Wednesday, 11th December 2024

ನೈಟ್ ರೈಡರ‍್ಸ್‌- ಸನ್‌ರೈಸ್ ಸೆಣಸಾಟ: ಮಾರ್ಗನ್ ಪಡೆ ಬ್ಯಾಟಿಂಗ್‌

ಅಬುಧಾಬಿ : ಕೋಲ್ಕತಾ ನೈಟ್ ರೈಡರ‍್ಸ್ ಮತ್ತು ಸನ್‌ರೈಸರ‍್ಸ್ ಹೈದರಾಬಾದ್ ನಡುವಿನ ಸೆಣಸಾಟದಲ್ಲಿ ಟಾಸ್ ಗೆದ್ದ ವಾರ್ನರ್ ಪಡೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.

ಕೆಕೆಆರ್ ಇದುವರೆಗೆ ಆಡಿದ 8 ಪಂದ್ಯದಲ್ಲಿ 4 ಪಂದ್ಯದಲ್ಲಿ ಗೆಲುವು ಸಾಧಿಸಿದ್ದು 4 ರಲ್ಲಿ ಸೋತಿದೆ. ಕಳೆದ ಆವೃತ್ತಿಯಲ್ಲಿ ಮಿಂಚಿದ ರಸ್ಸೆಲ್ ಈ ಬಾರಿ ಬೌಲಿಂಗ್ ನಲ್ಲಿ ಹಿಡಿಯ ಸಾಧಿಸಿದ್ದು, ಸ್ಫೋಟಕವಾಗಿ ಬ್ಯಾಟ್ ಬೀಸಿ ತಂಡಕ್ಕೆ ಆಸರೆಯಾಗುವಲ್ಲಿ ಎಡವಿದ್ದಾರೆ. ಮುಂಬರುವ ಪಂದ್ಯದಲ್ಲಿ ಕೆಕೆಆರ್ ತಂಡಕ್ಕೆ ರಸ್ಸೆಲ್ ಬ್ಯಾಟಿಂಗ್ ನಲ್ಲಿ ಮಿಂಚಿದ್ರೆ ಕೆಕೆಆರ್ ಗೆ ಲಾಭವಾದೀತು. ಕೆಕೆಆರ್ 8 ಅಂಕದೊಂದಿಗೆ ಅಂಕಪಟ್ಟಿಯಲ್ಲಿ 4 ನೇ ಸ್ಥಾನದಲ್ಲಿದೆ.

ವಾರ್ನರ್ ನೇತೃತ್ವದ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೂ ಇದುವರೆಗೆ ಆಡಿದ ಪಂದ್ಯಗಳು ಹೇಳಿಕೊಂಡಷ್ಟು ಖುಷಿ ನೀಡಿಲ್ಲ. ಆಡಿದ 8 ಪಂದ್ಯದಲ್ಲಿ 3 ರಲ್ಲಿ ಗೆಲುವು ಸಾಧಿಸಿದ್ದು 5 ಪಂದ್ಯದಲ್ಲಿ ಸೋತಿದೆ. ಹೈದರಾಬಾದ್ 6 ಅಂಕದೊಂದಿಗೆ 5 ನೇ ಸ್ಥಾನದಲ್ಲಿದೆ.

ಕೋಲ್ಕತಾ ನೈಟ್ ರೈಡರ್ಸ್: ರಾಹುಲ್ ತ್ರಿಪಾಠಿ, ಶುಬ್ಮನ್ ಗಿಲ್, ನಿತೀಶ್ ರಾಣಾ, ದಿನೇಶ್ ಕಾರ್ತಿಕ್ (ಕೀಪರ್), ಇಯೊನ್ ಮಾರ್ಗನ್ (ನಾಯಕ), ಆಂಡ್ರೆ ರಸ್ಸೆಲ್, ಪ್ಯಾಟ್ ಕಮ್ಮಿನ್ಸ್, ಶಿವಂ ಮಾವಿ, ಕುಲದೀಪ್ ಯಾದವ್, ಲಾಕಿ ಫರ್ಗುಸನ್, ವರುಣ್ ಚಕ್ರವರ್ತಿ

ಸನ್ರೈಸರ್ಸ್ ಹೈದರಾಬಾದ್ ಡೇವಿಡ್ ವಾರ್ನರ್ (ನಾಯಕ), ಜಾನಿ ಬೈರ್‌ಸ್ಟೋವ್ (ಕೀಪರ್), ಮನೀಶ್ ಪಾಂಡೆ, ಕೇನ್ ವಿಲಿಯಮ್ಸನ್, ಪ್ರಿಯಮ್ ಗಾರ್ಗ್, ವಿಜಯ್ ಶಂಕರ್, ಅಬ್ದುಲ್ ಸಮದ್, ರಶೀದ್ ಖಾನ್, ಸಂದೀಪ್ ಶರ್ಮಾ, ಟಿ ನಟರಾಜನ್, ಬೆಸಿಲ್ ಥಾಂಪಿ.