Sunday, 6th October 2024

ತೃತೀಯ ಟೆಸ್ಟ್‌ ಪಂದ್ಯಕ್ಕಾಗಿ ಅಭ್ಯಾಸಕ್ಕೆ ಇಳಿದ ಟೀಂ ಇಂಡಿಯಾ

ಸಿಡ್ನಿ: ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯವನ್ನು ಅಮೋಘ ರೀತಿಯಲ್ಲಿ ಗೆದ್ದು, ಸರಣಿ ಸಮಬಲಗೊಳಿಸಿದ ಬಳಿಕ ವಿಶ್ರಾಂತಿಯಲ್ಲಿದ್ದ ಭಾರತದ ಕ್ರಿಕೆಟಿಗರು ತೃತೀಯ ಟೆಸ್ಟ್‌ ಪಂದ್ಯಕ್ಕಾಗಿ ಅಭ್ಯಾಸಕ್ಕೆ ಇಳಿದರು.

ಸಿಡ್ನಿಯಲ್ಲಿ ನಡೆಯುವ ಹೊಸ ವರ್ಷದ ಟೆಸ್ಟ್‌ ಪಂದ್ಯಕ್ಕಾಗಿ ಮೆಲ್ಬರ್ನ್ನಲ್ಲಿ ಅಭ್ಯಾಸ ಸಾಗುತ್ತಿದೆ. ಸೋಮವಾರದ ತನಕ ಎಂಸಿಜಿ ಯಲ್ಲಿ ತಾಲೀಮು ನಡೆಸಲಿರುವ ಕ್ರಿಕೆಟಿಗರು, ಜ.5ರಂದು ಸಿಡ್ನಿ ತಲುಪಲಿದ್ದಾರೆ.

ಕೋಚ್‌ ಆರ್‌. ಶ್ರೀಧರ್‌ ಮಾರ್ಗದರ್ಶನದಲ್ಲಿ ಕ್ರಿಕೆಟಿಗರು ತ್ರೋ ಅಭ್ಯಾಸಕ್ಕೆ ಹೆಚ್ಚಿನ ಅವಧಿಯನ್ನು ಮೀಸಲಿರಿಸಿದರು. ಶುಕ್ರವಾರ ರೋಹಿತ್‌ ಶರ್ಮ ಒಬ್ಬರೇ ಅಭ್ಯಾಸ ಮಾಡಿದ್ದರು. ಶನಿವಾರ ಟೀಮ್‌ ಇಂಡಿಯಾ ಸದಸ್ಯರೆಲ್ಲರೂ ಅಂಗಳದಲ್ಲಿ ಕಾಣಿಸಿ ಕೊಂಡರು.