Wednesday, 11th December 2024

ಆಂಡರ್ಸನ್‌ ದಾಳಿಗೆ ಉದುರಿದ ಭಾರತ

ಲೀಡ್ಸ್:‌ ಇಂಗ್ಲೆಂಡ್‌ ನ ಲೀಡ್ಸ್‌ ಹೆಡಿಂಗ್ಲೇ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡವು ಆಘಾತಕ್ಕೊಳಗಾಗಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ಮೊದಲ ಓವರಿನಲ್ಲೇ ಆಘಾತದ ಅನುಭವವಾಗಿದೆ. ಕಳೆದ ಪಂದ್ಯದ ಹೀರೋ, ಕನ್ನಡಿಗ ಕೆ.ಎಲ್‌.ರಾಹುಲ್‌ ಖಾತೆ ತೆರೆಯದೆ ಔಟಾದರು. ಇಲ್ಲಿಂದ ತನ್ನ ವಿಕೆಟ್‌ ಬೇಟೆ ಆರಂಭಿಸಿದ ವೇಗಿ ಜೇಮ್ಸ್ ಆಂಡರ್‌ಸನ್‌ ಅಗ್ರ ಕ್ರಮಾಂಕದ ಚೇತೇಶ್ವರ ಪೂಜಾರ, ನಾಯಕ ವಿರಾಟ್‌ ಕೊಹ್ಲಿ ವಿಕೆಟ್ ಕಬಳಿಸಿದರು.

ಈ ಆಘಾತದಿಂದ ಚೇತರಿಸಿಕೊಳ್ಳಬೇಕು ಎನ್ನುಷ್ಟರಲ್ಲಿ (ಭೋಜನದ ವಿರಾಮದ ವೇಳೆಗೆ) ರಾಬಿನ್ಸನ್ ಉಪನಾಯಕ ಅಜಿಂಕ್ಯ ರಹಾನೆಯನ್ನು ಕೂಡ ಪೆವಿಲಿ ಯನ್‌ ಅಟ್ಟಿದರು. ರೋಹಿತ್‌ ಶರ್ಮಾ ಬ್ಯಾಟಿಂಗ್‌ ಮುಂದುವರಿಸುತ್ತಿದ್ದಾರೆ. ಭಾರತ ತಂಡ ೨೫.೫ ಓವರುಗಳಲ್ಲಿ ನಾಲ್ಕು ವಿಕೆಟ್‌ ನಷ್ಟಕ್ಕೆ ೫೬ ರನ್‌ ಗಳಿಸಿದೆ.