Wednesday, 9th October 2024

ಮೊದಲ ಗೆಲುವಿನ ಕೇಕೆ ಹಾಕಿದ ಸನ್‌ರೈಸರ‍್ಸ್

ಅಬುಧಾಬಿ: ಶೇಖ್ ಜಾಯೇದ್ ಸ್ಟೇಡಿಯಂನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ದ 13ನೇ ಐಪಿಎಲ್‌ನಲ್ಲಿ ಕಡೆಗೂ ಸನ್‌ರೈಸರ‍್ಸ್ ಹೈದರಾಬಾದ್ ತಂಡ ಗೆಲುವಿನ ನಿಟ್ಟುಸಿರು ಬಿಟ್ಟಿದೆ.

ಟಾಸ್ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಸನ್‌ರೈಸರ‍್ಸ್ ತಂಡ ನಾಲ್ಕು ವಿಕೆಟ್ ನಷ್ಟಕ್ಕೆ 162 ರನ್ ಗಳಿಸಿತು. ಜಾನಿ ಬೇರ್ ಸ್ಟೋ ಅರ್ಧ ಶತಕ ಹಾಗೂ ಡೇವಿಡ್ ವಾರ್ನರ್ ಮತ್ತು ಕೇನ್ ವಿಲಿಯಮ್ಸನ್ ಅವರು ನೀಡಿದ ಕೊಡುಗೆಗಳಿಂದ ತಂಡ ಸವಾಲಿನ ಮೊತ್ತ ಪೇರಿಸಿತು. ಕಗಿಸೋ ರಬಾಡ ನಿಯಂತ್ರಿತ ಬೌಲಿಂಗ್ ಮಾಡಿ, 21 ರನ್ನಿಗೆ ಎರಡು ವಿಕೆಟ್ ಕಿತ್ತರು.
ಜವಾಬು ನೀಡಲಾರಂಭಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ದೀರ್ಘ ಇನ್ನಿಂಗ್ಸ್ ಆಡಲು ಸನ್ರೆöÊರ‍್ಸ್ ತಂಡದ ಸ್ಪಿನ್ನರ್ ರಶೀದ್ ಖಾನ್ ಆಸ್ಪದ ನೀಡಲಿಲ್ಲ. ತನ್ನ ನಾಲ್ಕು ಓವರುಗಳ ಖಾತಾದಲ್ಲಿ ಕೇವಲ 14 ರನ್ ಬಿಟ್ಟುಕೊಟ್ಟು, ಮಹತ್ವ ಪೂರ್ಣ ಮೂರು ವಿಕೆಟ್ ಕಬಳಿಸಿದರು. ಅವು, ಶಿಖರ್ ಧವನ್, ಶ್ರೇಯಸ್ ಅಯ್ಯರ್ ಹಾಗೂ ವಿಕೆಟ್ ಕೀಪರ್ ರಿಷಭ್ ಪಂತ್.  ಕೊನೆಯಲ್ಲಿ ಕಗಿಸೋ ರಬಾಡಾ ಸ್ಪೋಟಕ ಬ್ಯಾಟಿಂಗ್ ನಡೆಸಿದ್ದು, ಗೆಲುವು ದೂರವೇ ಉಳಿಯಿತು.

ಭುವನೇಶ್ವರ್ ಕುಮಾರ್ ಎರಡು, ರಶೀದ್ ಖಾನ್ ಮೂರು ವಿಕೆಟ್ ಕಿತ್ತರು. ವೇಗಿಗಳಾದ ಖಲೀಲ್ ಅಹ್ಮದ್ ಹಾಗೂ ಟಿ.ನಟರಾಜನ್ ತಲಾ ಒಂದು ವಿಕೆಟ್ ಕಬಳಿಸಿ, ಡೆಲ್ಲಿ ತಂಡಕ್ಕೆ ಮೂಗುದಾರ ತೊಡಿಸಿದರು.

ರಶೀದ್ ಖಾನ್ ಸಾಧನೆಗಳು
2020ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ 14/3
2017ರಲ್ಲಿ ಗುಜರಾತ್ ಲೈಯನ್ಸ್ ವಿರುದ್ದ 19/3
2018ರಲ್ಲಿ ಕಿಂಗ್ಸ್ ಎಲೆವೆನ್ ಪಂಜಾಬ್ ವಿರುದ್ದ 19/3
2018ರಲ್ಲಿ ಕೋಲ್ಕತಾ ನೈಟ್ ರೈಡರ‍್ಸ್ ವಿರುದ್ದ 19/3

ಸ್ಕೋರ್ ವಿವರ
ಸನ್‌ರೈರ‍್ಸ್ ಹೈದರಾಬಾದ್ 162/4
ಡೇವಿಡ್ ವಾರ್ನರ್ 45, ಜಾನಿ ಬೇರ್’ಸ್ಟೋ 53, ಕೇನ್ ವಿಲಿಯಮ್ಸನ್ 41.
ಬೌಲಿಂಗ್: ಕಗಿಸೋ ರಬಾಡ 21/2, ಅಮಿತ್ ಮಿಶ್ರಾ 35/2.
ಡೆಲ್ಲಿ ಕ್ಯಾಪಿಟಲ್ಸ್ 147/7
ಶಿಖರ್ ಧವನ್ 34, ರಿಷಭ್ ಪಂತ್ 28, ಶಿಮ್ರೋನ್ ಹೆಟ್ಮೇರ್ 21, ಕಗಿಸೋ ರಬಾಡ 15 ಅಜೇಯ,
ಬೌಲಿಂಗ್: ರಶೀದ್ ಖಾನ್ 14/3, ಭುವನೇಶ್ವರ್ ಕುಮಾರ್ 25/2, ಖಲೀಲ್ ಅಹ್ಮದ್ 43/1, ಟಿ.ನಟರಾಜನ್ ೨೫/೧
ಪಂದ್ಯಶ್ರೇಷ್ಠ: ರಶೀದ್ ಖಾನ್