Friday, 13th December 2024

ಶುಭ್ಮನ್‌ ಅರ್ಧಶತಕ: ಉಭಯ ತಂಡಗಳ ಸಮಬಲದ ಹೋರಾಟ

ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ದ್ವಿತೀಯ ದಿನದಾಟದ ಅಂತ್ಯಕ್ಕೆ ಭಾರತ ತಂಡ 45 ಓವರುಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 96 ರನ್ ಗಳಿಸಿದೆ.

ಹೊಸ ಆರಂಭಿಕ ಜೋಡಿಯೊಂದಿಗೆ ಕಣಕ್ಕಿಳಿದ ಭಾರತ ತಂಡಕ್ಕೆ ಉತ್ತಮ ಆರಂಭ ಸಿಕ್ಕಿತು. ರೋಹಿತ್- ಗಿಲ್ ಮೊದಲ ವಿಕೆಟ್ ಗೆ 70 ರನ್ ಒಟ್ಟುಗೂಡಿಸಿದರು. ಯುವ ಆಟಗಾರ ಶುಭ್ಮನ್ ಗಿಲ್ ತಮ್ಮ ಮೊದಲ ಅರ್ಧಶತಕ ಬಾರಿಸಿದರು. ಆದರೆ ರೋಹಿತ್ ಶರ್ಮಾ 26 ರನ್ ಗಳಿಸಿ ಔಟಾಗಿ ನಿರಾಸೆ ಮೂಡಿಸಿದರು. ಸದ್ಯ ಪೂಜಾರ (9 ರನ್) ಮತ್ತು ನಾಯಕ ರಹಾನೆ (5 ರನ್) ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದೆ. ಭಾರತ ಸದ್ಯ 242 ರನ್ ಹಿನ್ನಡೆಯಲ್ಲಿದೆ.

ಆಸೀಸ್ ತಂಡ ಮೊದಲ ಇನ್ನಿಂಗ್ಸ್ ನಲ್ಲಿ 105.4 ಓವರ್ ನಲ್ಲಿ 338 ರನ್ ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಭರ್ಜರಿ ಬ್ಯಾಟಿಂಗ್ ನಡೆಸಿದ ಸ್ಮಿತ್ 131 ರನ್ ಗಳಿಸಿದರೆ, ಮಾರ್ನಸ್ ಲಬುಶೇನ್ 91 ರನ್ ಗೆ ಔಟಾಗಿ ಶತಕ ವಂಚಿತರಾದರು.