Friday, 13th December 2024

ಟೀಂ ಇಂಡಿಯಾ ಏಕದಿನ ತಂಡ ಪ್ರಕಟ: ಸೂರ್ಯಕುಮಾರ್ ಯಾದವ್‌, ಪ್ರಸಿದ್ ಕೃಷ್ಣ, ಕೃನಾಲ್ ಪಾಂಡ್ಯಗೆ ಕರೆ

ಮುಂಬೈ: ಪ್ರಸಕ್ತ ನಡೆಯುತ್ತಿರುವ ಟಿ20 ಸರಣಿಯ ನಾಲ್ಕನೇ ಪಂದ್ಯ ಕಳೆದ ಗುರುವಾರ ಮುಗಿದಿದ್ದು, ಸರಣಿ ಸಮಬಲದಲ್ಲಿದೆ. ಇದರ ಬೆನ್ನಲ್ಲೇ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಗೆ ತಂಡವನ್ನು ಬಿಸಿಸಿಐ ಪ್ರಕಟಿಸಿದೆ.

18 ಮಂದಿಯ ತಂಡವನ್ನು ಪ್ರಕಟಿಸಲಾಗಿದ್ದು, ವಿರಾಟ್ ಕೊಹ್ಲಿ ತಂಡವನ್ನು ಮುನ್ನಡೆಸಿದರೆ, ರೋಹಿತ್ ಉಪನಾಯಕ ನಾಗಿರಲಿದ್ದಾರೆ. ಈ ಬಾರಿ ಕರ್ನಾಟಕದ ಯುವ ಬೌಲರ್, ಐಪಿಎಲ್ ನಲ್ಲಿ ಕೆಕೆಆರ್ ಪರ ಆಡುವ ವೇಗಿ ಪ್ರಸಿದ್ ಕೃಷ್ಣ ಆಯ್ಕೆ ಯಾಗಿದ್ದಾರೆ. ಇವರ ಜೊತೆ ಸ್ಪಿನ್ನರ್ ಕೃನಾಲ್ ಪಾಂಡ್ಯ ಕರೆ ಪಡೆದಿದ್ದಾರೆ. ವೇಗಿ ಭುನವೇಶ್ವರ್ ಕುಮಾರ್, ನಟರಾಜನ್ ಮತ್ತೆ ಮರಳಿದ್ದಾರೆ.

ನಾಲ್ಕನೇ ಟಿ20 ಪಂದ್ಯದಲ್ಲಿ ಮಿಂಚಿದ ಸೂರ್ಯಕುಮಾರ್ ಯಾದವ್ ರನ್ನೂ ಏಕದಿನ ತಂಡಕ್ಕೆ ಆಯ್ಕೆ ಮಾಡಲಾಗಿದೆ. ರಿಷಭ್ ಪಂತ್ ಮೊದಲ ಆಯ್ಕೆಯ ಕೀಪರ್ ಆದರೆ, ಕನ್ನಡಿಗ ಕೆ.ಎಲ್.ರಾಹುಲ್ ದ್ವಿತೀಯ ಆಯ್ಕೆಯ ಕೀಪರ್ ಆಗಿ ಆಯ್ಕೆಯಾಗಿದ್ದಾರೆ.

ಮೂರು ಪಂದ್ಯಗಳು ಕ್ರಮವಾಗಿ ಮಾ.23, ಮಾ.26 ಮತ್ತು ಮೂರನೇ ಪಂದ್ಯ ಮಾ.28ರಂದು ನಡೆಯಲಿದೆ. ಮೂರು ಪಂದ್ಯಗಳು ಪುಣೆಯಲ್ಲಿ ನಡೆಯಿದೆ.

ತಂಡ: ವಿರಾಟ್ ಕೊಹ್ಲಿ (ನಾ) ರೋಹಿತ್ ಶರ್ಮಾ, ಶಿಖರ್ ಧವನ್, ಶುಬ್ಮನ್ ಗಿಲ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್ (ವಿ.ಕೀ), ಕೆ.ಎಲ್. ರಾಹುಲ್ (ವಿ.ಕೀ), ಯುಜುವೇಂದ್ರ ಚಹಲ್, ಕುಲದೀಪ್ ಯಾದವ್, ಕೃನಾಲ್ ಪಾಂಡ್ಯ,ವಾಷಿಂಗ್ಟನ್ ಸುಂದರ್, ಟಿ ನಟರಾಜನ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಸಿರಾಜ್, ಪ್ರಸಿದ್ ಕೃಷ್ಣ, ಶಾರ್ದುಲ್ ಠಾಕೂರ್.

ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್‌ ಬುಕ್‌ ಪೇಜ್‌ ಲೈಕ್‌ ಮಾಡಿ

https://www.facebook.com/Vishwavanidaily