Sunday, 6th October 2024

ಡುಸ್ಸನ್‌- ಕೀಪರ್‌ ಡಿ’ಕಾಕ್ ದ್ವಿಶತಕ ಜತೆಯಾಟ: ಲಂಕೆಗೆ ಸಂಕಟ

ನವದೆಹಲಿ: ಅರುಣ್ ಜೇಟ್ಲಿ ಕ್ರಿಕೆಟ್ ಮೈದಾನದಲ್ಲಿ ಶನಿವಾರ ಐಸಿಸಿ ಪುರುಷರ ಏಕದಿನ ವಿಶ್ವಕಪ್ ಟೂರ್ನಿಯ 4ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ತಂಡಗಳು ಮುಖಾಮುಖಿಯಾಗಿವೆ.

ದಕ್ಷಿಣ ಆಫ್ರಿಕಾ ತಂಡ ಬ್ಯಾಟಿಂಗ್​ ಮಾಡುತ್ತಿದೆ. ನಾಯಕ ತೆಂಬಾ ಬವುಮಾ ಎರಡು ಬೌಂಡರಿ ಬಾರಿಸಿ, ಅಪಾಯಕಾರಿಯಾಗುವ ಸೂಚನೆ ನೀಡಿದರೂ, ತಂಡದ ಮೊತ್ತ ೧೦ ರನ್ ಆಗುವಷ್ಟರಲ್ಲಿ ಔಟಾದರು.

ಬಳಿಕ ವಾನ್ ಡರ್‌ ಡುಸ್ಸನ್‌ ಹಾಗೂ ವಿಕೆಟ್ ಕೀಪರ್‌ ಡಿ’ಕಾಕ್ ಭರ್ಜರಿ 204 ರನ್ನುಗಳ ಜತೆಯಾಟ ನೀಡಿದರು. ಶತಕ ಬಾರಿಸುತ್ತಲೇ ಡಿ’ಕಾಕ್‌ ಔಟಾದರು. ಜತೆಗಾರ ಡುಸ್ಸನ್ ಜತೆಯಾದ ಏಡನ್‌ ಮಾರ‍್ಕ್ರಮ್ ಕೂಡ ಭರ್ಜರಿ ಫಾರ್ಮ್‌ ನಲ್ಲಿದ್ದು, ಬೌಂಡರಿ ಮೂಲಕವೇ ಇನ್ನಿಂಗ್ಸ್ ಆರಂಭಿಸಿದರು.

ಇತ್ತೀಚಿನ ವರದಿ ಪ್ರಕಾರ, ದಕ್ಷಿಣ ಆಫ್ರಿಕಾ ಮೂರು ವಿಕೆಟ್‌ ನಷ್ಟಕ್ಕೆ ೨೬೬ ರನ್ ಗಳಿಸಿದೆ. ಇನ್ನೂ ೧೨ ಓವರು ಆಟ ಬಾಕಿ ಇದ್ದು, ಶ್ರೀಲಂಕಾಗೆ ಭಾರೀ ಸವಾಲು ನೀಡಲಿದೆ. ಶ್ರೀಲಂಕಾ ಪರ ಮಧುಶಂಕಾ, ಪತಿರಾನಾ ಹಾಗೂ ವಲ್ಲಲೆಗೆ ತಲಾ ಒಂದು ವಿಕೆಟ್ ಕಿತ್ತರೂ, ದುಬಾರಿ ಎನಿಸಿದರು.