Monday, 14th October 2024

Sourav Ganguly : ಯೂಟ್ಯೂಬರ್ ವಿರುದ್ಧ ಕೇಸ್‌ ದಾಖಲಿಸಿದ ಸೌರವ್‌ ಗಂಗೂಲಿ; ಪ್ರತಿಷ್ಠೆಗೆ ಹಾನಿಯಾಗಿರುವ ಆರೋಪ

Sourav Ganguly

ನವದೆಹಲಿ: ತಮ್ಮ ಬಗ್ಗೆ ಅವಹೇಳನಕಾರಿ ಭಾಷೆ ಬಳಸಿರುವ ಯೂಟ್ಯೂಬರ್ ವಿರುದ್ಧ ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ (Sourav Ganguly) ಕೇಸ್ ದಾಖಲಿಸಿದ್ದಾರೆ. ತಮ್ಮ ಬಗ್ಗೆ ಅವಹೇಳನಕಾರಿ ಭಾಷೆ ಬಳಸಿದ ಬಂಗಾಳಿ ಯೂಟ್ಯೂಬರ್ ವಿರುದ್ಧ ಅವರು ದೂರು ದಾಖಲಿಸಿ ತಮ್ಮ ಗೌರವಕ್ಕೆ ಹಾನಿಯಾಗಿದೆ ಎಂದು ಹೇಳಿದ್ದಾರೆ. ಯೂಟ್ಯೂಬರ್ ಹೆಸರು ಮೃಣ್ಮಯ್ ದಾಸ್. ಅವರು ‘ಸಿನಿಬಾಪ್’ ಎಂಬ ಚಾನೆಲ್ ಹೊಂದಿದ್ದಾರೆ.

ಕೋಲ್ಕತಾದಲ್ಲಿ ಇತ್ತೀಚೆಗೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಗೂಲಿ ಅವರ ಚಿತ್ರಗಳು ಮತ್ತು ವೀಡಿಯೊಗಳನ್ನು ಸಿನಿಬಾಪ್‌ನಲ್ಲಿ ಬಳಸಿದ್ದಕ್ಕಾಗಿ ಸೈಬರ್ ಬೆದರಿಕೆ ಮತ್ತು ಮಾನಹಾನಿ ಪ್ರಕರಣ ದಾಖಲಿಸಲಾಗಿದೆ. ಗಂಗೂಲಿ ಅವರ ವೀಡಿಯೊ ಮತ್ತು ಚಿತ್ರಗಳ ಬಳಕೆಯಿಂದ ತಮ್ಮ ಪ್ರತಿಷ್ಠೆಗೆ ಹಾನಿಯಾಗಿದೆ ಎಂದು ಹೇಳಿಕೊಂಡಿದ್ದಾರೆ.

ಗಂಗೂಲಿ ಅವರ ಕಾರ್ಯದರ್ಶಿ ತಾನಿಯಾ ಭಟ್ಟಾಚಾರ್ಯ ಅವರು ಯೂಟ್ಯೂಬರ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಸೌರವ್ ಗಂಗೂಲಿ ಅವರ ವೀಡಿಯೊವನ್ನು ಬಳಸಿದ್ದಾರೆ ಮತ್ತು ಅವರಿಗೆ ಮಾನ ಹಾನಿ ಮಾಡಿರುವುದಕ್ಕೆ ಈ ದೂರು ಎಂದಿದ್ದಾರೆ.

“ಮೃಣ್ಮಯ್ ದಾಸ್ ಎಂಬ ವ್ಯಕ್ತಿ ಭಾಗಿಯಾಗಿರುವ ಸೈಬರ್ ಬೆದರಿಕೆ ಮತ್ತು ಮಾನಹಾನಿ ಪ್ರಕರಣವನ್ನು ನಿಮ್ಮ ಗಮನಕ್ಕೆ ತರಲು ನಾನು ಬರೆಯುತ್ತಿದ್ದೇನೆ. ಈ ವ್ಯಕ್ತಿಯು ಸೌರವ್ ಗಂಗೂಲಿಯನ್ನು ಗುರಿಯಾಗಿಸಿಕೊಂಡು ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ನಿಂದನಾತ್ಮಕ ಭಾಷೆ ಬಳಸಿದ್ದಾರೆ/ ಇದು ಅವರ ಪ್ರತಿಷ್ಠೆಗೆ ಹಾನಿಕಾರಕವಾಗಿದೆ” ಎಂದು ಕಾರ್ಯದರ್ಶಿ ತಾನಿಯಾ ಭಟ್ಟಾಚಾರ್ಯ ಬರೆದಿದ್ದಾರೆ.

ಈ ವಿಷಯದಲ್ಲಿ ಸೈಬರ್ ಅಧಿಕಾರಿಗಳು ಸರಿಯಾದ ಮಧ್ಯಪ್ರವೇಶ ಮಾಡಬೇಕು ಮತ್ತು ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಭಟ್ಟಾಚಾರ್ಯ ಕೋರಿದ್ದಾರೆ.

“ವೀಡಿಯೊದ ಸಂದರ್ಭವು ಗಂಗೂಲಿ ಮೇಲಿನ ದಾಳಿ ಮಾತ್ರವಲ್ಲ, ಪ್ರತಿಯೊಬ್ಬ ವ್ಯಕ್ತಿಯ ಘನತೆ ಮತ್ತು ಗೌರವ ಉಲ್ಲಂಘಿಸುತ್ತದೆ. ಈ ವಿಷಯದಲ್ಲಿ ನಿಮ್ಮ ಮಧ್ಯಪ್ರವೇಶ ಮಾಡಬೇಕು. ಗಂಗೂಲಿಯನ್ನು ದೂಷಿಸಿದ್ದಕ್ಕಾಗಿ ಮತ್ತು ಬೆದರಿಸಿದ್ದಕ್ಕಾಗಿ ದಾಸ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೋರುತ್ತೇವೆ. ಸಮಸ್ಯೆಯನ್ನು ಪರಿಹರಿಸಲು ಮತ್ತು ನ್ಯಾಯ ಒದಗಿಸುವುದನ್ನು ಖಚಿತಪಡಿಸಿಕೊಳ್ಳಲು ಸೈಬರ್ ಇಲಾಖೆ ತ್ವರಿತ ಮತ್ತು ಅಗತ್ಯ ಕ್ರಮ ತೆಗೆದುಕೊಳ್ಳುತ್ತದೆ” ಎಂದು ಅವರು ಹೇಳಿದ್ದಾರೆ.

ನಾವು ಇಮೇಲ್ ಸ್ವೀಕರಿಸಿದ್ದೇವೆ ಮತ್ತು ಅದನ್ನು ಪರಿಶೀಲಿಸುತ್ತಿದ್ದೇವೆ” ಎಂದು ಪೊಲೀಸ್ ಅಧಿಕಾರಿ ಟೈಮ್ಸ್ ನೌಗೆ ತಿಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸೈಬರ್ ಬೆದರಿಕೆ ಗಂಭೀರ ಸಮಸ್ಯೆಯಾಗಿ ಬೆಳೆದಿದೆ. ಪ್ರತಿದಿನ ಅನೇಕ ಪ್ರಕರಣಗಳು ದಾಖಲಾಗುತ್ತಿವೆ. ಅವುಗಳನ್ನು ನಿಯಂತ್ರಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ.

ಸೌರವ್ ಗಂಗೂಲಿ ಪ್ರತಿಭಟನೆಯಲ್ಲಿ ಭಾಗಿ

ಕಳೆದ ತಿಂಗಳು, ಸೌರವ್ ಗಂಗೂಲಿ ತಮ್ಮ ಪತ್ನಿ (ಡೋನಾ ಗಂಗೂಲಿ) ಮತ್ತು ಮಗಳು (ಸನಾ ಗಂಗೂಲಿ) ಅವರೊಂದಿಗೆ ಕೋಲ್ಕತ್ತಾದಲ್ಲಿ ಅತ್ಯಾಚಾರ ಘಟನೆ ವಿರೋಧಿಸಿ ಮೇಣದಬತ್ತಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಇದನ್ನೂ ಓದಿ: IPL 2025 : ಐಪಿಎಲ್ ಹರಾಜಿನ ದಿನಾಂಕ, ಸ್ಥಳ ಯಾವುದು, ಮಾಹಿತಿ ನೀಡಿದ ಬಿಸಿಸಿಐ

ಕಳೆದ ತಿಂಗಳು ಕೋಲ್ಕತ್ತಾದ ಆರ್‌,ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ಘಟನೆಯ ಬಗ್ಗೆ ಗಂಗೂಲಿ ನೀಡಿದ ಹೇಳಿಕೆಗಾಗಿ ತೀವ್ರ ಟೀಕೆಗೆ ಗುರಿಯಾಗಿದ್ದರು. ಅವರು ಈ ಹಿಂದೆ ಈ ಅಪರಾಧವನ್ನು ಸಾಮಾನ್ಯ ಘಟನೆ ಎಂಬುದಾಗಿ ಹೇಳಿಕೆ ನೀಡಿದ್ದರು.

ಸೌರವ್ ಗಂಗೂಲಿ ಪ್ರಸ್ತುತ ಡೆಲ್ಲಿ ಕ್ಯಾಪಿಟಲ್ಸ್‌ನಲ್ಲಿ ಕ್ರಿಕೆಟ್ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಿಸಿಸಿಐನ ಮಾಜಿ ಅಧ್ಯಕ್ಷರು ಈಗ ಕೆಲವು ವರ್ಷಗಳಿಂದ ಕ್ಯಾಪಿಟಲ್ಸ್‌ ಪರವಾಗಿ ಆಡುತ್ತಿದ್ದಾರೆ. ಐಪಿಎಲ್ 2025 ಮೆಗಾ ಹರಾಜಿನಲ್ಲಿ ಬಲವಾದ ತಂಡ ರಚಿಸಲು ನೋಡುತ್ತಿದ್ದಾರೆ.