Wednesday, 11th December 2024

ಬ್ಯಾಟಿಂಗ್ ಆಯ್ದುಕೊಂಡ ವೆಲಾಸಿಟಿ

ಶಾರ್ಜಾ: ಮಹಿಳಾ ಟಿ೨೦ ಚಾಲೆಂಜರ್ಸ್‌ ಟೂರ್ನಿಯ ಎರಡನೇ ಪಂದ್ಯದಲ್ಲಿ ಟ್ರೇಲ್ ಬ್ಲೇಜರ್ಸ್‌ ತಂಡದ ವಿರುದ್ಧ ಟಾಸ್ ಗೆದ್ದಿರುವ ವೆಲಾಸಿಟಿ ಬ್ಯಾಟಿಂಗ್ ಆಯ್ದುಕೊಂಡಿದೆ.

ಟೂರ್ನಿಯ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿರುವ ಮಿಥಾಲಿ ರಾಜ್ ನೇತೃತ್ವದ ವೆಲೋಸಿಟಿ, ಜಯದ ಓಟ ಮುಂದು ವರಿಸುವ ವಿಶ್ವಾಸದಲ್ಲಿದೆ.

ಮಹಿಳಾ ಕ್ರಿಕೆಟ್‌ನ ಬೌಲಿಂಗ್‌ನಲ್ಲಿ ದಾಖಲೆಗಳ ಒಡತಿಯಾಗಿರುವ ಜೂಲನ್ ಗೊಸ್ವಾಮಿ ಹಾಗೂ ಯುವ ಆಟಗಾರ್ತಿ ಸ್ಮೃತಿ ಮಂದಾನ ಬ್ಲೇಜರ್ಸ್‌ ಪಡೆಯಲ್ಲಿದ್ದಾರೆ. ದೀಪ್ತಿ ಶರ್ಮಾ, ಪೂನಂ ರಾವತ್ ಮತ್ತು ರಾಜೇಶ್ವರಿ ಗಾಯಕವಾಡ್ ಅವರ ಬಲವೂ ಆ ತಂಡಕ್ಕೆ ಇದೆ.

ಕರ್ನಾಟಕದ ವೇದಾ ಕೃಷ್ಣಮೂರ್ತಿ, ವಿಕೆಟ್ ಕೀಪರ್ ಸುಷ್ಮಾ ವರ್ಮಾ, ಶಫಾಲಿ ವರ್ಮಾ ಅವರು ಮಿಂಚುವ ಭರವಸೆಯಲ್ಲಿ ದ್ದಾರೆ.

ವೆಲೋಸಿಟಿ: ಮಿಥಾಲಿ ರಾಜ್ (ನಾಯಕಿ), ವೇದಾ ಕೃಷ್ಣಮೂರ್ತಿ, ಶಫಾಲಿ ವರ್ಮಾ, ಸುಷ್ಮಾ ವರ್ಮಾ (ವಿಕೆಟ್ ಕೀಪರ್), ಏಕ್ತಾ ಬಿಷ್ಠ್, ಶಿಖಾ ಪಾಂಡೆ, ದಿವ್ಯದರ್ಶಿನಿ, ಲೇಗ್ ಕಾಸ್ಪರೇಕ್, ಡ್ಯಾನಿ ವ್ಯಾಟ್, ಸೂನ್ ಲೂಜ್, ಜಹನಾರ ಆಲಂ.

ಟ್ರೇಲ್ ಬ್ಲೇಜರ್ಸ್‌: ಸ್ಮೃತಿ ಮಂದಾನ (ನಾಯಕಿ), ದೀಪ್ತಿ ಶರ್ಮಾ, ರಿಚಾ ಘೋಷ್, ದಯಾಳನ್ ಹೇಮಲತಾ, ರಾಜೇಶ್ವರಿ ಗಾಯಕವಾಡ್, ಹರ್ಲೀನ್ ಡಿಯಾಲ್, ಜೂಲನ್ ಗೋಸ್ವಾಮಿ, ಸಲ್ಮಾ ಖಾತುನ್, ಸೋಫಿ ಎಕ್ಲೆಸ್ಟೊನ್, ನಾಟಕನ್ ಚಂತಂ, ದಿಯಾಂದ್ರ ದೊತಿನ್.