Wednesday, 11th December 2024

ಭಾರತದ ಟಿಟಿ ಆಟಗಾರ ರಸ್ತೆ ಅಪಘಾತದಲ್ಲಿ ಸಾವು

ಶಿಲ್ಲಾಂಗ್: 83ನೇ ಸೀನಿಯರ್ ರಾಷ್ಟ್ರೀಯ ಮತ್ತು ಅಂತರ ರಾಜ್ಯ ಚಾಂಪಿಯನ್‌ ಶಿಪ್‌ನಲ್ಲಿ ಭಾಗವಹಿಸಲು ಶಿಲ್ಲಾಂಗ್‌ಗೆ ತೆರಳುತ್ತಿದ್ದ ಭಾರತದ ಟೇಬಲ್ ಟೆನಿಸ್ ಆಟಗಾರ ತಮಿಳುನಾಡಿನ ವಿಶ್ವ ದೀನದಯಾಳನ್ ಭಾನುವಾರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಮೂವರು ಸಹ ಆಟಗಾರರೊಂದಿಗೆ ಗುವಾಹಟಿಯಿಂದ ಶಿಲ್ಲಾಂಗ್‌ಗೆ ಕಾರಿನಲ್ಲಿ ಪ್ರಯಾ ಣಿಸುತ್ತಿದ್ದಾಗ ಎದುರು ದಿಕ್ಕಿನಿಂದ ಬರುತ್ತಿದ್ದ ಟ್ರೈಲರ್ ರಸ್ತೆ ವಿಭಜಕವನ್ನು ದಾಟಿ ಶಾಂಗ್‌ಬಾಂಗ್ಲಾದಲ್ಲಿ ಕಾರಿಗೆ ಢಿಕ್ಕಿ ಹೊಡೆದು ಕಮರಿಗೆ ಧುಮುಕಿತು.

ಟೇಬಲ್ ಟೆನಿಸ್ ಫೆಡರೇಶನ್ ಆಫ್ ಇಂಡಿಯಾ ಬಿಡುಗಡೆ ಮಾಡಿದ ಪ್ರಕಟಣೆಯ ಪ್ರಕಾರ, ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದರೆ, ದೀನದಯಾಳನ್ ಕೂಡ ಮೃತಪಟ್ಟಿರುವು ದನ್ನು ನಾಂಗ್‌ಪೋಹ್ ಸಿವಿಲ್ ಆಸ್ಪತ್ರೆಯ ವೈದ್ಯರು ಘೋಷಿಸಿದ್ದಾರೆ.

ಸಹ ಆಟಗಾರರಾದ ರಮೇಶ್ ಸಂತೋಷ್ ಕುಮಾರ್, ಅಬಿನಾಶ್ ಪ್ರಸನ್ನಜಿ ಶ್ರೀನಿ ವಾಸನ್ ಮತ್ತು ಕಿಶೋರ್ ಕುಮಾರ್ ತೀವ್ರವಾಗಿ ಗಾಯಗೊಂಡಿದ್ದಾರೆ.

ದೀನದಯಾಳನ್ ಅವರ ತಂದೆ ಮತ್ತು ಅವರ ಇಬ್ಬರು ಕುಟುಂಬ ಸದಸ್ಯರು ಗುವಾಹಟಿಗೆ ಆಗಮಿಸಲಿದ್ದು, ಅವರ ಶವವನ್ನು ಸೋಮ ವಾರ ಚೆನ್ನೈಗೆ ಕೊಂಡೊಯ್ಯಲಾಗುವುದು.

ಅಣ್ಣಾನಗರದಲ್ಲಿರುವ ಕೃಷ್ಣಸ್ವಾಮಿ ಟಿಟಿ ಕ್ಲಬ್‌ನಳ್ಳಿ ತರಬೇತು ಪಡೆದ ಕೆಡೆಟ್ ಮತ್ತು ಸಬ್ ಜೂನಿಯರ್ ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿದ್ದರು.