Monday, 16th September 2024

US Open: ಹಾಲಿ ಚಾಂಪಿಯನ್‌ ಜೊಕೋವಿಕ್‌ಗೆ ಆಘಾತಕಾರಿ ಸೋಲು; 18 ವರ್ಷಗಳ ಬಳಿಕ 4ನೇ ಸುತ್ತು ಪ್ರವೇಶಿಸಲು ವಿಫಲ

US Open

ನ್ಯೂಯಾರ್ಕ್‌: ಅಮೆರಿಕ ಓಪನ್ ಟೆನಿಸ್ ಟೂರ್ನಿಯಲ್ಲಿ(US Open) ಹಾಲಿ ಚಾಂಪಿಯನ್‌ ನೋವಾಕ್‌ ಜೊಕೋವಿಕ್‌(Novak Djokovic) ಅವರ ಆಟ ಕೊನೆಗೊಂಡಿದೆ. ಈ ಮೂಲಕ ದಾಖಲೆ 25ನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಗೆಲ್ಲುವ ಅವರ ಕನಸು ಭಗ್ನಗೊಂಡಿದೆ. ಶುಕ್ರವಾರವಷ್ಟೇ ವಿಶ್ವದ ಮೂರನೇ ಶ್ರೇಯಾಂಕದ ಕಾರ್ಲೋಸ್‌ ಅಲ್ಕರಾಜ್‌ ಸೋಲು ಕಂಡಿದ್ದರು. ಇದೀಗ 2ನೇ ಶ್ರೇಯಾಂಕದ ಸ್ಟಾರ್‌ ಆಟಗಾರ ಕೂಡ ಸೋಲು ಕಂಡು ಟೂನಿಯಿಂದ ಹೊರಬಿದ್ದಿದ್ದಾರೆ. 1973 ರ ನಂತರ ಇದೇ ಮೊದಲ ಬಾರಿಗೆ ಯುಎಸ್ ಓಪನ್‌ನಲ್ಲಿ ಪುರುಷರ ಸಿಂಗಲ್ಸ್‌ನಲ್ಲಿ ನಾಲ್ಕನೇ ಸುತ್ತಿನ ಮೊದಲು ಎರಡನೇ ಮತ್ತು ಮೂರನೇ ಶ್ರೇಯಾಂಕದ ಆಟಗಾರು ಟೂರ್ನಿಯಿಂದ ಹೊರಬಿದ್ದರು.

ಶನಿವಾರ ಆರ್ಥರ್ ಆಶ್ ಸ್ಟೇಡಿಯಂನಲ್ಲಿ ನಡೆದ ಪುರುಷರ ಸಿಂಗಲ್ಸ್‌ನ ಮೂರನೇ ಸುತ್ತಿನ ಪಂದ್ಯದಲ್ಲಿ ಜೊಕೊವಿಕ್ 28ನೇ ಶ್ರೇಯಾಂಕದ, 25 ವರ್ಷದ ಆಸ್ಟ್ರೇಲಿಯಾದ ಅಲೆಕ್ಸಿ ಪಾಪಿರಿನ್ ವಿರುದ್ಧ 4 ಸೆಟ್‌ಗಳ ಕಾದಾಟದಲ್ಲಿ 6-4, 6-4, 2-6, 6-4 ಸೋಲು ಕಂಡರು. ಈ ಸೋಲಿನೊಂದಿಗೆ 18 ವರ್ಷಗಳಲ್ಲಿ ಮೊದಲ ಬಾರಿಗೆ ಯುಎಸ್ ಓಪನ್ ನಾಲ್ಕನೇ ಸುತ್ತನ್ನು ತಲುಪಲು ಜೋಕೊ ವಿಫಲರಾದರು. ಇದಕ್ಕೂ ಮುನ್ನ 2006ರಲ್ಲಿ ಜೋಕೊ ನಾಲ್ಕನೇ ಸುತ್ತು ಪ್ರವೇಶಿಸುವಲ್ಲಿ ವಿಫಲರಾಗಿದ್ದರು.

https://x.com/espn/status/1829728599840059607

ಜತೆಗೆ 2017ರ ನಂತರ ಇದೇ ಮೊದಲ ಬಾರಿಗೆ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಇಲ್ಲದೆ ವರ್ಷವನ್ನು ಮುಗಿಸುವ ಸಂಕಟಕ್ಕೆ ಸಿಲುಕಿದರು. ಸತತವಾಗಿ ಎರಡು ಸೆಟ್‌ಗಳಲ್ಲಿ ಸೋಲು ಕಂಡಿದ್ದ ಜೋಕೊ, ಮೂರನೇ ಸೆಟ್‌ನಲ್ಲಿ ಗೆಲುವು ಸಾಧಿಸಿ ಲಯಕ್ಕೆ ಮರಳುವ ಸೂಚನೆ ನೀಡಿದರು. ಆದರೆ, ಮುಂದಿನ ಸೆಟ್‌ನಲ್ಲಿ ಯುವ ಆಟಗಾರನ ಬಲಿಷ್ಠ ಹೊಡೆತಗಳಿಗೆ ತಡೆಯೊಡ್ಡುವಲ್ಲಿ ವಿಫಲವಾಗಿ ಸೋತು ಟೂನಿಯಿಂದಲೇ ಹೊರಬಿದ್ದರು. ಈ ಪಂದ್ಯ ಮೂರು ಗಂಟೆಗಳ ಮತ್ತು 19 ನಿಮಿಷದಲ್ಲಿ ಕೊನೆಗೊಂಡಿತು.

https://x.com/usopen/status/1829728576268091398

ಶುಕ್ರವಾರ ನಡೆದಿದ್ದಪಂದ್ಯದಲ್ಲಿ ವಿಶ್ವದ ಅಗ್ರ ಶ್ರೇಯಾಂಕದ ಆಟಗಾರ ಜಾನಿಕ್‌ ಸಿನ್ನರ್‌ ಮತ್ತು ಇಗಾ ಸ್ವಿಯಾಟೆಕ್‌ ೨ನೇ ಸುತ್ತಿನ ಪಂದ್ಯದಲ್ಲಿ ಗೆಲುವು ಸಾಧಿಸಿ ಮೂರನೇ ಸುತ್ತು ತಲುಪಿದ್ದರು.  ಪುರುಷರ ಸಿಂಗಲ್ಸ್‌ನಲ್ಲಿ ಜಾನಿಕ್‌ ಸಿನ್ನರ್‌ ಆತಿಥೇಯ ದೇಶದ ಅಲೆಕ್ಸ್‌ ಮೈಕಲ್‌ಸನ್‌ ವಿರುದ್ಧ 6-4, 6-0, 6-2ರಿಂದ ಗೆಲುವು ಸಾಧಿಸಿದ್ದರು. ಜತೆಗೆ 2021ರ ಚಾಂಪಿಯನ್‌ ಡ್ಯಾನಿಲ್‌ ಮೆಡ್ವೆಡೇವ್‌, 10ನೇ ಶ್ರೇಯಾಂಕದ ಅಲೆಕ್ಸ್‌ ಡಿ ಮಿನೌರ್‌ ಮೂಡ 3ನೇ ಸುತ್ತು ತಲುಪಿದ್ದಾರೆ. ಮೆಡ್ವೆಡೇವ್‌ ಹಂಗೇರಿಯ ಫ್ಯಾಬಿಯನ್‌ ಮರೊಝಾನ್‌ ಅವರನ್ನು 6-3, 6-2, 7-6 (7-5) ಅಂತರದಿಂದ, ಆಸ್ಟ್ರೇಲಿಯದ ಅಲೆಕ್ಸ್‌ ಡಿ ಮಿನೌರ್‌ ಫಿನ್ಲಂಡ್‌ನ‌ ಓಟೊ ವಿರ್ಟಾನೆನ್‌ ಅವರನ್ನು 7-5, 6-1, 7-6 (7-3)ರಿಂದ ಹಿಮ್ಮೆಟ್ಟಿಸಿದರು.

Leave a Reply

Your email address will not be published. Required fields are marked *