Wednesday, 11th December 2024

ಮೊದಲ ಪಂದ್ಯದಲ್ಲಿ ಮುಗ್ಗರಿಸಿದ ಟೀಂ ಇಂಡಿಯಾ

ಸಿಡ್ನಿ: ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ಟೀಂ ಇಂಡಿಯಾ ವಿರುದ್ದ 66 ರನ್ನುಗಳ ಜಯ ದಾಖಲಿಸಿದೆ.

ಟಾಸ್‌ ಗೆದ್ದು ಬ್ಯಾಟಿಂಗ್ ಮಾಡಿದ ಆಸೀಸ್‌ಗೆ ಮಾಜಿ ನಾಯಕ ಸ್ಟೀವನ್ ಸ್ಮಿತ್, ನಾಯಕ ಆರನ್ ಫಿಂಚ್ ಹಾಗೂ ಆರಂಭಿಕ ಡೇವಿಡ್ ವಾರ್ನರ್‌ ಅವರ ಸ್ಪೋಟಕ ಆಟ ತಂಡಕ್ಕೆ ಸವಾಲಿನ ಮೊತ್ತ ಪೇರಿಸಲು ನೆರವಾಯಿತು.

ಈ ಸವಾಲನ್ನು ಬೆನ್ನತ್ತಿದ ಟೀಂ ಇಂಡಿಯಾ ಪರ ಆರಂಭಿಕ ಶಿಖರ್‌ ಧವನ್‌ ಮತ್ತು ಆಲ್ರೌಂಡರ್‌ ಹಾರ್ದಿಕ್‌ ಪಾಂಡ್ಯ ಅವರ ಅರ್ಧಶತಕಗಳು ಆಸೀಸ್‌ ಬೌಲಿಂಗಿಗೆ ಪ್ರತಿರೋಧ ಒಡ್ಡಿದರೂ, ಅಂತಿಮ ಓವರುಗಳಲ್ಲಿ ಗೆಲುವು ಆಸೀಓಸ್‌ ಪರ ವಾಲಿತು.

ಆಸೀಸ್‌ ಪರ ಆಡಂ ಜಂಪಾ ನಾಲ್ಕು ವಿಕೆಟ್ ಕಿತ್ತು ಮಿಂಚಿದರು. ಜೋಶ್ ಹ್ಯಾಜಲ್‌ವುಡ್‌ ಆರಂಭ ಆಘಾತ ನೀಡಿದರು. ಕೊನೆ ಯಲ್ಲಿ ಎಂಟು ವಿಕೆಟ್‌ ಕಳೆದುಕೊಂಡು 308 ರನ್ನು ಗಳಿಸಿ, ಸೋಲೊಪ್ಪಿಕೊಂಡಿತು.

ಐಪಿಎಲ್‌ ಲೀಗ್‌ನಲ್ಲಿ ಮಿಂಚದ ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ, ಆಸೀಸ್‌ ಎದುರು ಕೂಡ ದೀರ್ಘ ಇನ್ನಿಂಗ್ಸ್ ಬೆಳೆಸಲು ವಿಫಲರಾದರು. ಶತಕವೀರ ಸ್ಟೀವನ್ ಸ್ಮಿತ್‌ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾದರು.