ಕೊಲಂಬೊ: ಶ್ರೀಲಂಕಾದ ಅನುಭವಿ ಆರಂಭಿಕ ಬ್ಯಾಟ್ಸ್’ಮನ್ ಉಪುಲ್ ತರಂಗ ಅವರು ಕ್ರಿಕೆಟ್ ವೃತ್ತಿಜೀವನಕ್ಕೆ ತೆರೆ ಎಳೆದಿದ್ದಾರೆ. ಅನುಭವಿ ಆಟಗಾರ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ.
ಉಪುಲ್ ತರಂಗ ನಾಯಕನಾಗಿ ಶ್ರೀಲಂಕಾ ತಂಡವನ್ನು ಸ್ವಲ್ಪ ಸಮಯ ಮುನ್ನಡೆಸಿದ್ದರು. 2017ರ ಜುಲೈನಿಂದ ನವೆಂಬರ್‌ವರೆಗೆ ನಾಯಕನಾಗಿ ತಂಡದ ಚುಕ್ಕಾಣಿ ಹಿಡಿದಿದ್ದ ತರಂಗ 2019ರಲ್ಲಿ ದಕ್ಷಿಣ ಆಫ್ರಿಕ ಪ್ರವಾಸದಲ್ಲಿ ಕೊನೆಯ ಬಾರಿಗೆ ರಾಷ್ಟ್ರೀಯ ತಂಡ ವನ್ನು ಪ್ರತಿನಿಧಿಸಿದ್ದರು.
ತರಂಗ ಶ್ರೀಲಂಕಾ ಪರ 31 ಟೆಸ್ಟ್‌ಗಳನ್ನು ಆಡಿದ್ದು, ಮೂರು ಶತಕ ಮತ್ತು ಎಂಟು ಅರ್ಧಶತಕಗಳನ್ನು ಒಳಗೊಂಡಂತೆ 21.89 ಸರಾಸರಿಯಲ್ಲಿ 1,754 ರನ್ ಗಳಿಸಿದ್ದಾರೆ.
2005ರ ಡಿಸೆಂಬರ್‌ನಲ್ಲಿ ಅಹಮದಾಬಾದ್‌ನಲ್ಲಿ ಭಾರತ ವಿರುದ್ಧ ಚೊಚ್ಚಲ ಟೆಸ್ಟ್, 2017ರಲ್ಲಿ ಪಲ್ಲೆಕೆಲೆ ನಲ್ಲಿ ಭಾರತದ ವಿರುದ್ಧ ತಮ್ಮ ಕೊನೆಯ ಪಂದ್ಯ ಆಡಿದ್ದರು. ಎಡಗೈ ಬ್ಯಾಟ್ಸ್‌ಮನ್ ತರಂಗ ಏಕದಿನ ಪಂದ್ಯ ಗಳಲ್ಲಿ ಹೆಚ್ಚಿನ ಯಶಸ್ಸನ್ನು ಕಂಡಿದ್ದು, ಆಗಸ್ಟ್ 2005ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಚೊಚ್ಚಲ ಪಂದ್ಯದ ನಂತರ ಆಡಿದ 235 ಪಂದ್ಯಗಳಲ್ಲಿ 33.74 ಸರಾಸರಿಯಲ್ಲಿ 6,951 ರನ್ ಗಳಿಸಿದ್ದಾರೆ.
ಏಕದಿನ ವೃತ್ತಿಜೀವನದಲ್ಲಿ 15 ಶತಕಗಳು ಮತ್ತು 37 ಅರ್ಧಶ ತಕಗಳನ್ನು ದಾಖಲಿಸಿದ್ದಾರೆ. ಗರಿಷ್ಠ ವೈಯಕ್ಕಿಕ ಸ್ಕೋರ್ 174. ತರಂಗ ಶ್ರೀಲಂಕಾ ಪರ 26 ಟ್ವೆಂಟಿ-20 ಪಂದ್ಯಗಳನ್ನು ಆಡಿದ್ದಾರೆ. ಅತ್ಯುತ್ತಮ ಸ್ಕೋರ್ 47. ಒಟ್ಟು 407 ರನ್ ಗಳಿಸಿದ್ದಾರೆ.