Friday, 13th December 2024

ಟೀಂ ಇಂಡಿಯಾದ ಮುಖ್ಯ ಆಯ್ಕೆಗಾರರ ಹುದ್ದೆ: ಮುಂಚೂಣಿಯಲ್ಲಿ ಅಗರ್ಕರ್

ನವದೆಹಲಿ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯಲ್ಲಿ ಟೀಂ ಇಂಡಿಯಾದ ಮುಖ್ಯ ಆಯ್ಕೆಗಾರರ ಹುದ್ದೆ ಖಾಲಿ ಇದೆ.

ಜುಲೈ 1ರಂದು ಸಂದರ್ಶನದ ಬಳಿಕ ನೂತನ ಮುಖ್ಯ ಆಯ್ಕೆಗಾರರ ​​ಹೆಸರನ್ನು ಪ್ರಕಟ ಗೊಳ್ಳಲಿದೆ. ಈ ಹುದ್ದೆಗೆ ಭಾರತದ ಮಾಜಿ ವೇಗದ ಬೌಲರ್ ಅಜಿತ್ ಅಗರ್ಕರ್ ಹೆಸರು ಕೇಳಿ ಬರುತ್ತಿದೆ. ಹಿರಿಯ ಆಯ್ಕೆ ಸಮಿತಿಯ ಅಧ್ಯಕ್ಷ ಸ್ಥಾನದ ರೇಸ್‌ ನಲ್ಲಿರುವ ಭಾರತದ ಮಾಜಿ ಆಟಗಾರ ಅಜಿತ್ ಅಗರ್ಕರ್ ಅವರು ದೆಹಲಿ ಕ್ಯಾಪಿಟಲ್ಸ್‌ನ ಸಹಾಯಕ ಕೋಚ್ ಹುದ್ದೆಗೆ ರಾಜೀನಾಮೆ ನೀಡಿ ದ್ದಾರೆ.

ಅಗರ್ಕರ್ ಅವರು ಡೆಲ್ಲಿ ಕ್ಯಾಪಿಟಲ್ಸ್‌ನ ಕೋಚಿಂಗ್ ಸ್ಟಾಫ್‌ನ ಸದಸ್ಯರಾಗಿದ್ದರು. ಅಗರ್ಕರ್ ಜೊತೆಗೆ ಆಸ್ಟ್ರೇಲಿಯಾದ ಮಾಜಿ ಆಲ್ ರೌಂಡರ್ ಶೇನ್ ವ್ಯಾಟ್ಸನ್ ಕೂಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ದೆಹಲಿ ಫ್ರಾಂಚೈಸಿ ತಿಳಿಸಿದೆ.

ಮಾಜಿ 45 ವರ್ಷದ ವೇಗದ ಬೌಲರ್ ಅಗರ್ಕರ್ 26 ಟೆಸ್ಟ್, 191 ಏಕದಿನ ಮತ್ತು 4 T20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.

ಈ ಹಿಂದೆ ಚೇತನ್ ಶರ್ಮಾ ಮುಖ್ಯ ಆಯ್ಕೆಗಾರರಾಗಿ ಕೆಲಸ ಮಾಡುತ್ತಿದ್ದರು. ಆದರೆ ಅವರ ಕುಟುಕು ಕಾರ್ಯಾಚರಣೆಯ ವಿಡಿಯೋವೊಂದು ಕಣ್ಣಮುಂದೆ ಬಂತು. ಬಳಿಕ ಅವರು ರಾಜೀನಾಮೆ ನೀಡಬೇಕಾಯಿತು. ಅಂದಿನಿಂದ ಶಿವಸುಂದರ್ ದಾಸ್ ಅವರು ಹಂಗಾಮಿ ಮುಖ್ಯ ಆಯ್ಕೆಗಾರರ ​​ಜವಾ ಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ.

ಪ್ರಸ್ತುತ ಅಧ್ಯಕ್ಷರಿಗೆ 1 ಕೋಟಿ ರೂ., ಆಯ್ಕೆದಾರರಿಗೆ ತಲಾ 90 ಲಕ್ಷ ರೂ.. ಆದರೆ ದೆಹಲಿಯ ಸಹಾಯಕ ಕೋಚ್ ಮತ್ತು ಕಾಮೆಂಟೇಟರ್ ಆಗಿ ಅಗರ್ಕರ್ ಅದಕ್ಕಿಂತ ಹೆಚ್ಚು ಗಳಿಸುತ್ತಾರೆ.

 
Read E-Paper click here