Wednesday, 11th December 2024

ಟೆಸ್ಟ್ ಆರಂಭಿಕ ವಾರ್ನರ್ ಸ್ಥಾನ ತುಂಬಲಿದ್ದಾರೆ ಸ್ಮಿತ್..!

ಮೆಲ್ಬೋರ್ನ್: ಆರಂಭಿಕ ಡೇವಿಡ್ ವಾರ್ನರ್ ನಿವೃತ್ತಿಯಾಗಿದ್ದು, ಆಸೀಸ್ ಟೆಸ್ಟ್ ತಂಡದ ಆರಂಭಿಕನ ಸ್ಥಾನವನ್ನು ಅನುಭವಿ ಸ್ಟೀವನ್ ಸ್ಮಿತ್ ತುಂಬಲಿದ್ದಾರೆ.

ಕ್ಯಾಮರಾನ್ ಗ್ರೀನ್ ಮಧ್ಯಮ ಕ್ರಮಾಂಕದಲ್ಲಿ ಆಡಲಿದ್ದಾರೆ ಎಂದು ಆಸ್ಟ್ರೇಲಿಯಾ ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ಜಾರ್ಜ್ ಬೈಲಿ ಖಚಿತ ಪಡಿಸಿದ್ದಾರೆ.

ಜ.17ರಂದು ತವರಿನಲ್ಲಿ ಆರಂಭವಾಗಲಿರುವ ವೆಸ್ಟ್ ಇಂಡೀಸ್ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಗೆ 13 ಆಟಗಾರರ ತಂಡ ಆಯ್ಕೆ ಮಾಡಲಾಗಿದ್ದು, ಮ್ಯಾಟ್ ರೇನ್‌ಷಾ ಹಾಗೂ ಸ್ಕಾಂಟ್ ಬೊಲ್ಯಾಂಡ್ ವಾಪಸ್ ಆಗಿದ್ದಾರೆ. ಏಕದಿನ ಸರಣಿಗೆ ಪ್ರಮುಖ ವೇಗಿಗಳಾದ ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಸಲ್‌ವುಡ್‌ಗೆ ವಿಶ್ರಾಂತಿ ನೀಡಲಾಗಿದ್ದು, ಸ್ಟೀವನ್ ಸ್ಮಿತ್ ನಾಯಕನಾಗಿ ನೇಮಕಗೊಂಡಿದ್ದಾರೆ.

ಟೆಸ್ಟ್ ತಂಡ: ಪ್ಯಾಟ್ ಕಮ್ಮಿನ್ಸ್ (ನಾಯಕ), ಸ್ಕಾಟ್ ಬೊಲ್ಯಾಂಡ್, ಅಲೆಕ್ಸ್ ಕ್ಯಾರಿ, ಕ್ಯಾಮರಾನ್ ಗ್ರೀನ್, ಜೋಶ್ ಹ್ಯಾಸಲ್‌ವುಡ್, ಟ್ರಾವಿಸ್ ಹೆಡ್, ಉಸ್ಮಾನ್ ಖವಾಜ, ಮಾರ್ನಸ್ ಲಬುಶೇನ್, ನಥಾನ್ ಲ್ಯಾನ್, ಮಿಚೆಲ್ ಮಾರ್ಷ್, ಮ್ಯಾಟ್ ರೇನ್‌ಷಾ, ಸ್ಟೀವನ್ ಸ್ಮಿತ್, ಮಿಚೆಲ್ ಸ್ಟಾರ್ಕ್.

ಏಕದಿನ ತಂಡ: ಸ್ಟೀವನ್ ಸ್ಮಿತ್ (ನಾಯಕ), ಸೀನ್ ಅಬೋಟ್, ನಥಾನ್ ಎಲ್ಲಿಸ್, ಕ್ಯಾಮರಾನ್ ಗ್ರೀನ್, ಆರೋನ್ ಹಾರ್ಡಿ, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಮಾರ್ನಸ್ ಲಬುಶೇನ್, ಗ್ಲೆನ್ ಮ್ಯಾಕ್ಸ್‌ವೆಲ್, ಲಾನ್ಸೆ ಮೊರೀಸ್, ಜಾಯ್ ರಿಚರ್ಡ್‌ಸನ್, ಮ್ಯಾಥ್ಯೂ ಶಾರ್ಟ್, ಆಡಂ ಜಂಪಾ.