Thursday, 12th September 2024

ಟಾಸ್ ಗೆದ್ದ ಶ್ರೀಲಂಕಾ, ಬ್ಯಾಟಿಂಗ್ ಆಯ್ಕೆ

ಕೋಲಂಬೋ: ಶ್ರೀಲಂಕಾ ವಿರುದ್ದದ ಮೂರು ಪಂದ್ಯಗಳ ಏಕದಿನ ಸರಣಿ ಶುಕ್ರವಾರ ಆರಂಭವಾಗಿದೆ. ಸರಣಿಯ ಮೊದಲ ಪಂದ್ಯವು ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯುತ್ತಿದೆ.

ಏಕದಿನ ಸರಣಿಗೆ ಹಿರಿಯ ಆಟಗಾರರಾದ ರೋಹಿತ್ ಶರ್ಮಾ ಜೊತೆಗೆ ಇನ್ನೋರ್ವ ಅನುಭವಿ ಆಟಗಾರ ವಿರಾಟ್ ಕೊಹ್ಲಿ ಕೂಡ ಒಂದು ತಿಂಗಳ ವಿರಾಮದ ಬಳಿಕ ಮತ್ತೊಮ್ಮೆ ಕಣಕ್ಕಿಳಿದಿದ್ದಾರೆ.

ಶ್ರೀಲಂಕಾ ಟಾಸ್ ಗೆದ್ದು, ಬ್ಯಾಟಿಂಗ್ ಮಾಡುತ್ತಿದೆ. ವರದಿ ಪ್ರಕಾರ, ಆತಿಥೇಯ ತಂಡ ಏಳು ವಿಕೆ‌ಟ್ ನಷ್ಟಕ್ಕೆ 201 ರನ್ ಗಳಿಸಿದೆ. ಆರಂಭಿಕ ನಿಸ್ಸಂಕ ಹಾಗೂ ಕೆಳಕ್ರಮಾಂಕದ ದುನಿತ್ ವಲ್ಲಲಗೆ ಅರ್ಧಶತಕ ಬಾರಿಸಿದ್ದು, ತಂಡದ ಮೊತ್ತವನ್ನು 200 ಗಡಿ ದಾಟಿಸಿದರು.

ವಿಶ್ವದ ಮೊದಲ ತಂಡ

1996 ರ ವಿಶ್ವಕಪ್ ವಿಜೇತ ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ ಇಲ್ಲಿಯವರೆಗೆ 168 ODI ಪಂದ್ಯಗಳನ್ನು ಆಡಿದೆ. ಅದರಲ್ಲಿ 99 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಇನ್ನೂ ಇಂದು ನಡೆಯಲಿರುವ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಏನಾದರು ಗೆದ್ದರೆ ಒಂದೇ ತಂಡದ ವಿರುದ್ಧ 100 ಪಂದ್ಯಗಳನ್ನು ಗೆದ್ದ ವಿಶ್ವದ ಮೊದಲ ತಂಡವಾಗಿ ಭಾರತ ಹೊರಹೊಮ್ಮಲಿದೆ.

ಎರಡನೇ ಸ್ಥಾನ ಆಸ್ಟ್ರೇಲಿಯಾ

ಭಾರತ ಹೊರತುಪಡಿಸಿದರೆ ಒಂದೇ ತಂಡದ ವಿರುದ್ಧ ಅತೀ ಹೆಚ್ಚು ಜಯಗಳಿಸಿದ ತಂಡಗಳ ಪಟ್ಟಿಯಲ್ಲಿ ನ್ಯೂಜಿಲೆಂಡ್ ವಿರುದ್ಧ 142 ಏಕದಿನ ಪಂದ್ಯಗಳನ್ನು ಆಡಿರುವ ಆಸ್ಟ್ರೇಲಿಯಾ 96 ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ ಎರಡನೇ ಸ್ಥಾನದಲ್ಲಿದೆ. ಶ್ರೀಲಂಕಾ ವಿರುದ್ಧ 157 ಏಕದಿನ ಪಂದ್ಯಗಳಲ್ಲಿ 93 ಗೆಲುವು ಸಾಧಿಸಿರುವ ಪಾಕಿಸ್ತಾನ ಮೂರನೇ ಸ್ಥಾನದಲ್ಲಿದೆ.

ಒಂದೇ ತಂಡದ ವಿರುದ್ಧ ಅತೀ ಹೆಚ್ಚು ಗೆಲುವು ಸಾಧಿಸಿದ ಟಾಪ್ 5 ದೇಶಗಳಿವು

  • ಶ್ರೀಲಂಕಾ ವಿರುದ್ಧ ಭಾರತ 99 ಗೆಲುವು
  • ನ್ಯೂಜಿಲೆಂಡ್ ವಿರುದ್ಧ ಆಸ್ಟ್ರೇಲಿಯಾ 96 ಗೆಲುವು
  • ಶ್ರೀಲಂಕಾ ವಿರುದ್ಧ ಪಾಕಿಸ್ತಾನ 93 ಗೆಲುವು
  • ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ 88 ಗೆಲುವು
  • ಭಾರತ ವಿರುದ್ಧ ಆಸ್ಟ್ರೇಲಿಯಾ 84 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ.

Leave a Reply

Your email address will not be published. Required fields are marked *