Tuesday, 10th December 2024

249 ರನ್ ಗಳ ಮುನ್ನಡೆಯಲ್ಲಿ ಟೀಂ ಇಂಡಿಯಾ

ಚೆನ್ನೈ: 2ನೇ ಟೆಸ್ಟ್ ಪಂದ್ಯದ 2ನೇ ದಿನದಾಟ ಅಂತ್ಯವಾಗಿದ್ದು, ಇಂಗ್ಲೆಂಡ್ ವಿರುದ್ಧದ ಭಾರತ ಒಟ್ಟು 249 ರನ್ ಗಳ ಮುನ್ನಡೆ ಸಾಧಿಸಿದೆ.

ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 134 ರನ್ ಗಳಿಗೆ ಆಲೌಟ್ ಮಾಡಿ 195 ರನ್ ಗಳ ಮುನ್ನಡೆಯೊಂದಿಗೆ ಭಾರತ 2ನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ್ದು, 2ನೇ ದಿನದಾಟದ ಅಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 54 ರನ್ ಗಳಿಸಿದೆ. 25 ರನ್ ಗಳಿಸಿರುವ ರೋಹಿತ್ ಶರ್ಮಾ ಮತ್ತು 7ರನ್ ಗಳಿಸಿರುವ ಚೇತೇಶ್ವರ ಪೂಜಾರಾ 3ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.

ರೋಹಿತ್ ಶರ್ಮಾ ಜೊತೆ 2ನೇ ಇನ್ನಿಂಗ್ಸ್ ಆರಂಭಿಸಿದ್ದ ಶುಭ್ ಮನ್ ಗಿಲ್ 14 ರನ್ ಗಳಿಸಿ ಜಾಕ್ ಲೀಚ್ ಗೆ ವಿಕೆಟ್ ಒಪ್ಪಿಸಿದರು.