019ರ ಬಳಿಕ ಡೆತ್ ಓವರಿನಲ್ಲಿ 29 ಓವರ್ ಬೌಲಿಂಗ್ ಮಾಡಿ, 25 ವಿಕೆಟ್ ಕಬಳಿಸಿದ್ದಾರೆ.

ಸ್ಕೋರ್ ವಿವರ
ಡೆಲ್ಲಿ ಕ್ಯಾಪಿಟಲ್ಸ್ 228/4
ಪೃಥ್ವಿ ಶಾ 66, ರಿಷಬ್ ಪಂತ್ 38, ಧವನ್ 26, ಶ್ರೇಯಸ್ ಅಯ್ಯರ್ 88 ಅಜೇಯ.
ಬೌಲಿಂಗ್: ರಸೆಲ್ 29/2, ಚಕ್ರವರ್ತಿ 49/1, ನಾಗರಕೋಟಿ 35/1.

ಕೋಲ್ಕತಾ ನೈಟ್ ರೈಡರ‍್ಸ್ 210/8
ಶುಬ್ಮನ್ 28, ನಿತೀಶ್ ರಾಣಾ 58, ಇಯಾನ್ ಮಾರ್ಗನ್ 44, ರಾಹುಲ್ ತ್ರಿಪಾಠಿ 36.
ಬೌಲಿಂಗ್: ಎನ್ರಿಚ್ 33/3, ಹರ್ಷಲ್ ಪಟೇಲ್ 34/2
ಪಂದ್ಯಶ್ರೇಷ್ಠ: ಶ್ರೇಯಸ್ ಅಯ್ಯರ್