Wednesday, 11th December 2024

ದ್ವಿತೀಯ ಇನ್ನಿಂಗ್ಸ್’ನಲ್ಲಿ ಹಠಾತ್‌ ಕುಸಿತ ಕಂಡ ಭಾರತ

ಅಡಿಲೇಡ್: ಅಡಿಲೇಡ್‌ ಓವಲ್‌ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಮೊದಲನೇ ಟೆಸ್ಟ್ ಮೊದಲನೇ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಿರುವ ಟೀಮ್ ಇಂಡಿಯಾ ದ್ವಿತೀಯ ಇನ್ನಿಂಗ್ಸ್‌’ನಲ್ಲಿ ಹಠಾತ್‌ ಕುಸಿತ ಕಂಡಿದೆ.

ಭಾರತದ ಯಾವುದೇ ಆಟಗಾರ ಎರಡಂಕಿ ಮೊತ್ತ ದಾಟುವ ಮುನ್ನವೇ ಪೆವಿಲಿಯನ್‌ ಪರೇಡ್‌ ನಡೆಸಿದ್ದು, ಇತ್ತೀಚಿನ ವರದಿ ಪ್ರಕಾರ, ಆರು ವಿಕೆಟ್‌ ನಷ್ಟಕ್ಕೆ ಕೇವಲ 26 ರನ್‌ ಗಳಿಸಿ, ಕೇವಲ 79 ರನ್ನುಗಳ ಮುನ್ನಡೆ ಸಾಧಿಸಿದೆ.

ನಾಯಕ ಕೊಹ್ಲಿ ನಾಲ್ಕು, ಅಗರ್ವಾಲ್‌ 9 ಹೀಗೆ ಸಿಂಗಲ್ ಡಿಜಿಟ್‌ ರನ್‌ ಗಳಿಸಿ, ನಿರಾಸೆಗೊಳಿಸಿದರು. ಆಸೀಸ್‌ ಉಪನಾಯಕ ಪ್ಯಾಟ್‌ ಕಮ್ಮಿನ್ಸ್ ನಾಲ್ಕು ಹಾಗೂ ವೇಗಿ ಜ್ಯಾಸ್ ಹ್ಯಾಜಲ್‌ವುಡ್‌ ಎರಡು ವಿಕೆಟ್ ಕಿತ್ತು, ಆತಿಥೇಯರಿಗೆ ಮೇಲುಗೈ ನೀಡಿದ್ದಾರೆ.

ಬ್ಯಾಟಿಂಗ್‌ ಆಲ್ರೌಂಡರ್‌ ಹನುಮ ವಿಹಾರಿ ಹಾಗೂ ವಿಕೆ‌ಟ್‌ ಕೀಪರ್‌ ವೃದ್ದಿಮಾನ್‌ ಸಹಾ ಬ್ಯಾಟಿಂಗ್‌ ಮುಂದುವರೆಸಿದ್ದಾರೆ.

ಇದಕ್ಕೂ ಮುನನ, ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡಿದ್ದ ಭಾರತ, ಮೊದಲ ಇನ್ನಿಂಗ್ಸ್‌ನಲ್ಲಿ 93.1 ಓವರ್‌ಗೆ 244 ಪೇರಿಸಿ ದ್ದರೆ, ಆಸ್ಟ್ರೇಲಿಯಾ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 72.1 ಓವರ್‌ಗೆ 191 ರನ್ ಗಳಿಸಿ ಹಿನ್ನಡೆ ಅನುಭವಿಸಿತ್ತು. ಶುಕ್ರವಾರ (ಡಿಸೆಂಬರ್ 18) ಎರಡನೇ ದಿನದಾಟದ ಅಂತ್ಯಕ್ಕೆ ದ್ವಿತೀಯ ಇನ್ನಿಂಗ್ಸ್‌ ಆಡುತ್ತಿದ್ದ ಭಾರತ ಆರಂಭಿಕ ಬ್ಯಾಟ್ಸ್‌ಮನ್ ಪೃಥ್ವಿ ಶಾ (4 ರನ್) ವಿಕೆಟ್ ಕಳೆದುಕೊಂಡಿತ್ತು.