Sunday, 13th October 2024

ವಿವಾದದ ಸುಳಿಯಲ್ಲಿ ಸುನಿಲ್​ ಗಾವಸ್ಕರ್​

ನವದೆಹಲಿ: ಭಾರತದ ಮಾಜಿ ಆಟಗಾರ ಸುನಿಲ್​ ಗಾವಸ್ಕರ್​ ಅವರು ಇದೀಗ ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ. ಕ್ರಿಕೆಟಿಗ ವಿರಾಟ್​ ಕೊಹ್ಲಿ ವಿರುದ್ಧ ಅಸಭ್ಯ ಪದ ಬಳಕೆ ಮಾಡುವ ಮೂಲಕ ಬಹುತೇಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್‌ 6ನೇ ಪಂದ್ಯದ ವೇಳೆ ಕೆಟ್ಟ ಪದ ಬಳಕೆ ಮಾಡಿರುವ ಗಾವಸ್ಕರ್​ ಅವರನ್ನು ಕಾಮೆಂಟರಿ ಪ್ಯಾನೆಲ್‌ನಿಂದಲೇ ಕಿತ್ತು ಎಸೆಯಿರಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟೀಕಾ ಪ್ರಹಾರ ನಡೆಯುತ್ತಿದೆ.

ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಿನ್ನೆ ನಡೆದ ರಾಯಲ್ ಚಾಲೆಂಜರ್ಸ್-ಕಿಂಗ್ಸ್‌ ಇಲೆವೆನ್ ಪಂಜಾಬ್‌ ನಡುವಿನ ಪಂದ್ಯದಲ್ಲಿ ಕಾಮೆಂಟರಿ ನೀಡುತ್ತಿದ್ದ ಗಾವಸ್ಕರ್​, ಕೊಹ್ಲಿ ಕುರಿತು, ’ಲಾಕ್​ಡೌನ್​ ಸಮಯದಲ್ಲಿ ವಿರಾಟ್ ಕೊಹ್ಲಿ ಅನುಷ್ಕಾ ಶರ್ಮಾ ಚೆಂಡುಗಳ ವಿರುದ್ಧ ಮಾತ್ರ ಅಭ್ಯಾಸ ಮಾಡಿದ್ದಾರ”(ಇನ್ ಹೋನೆ  ಲಾಕ್ಡೌನ್ ಮೇ ತೊ ಅನುಷ್ಕಾ ಕಿ ಗೇಂದೋಂಕಾ ಪ್ರಾಕ್ಟೀಸ್ ಕೀ ಹೈ) ಅಸಭ್ಯ ಕಮೆಂಟ್​ ಮಾಡಿದ್ದಾರೆ.