Friday, 4th October 2024

ಟಿ20 ವಿಶ್ವಕಪ್‌ 2022ಕ್ಕೆ ಕ್ಷಣಗಣನೆ ಆರಂಭ

ಸಿಡ್ನಿ: ಸಿಸಿ ಟಿ20 ವಿಶ್ವಕಪ್‌ 2022ಕ್ಕೆ ಕ್ಷಣಗಣನೆ ಆರಂಭವಾಗಿದೆ. ಅಕ್ಟೋಬರ್ 16ರಂದು ವಿಶ್ವಕಪ್‌ಗೆ ಅಧಿಕೃತ ಚಾಲನೆ ಸಿಗಲಿದ್ದು, ಅದಕ್ಕೂ ಮುನ್ನ 16 ತಂಡದ ನಾಯಕರು ಒಂದೆಡೆ ಸೇರಿದ್ದಾರೆ.

ಟಿ20 ವಿಶ್ವಕಪ್‌ನೊಂದಿಗೆ 16 ತಂಡಗಳ ನಾಯಕರು ಪೋಸ್ ನೀಡಿದ್ದಾರೆ. ಟ್ರೋಫಿ ಬಳಿಯಲ್ಲಿ ಆಸಿಸ್ ನಾಯಕ ಫಿಂಚ್, ಪಾಕ್ ನಾಯಕ ಬಾಬರ್ ಅಜಮ್, ಇಂಗ್ಲೆಂಡ್ ನಾಯಕ ಜಾಸ್ ಬಟ್ಲರ್ ಹಾಗೂ ಕಿವೀಸ್ ನಾಯಕ ಕೇನ್‌ ವಿಲಿಯಮ್ಸನ್ ಕುಳಿತಿದ್ದು, ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಎಡಬದಿಯಲ್ಲಿ ಕುಳಿತಿದ್ದಾರೆ.

ಟ್ರೋಫಿಯೊಂದಿಗಿನ ಫೋಟೋ ಜೊತೆಗೆ ಆತಿಥೇಯ ಆಸ್ಟ್ರೇಲಿಯಾ ತಂಡದ ನಾಯಕ ಆಯರೋನ್ ಫಿಂಚ್ ತೆಗೆದುಕೊಂಡಿ ರುವ ಸೆಲ್ಫಿಯನ್ನು ಕೂಡ ಪೋಸ್ಟ್‌ ಮಾಡಿದ್ದು ‘ಸೆಲ್ಫಿ ಟೈಂ’ ಎಂಬ ಶೀರ್ಷಿಕೆಯನ್ನು ನೀಡಿದೆ.

ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ಹುಟ್ಟುಹಬ್ಬ ಹಿನ್ನಲೆಯಲ್ಲಿ ಎಲ್ಲಾ ಕ್ರಿಕೆಟ್ ತಂಡದ ನಾಯಕರ ಎದುರು ಕೇಕ್ ಕತ್ತರಿಸಿ ಶುಭ ಕೋರಲಾಗಿದೆ. ಬಾಬರ್ ಅಜಮ್ ಅಕ್ಟೋಬರ್ 15ಕ್ಕೆ 28 ವಸಂತಕ್ಕೆ ಕಾಲಿಟ್ಟಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ತಂಡಗಳು ಅ.23ರಂದು ಮುಖಾಮುಖಿಯಾಗುವ ಮೂಲಕ ತಮ್ಮ ವಿಶ್ವಕಪ್‌ ಅಭಿಯಾನ ಆರಂಭಿಸಲಿವೆ.