Friday, 13th December 2024

ಅಮೆರಿಕಾದ ಬಾಕ್ಸಿಂಗ್ ತಾರೆ ಲಿಯಾನ್ ಸ್ಪಿಂಕ್ಸ್ ನಿಧನ

ನ್ಯೂಯಾರ್ಕ್: ವಿಶ್ವ ಹೆವಿವೇಟ್‌ ಪ್ರಶಸ್ತಿ(1978) ಗಾಗಿ ಮೊಹಮ್ಮದ್ ಅಲಿಯನ್ನು ಸೋಲಿಸಿ ಬಾಕ್ಸಿಂಗ್ ಜಗತ್ತನ್ನು ಅಚ್ಚರಿ ಗೊಳಿಸಿದ ಲಿಯಾನ್ ಸ್ಪಿಂಕ್ಸ್ ನಿಧನರಾದರು. ಅವರಿಗೆ 67 ವರ್ಷ ವಯಸ್ಸಾಗಿತ್ತು.

ಐದು ವರ್ಷಗಳಿಂದ ಪ್ರಾಸ್ಟೇಟ್ ಮತ್ತು ಇತರ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಸ್ಪಿಂಕ್ಸ್, ಅಮೆರಿಕಾದ ಬಾಕ್ಸಿಂಗ್ ತಾರೆ ಎನಿಸಿಕೊಂಡಿದ್ದರು. 1976 ರ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗಳಿಸಿಕೊಂಡಿದ್ದ ಸ್ಪಿಂಕ್ಸ್, ಫೆಬ್ರವರಿ 1978 ರಂದು ಅಲಿ ವಿರುದ್ಧ ಅಖಾಡಕ್ಕೆ ಕಾಲಿಟ್ಟಾಗ ಎಲ್ಲರಿಗೂ ಅಚ್ಚರಿಯಾಗಿತ್ತು. ಆ ಪಂದ್ಯದಲ್ಲಿ ಅಲಿಯಿಂದ ರಿಂಗ್‌ನಲ್ಲಿ ಪ್ರಶಸ್ತಿಯನ್ನು ಪಡೆದ ಏಕೈಕ ಹೋರಾಟಗಾರನೆನಿಸಿದ್ದ ಸ್ಪಿಂಕ್ಸ್‌ ಖ್ಯಾತಿ ಉತ್ತುಂಗಕ್ಕೇರಿತ್ತು.

ಸ್ಪಿಂಕ್ಸ್ ಹಾಲ್ ಆಫ್ ಫೇಮ್ ಮಾಜಿ ಹೆವಿವೇಯ್ಟ್ ಮತ್ತು ಲೈಟ್ ಹೆವಿವೇಯ್ಟ್ ಚಾಂಪಿಯನ್ ಮೈಕೆಲ್ ಸ್ಪಿಂಕ್ಸ್ ಅವರ ಸಹೋದರ ಮತ್ತು ಮಾಜಿ ವಿವಾದಾಸ್ಪದ ವೆಲ್ಟರ್ವೈಟ್ ವಿಶ್ವ ಚಾಂಪಿಯನ್ ಕೋರಿ ಸ್ಪಿಂಕ್ಸ್ ಅವರ ತಂದೆ.