Friday, 13th December 2024

ಲತಾ ಅವರ ಮಧುರ ಧ್ವನಿ ವಿಶ್ವದಾದ್ಯಂತ ಲಕ್ಷಾಂತರ ಜನರನ್ನು ಮುಟ್ಟಿದೆ: ವಿರಾಟ್‌ ಕೊಹ್ಲಿ

ಕೊಹ್ಲಿ, ಧವನ್‌, ಸೆಹ್ವಾಗ್‌ ಸಂತಾಪ

ನವದೆಹಲಿ: ʼಭಾರತ ರತ್ನʼ ಪುರಸ್ಕೃತೆ, ಗಾಯಕಿ ಲತಾ ಮಂಗೇಶ್ಕರ್‌ ನಿಧನಕ್ಕೆ ಪ್ರಪಂಚದಾದ್ಯಂತ ಇರುವ ಅವರ ಅಭಿಮಾನಿಗಳು, ರಾಜಕೀಯ ನಾಯಕರು ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಕಂಬನಿ ಮಿಡಿದಿದ್ದಾರೆ.

ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿ ಟ್ವಿಟರ್‌ ಮೂಲಕ ಸಂತಾಪ ಸೂಚಿಸಿದ್ದು, ಲತಾ ಮಂಗೇಶ್ಕರ್ ಅವರ ಮಧುರ ಧ್ವನಿಯು ವಿಶ್ವದಾದ್ಯಂತ ಲಕ್ಷಾಂತರ ಜನರನ್ನು ಮುಟ್ಟಿದೆ ಎಂದು ಬರೆದುಕೊಂಡಿದ್ದಾರೆ.

ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್‌ ಅವರು, ಹೃದಯ ಪೂರ್ವಕ ಸಂತಾಪಗಳನ್ನು ತಿಳಿಸಿದ್ದಾರೆ.ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ. ನಿಮ್ಮ ಪರಂಪರೆಯು ಮುಂದಿನ ತಲೆಮಾರುಗಳಿಗೆ ಪ್ರೋತ್ಸಾಹ ನೀಡಲಿದೆ ಎಂದು ಶಿಖರ್‌ ಧವನ್‌ ಟ್ವೀಟ್ ಮಾಡಿದ್ದಾರೆ.

ಕೋವಿಡ್-19 ಹಾಗೂ ನ್ಯೂಮೋನಿಯಾ ದೃಢಪಟ್ಟ ಹಿನ್ನೆಲೆಯಲ್ಲಿ‌, ಲತಾ ಮಂಗೇಶ್ಕರ್‌ ಅವರನ್ನು ಜನವರಿ 8ರಂದು ಮುಂಬೈನ ಆಸ್ಪತ್ರೆಯೊಂದಕ್ಕೆ ದಾಖಲಿಸಿ, ತುರ್ತು ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ನೀಡಲಾಗುತ್ತಿತ್ತು. ಕೋವಿಡ್‌ನಿಂದ ಚೇತರಿಸಿಕೊಂಡಿದ್ದರಾದರೂ, ಶನಿವಾರ ಅವರ ಆರೋಗ್ಯ ಸ್ಥಿತಿ ಬಿಗಡಾಯಿಸಿದ್ದರಿಂದ ಅವರಿಗೆ ವೆಂಟಿಲೇಟರ್‌ ನೆರವು ನೀಡಲಾಗಿತ್ತು.