ನವದೆಹಲಿ: ಸ್ವೀಡನ್ ನ ಥಾಮಸ್ ಡೆನ್ನರ್ ಬೈ ಅವರು ಭಾರತದ ಮಹಿಳಾ ಫುಟ್ಬಾಲ್ ತಂಡದ ಮುಖ್ಯ ತರಬೇತುದಾರರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
62 ವರ್ಷದ ಡೆನ್ನರ್ ಬಿ ಈ ಹಿಂದೆ ಭಾರತದ 17 ವರ್ಷದೊಳಗಿನ ಮಹಿಳೆಯರ ವಿಶ್ವ ಕಪ್ ತಂಡದ ತರಬೇತುದಾರರಾಗಿದ್ದರು. ಮುಂದಿನ ವರ್ಷ ನಡೆಯಲಿರುವ ಎಎಫ್ ಸಿ ಏಷ್ಯಾ ಕಪ್ ಟೂರ್ನಿಗೆ ಸಜ್ಜುಗೊಳ್ಳಲು ಮಹಿಳಾ ತಂಡಕ್ಕೆ ನೆರವಾಗುತ್ತಿದ್ದಾರೆ. ಮಹಿಳಾ ತಂಡದ ತರಬೇತುದಾರ ಹುದ್ದೆಗೆ ಆಯ್ಕೆ ಮಾಡಿರುವುದಕ್ಕೆ ಅಖಿಲ ಭಾರತ ಫುಟ್ ಬಾಲ್ ಫೆಡರೇಷನ್ ಗೆ ಕೃತಜ್ಞನಾಗಿರುತ್ತೇನೆ ಎಂದು ಡೆನ್ನರ್ ಬಿ ಹೇಳಿರುವುದಾಗಿ ಎಐಎಫ್ ಎಫ್ ಹೇಳಿಕೆಯಲ್ಲಿ ತಿಳಿಸಿದೆ.
ಮಹಿಳಾ ತಂಡವನ್ನು ಎಎಫ್ ಸಿ ಮಹಿಳಾ ಏಷ್ಯಾ ಕಪ್ ಗೆ ತಯಾರಿ ಮಾಡುವುದು ಸವಾಲಾಗಿದೆ ಅವರು ಹೇಳಿದ್ದಾರೆ. ಡೆನ್ನರ್ ಬಿ ಮೂವತ್ತು ವರ್ಷಗಳ ಅನುಭವ ಹೊಂದಿದ್ದು, ಹಲವು ರಾಷ್ಟ್ರೀಯ ತಂಡಗಳಿಗೆ ತರಬೇತಿ ನೀಡಿದ್ದಾರೆ.