Wednesday, 11th December 2024

ಅಗ್ರಸ್ಥಾನಿ ಡೆಲ್ಲಿಗೆ ಸನ್‌ರೈಸರ‍್ಸ್‌ ಹೈದರಾಬಾದ್‌ ಸವಾಲು

ಅಬುಧಾಬಿ: ಐಪಿಎಲ್‌ ಕೂಟದ ಮಂಗಳವಾರದ ಮುಖಾಮುಖಿಯಲ್ಲಿ ಎರಡೂ ಪಂದ್ಯ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್‌ ಮತ್ತು ಎರಡ ರಲ್ಲೂ ಸೋತ ಸನ್‌ರೈಸರ್ ಹೈದರಾಬಾದ್‌ ಅಬುಧಾಬಿಯಲ್ಲಿ ಎದುರಾಗಲಿವೆ.

ಶ್ರೇಯಸ್‌ ಅಯ್ಯರ್‌ ಸಾರಥ್ಯದ ಡೆಲ್ಲಿ “ಸೂಪರ್‌’ ಜಯದೊಂದಿಗೆ ತನ್ನ ಅಭಿಯಾನ ಆರಂಭಿಸಿತ್ತು. ಚೆನ್ನೈಗೆ 44 ರನ್ನುಗಳ ಸೋಲುಣಿಸುವಲ್ಲಿ ಯಶಸ್ವಿಯಾಗಿತ್ತು. ಈಗ ಹ್ಯಾಟ್ರಿಕ್‌ ಜಯದ್ದೇ ಗುರಿ. ಸನ್‌ರೈಸರ್ ಹೈದರಾಬಾದ್‌ ಪಾಳೆ ಯದ ಮೇಲೆ ಇನ್ನೂ ಸೋಲಿನ ಕಾರ್ಮೋಡ ಚಾಚಿದೆ.

ಹೈದರಾಬಾದ್‌ ಬ್ಯಾಟಿಂಗ್‌, ಬೌಲಿಂಗ್‌ ವಿಭಾಗಗಳೆರಡರಲ್ಲೂ ವೈಫ‌ಲ್ಯ ಕಾಣುತ್ತಿದೆ. ಆರ್‌ಸಿಬಿ ಎದುರು ಬೇರ್‌ಸ್ಟೊ-ಪಾಂಡೆ ಸಾಹಸದಿಂದ ಗೆಲುವಿನ ಬಾಗಿಲಿನ ತನಕ ಬಂದು ನಾಟಕೀಯ ಕುಸಿತ ಕಂಡು 10 ರನ್ನಿನಿಂದ ಶರಣಾಯಿತು. ಕೆಕೆಆರ್‌ ವಿರುದ್ಧ ಮೊದಲು ಬ್ಯಾಟಿಂಗ್‌ ನಡೆಸಿಯೂ ಬರೀ 142 ರನ್‌ ಗಳಿಸಿ ಸೋಲಿಗೆ ಹಾದಿ ಮಾಡಿಕೊಂಡಿತು.

ಡೆಲ್ಲಿ ವಿರುದ್ಧ ಕೇನ್‌ ವಿಲಿಯಮ್ಸನ್‌ ಆಡುತ್ತಾರೆಂಬುದು ತಂಡದ ಪಾಲಿನ ಸಿಹಿ ಸುದ್ದಿ. ಆದರೆ ಮತ್ತೊಬ್ಬ ವಿದೇಶಿ ಆಟಗಾರ ನನ್ನು ಕೈಬಿಡುವುದೇ ಸಮಸ್ಯೆಯಾಗಿ ಕಾಡಿದೆ. ಇಲ್ಲಿ ಅಫ್ಘಾನ್‌ ಆಲ್‌ರೌಂಡರ್‌ ಮೊಹಮ್ಮದ್‌ ನಬಿ ಜಾಗ ಖಾಲಿ ಮಾಡಬೇಕಾ  ದುದು ಅನಿವಾರ್ಯ. ಭುವನೇಶ್ವರ್‌, ರಶೀದ್‌ ಖಾನ್‌ ಹೊರತಾಗಿ ತಂಡದ ಬೌಲಿಂಗ್‌ ವಿಭಾಗ ತೀರಾ ದುರ್ಬಲ.

ಡೆಲ್ಲಿ ಕ್ಯಾಪಿಟಲ್ಸ್‌ ಈಗಾಗಲೇ ಪಂಜಾಬ್‌ ಮತ್ತು ಚೆನ್ನೈಗೆ ಆಘಾತ ವಿಕ್ಕಿದೆ. ಗಾಯಾಳಾಗಿದ್ದ ಆರ್‌. ಅಶ್ವಿ‌ನ್‌ ವಾಪಸಾದರೆ ಡೆಲ್ಲಿ ಇನ್ನಷ್ಟು ಬಲಿಷ್ಠವಾಗಲಿದೆ.