ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vasuki Koushik: ರಾಜ್ಯ ತಂಡ ತೊರೆದು ಗೋವಾ ಸೇರಿದ ವೇಗಿ ಕೌಶಿಕ್‌

ವಿಜಯ್ ಹಜಾರೆ ಟ್ರೋಫಿಯಲ್ಲಿ, ಗೋವಾ ತಂಡವು ಗ್ರೂಪ್ ಎ ನಲ್ಲಿ ಐದನೇ ಸ್ಥಾನ ಪಡೆದರೆ, ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಆರನೇ ಸ್ಥಾನ ಗಳಿಸಿತ್ತು. ದರ್ಶನ್ ಮಿಸಾಲ್ ರಣಜಿ ಮತ್ತು ವಿಜಯ್ ಹಜಾರೆ ಪಂದ್ಯಾವಳಿಗಳಲ್ಲಿ ತಂಡವನ್ನು ಮುನ್ನಡೆಸಿದರೆ, ದೀಪರಾಜ್ ಗಾಂವ್ಕರ್ ಮುಷ್ತಾಕ್ ಅಲಿ ಸ್ಪರ್ಧೆಯಲ್ಲಿ ತಂಡವನ್ನು ಮುನ್ನಡೆಸಿದ್ದರು.

ಬೆಂಗಳೂರು: ಈ ಹಿಂದೆ ಕರ್ನಾಟಕ(Karnataka) ತಂಡ ತೊರೆದು ವಿದರ್ಭ ಸೇರಿದ್ದ ಕರುಣ್‌ ನಾಯರ್‌(Karun Nair) ಮತ್ತೆ ರಾಜ್ಯ ತಂಡಕ್ಕೆ ಮರಳಿದಾರೆ. ಇದೇ ವೇಳೆ ಬಲಗೈ ವೇಗಿ ವಾಸುಕಿ ಕೌಶಿಕ್‌(Vasuki Koushik), ತವರು ತಂಡ ತೊರೆದು ಮುಂಬರುವ ದೇಶೀ ಕ್ರಿಕೆಟ್‌ ಋತುವಿಗಾಗಿ ಗೋವಾ ತಂಡ ಸೇರಿದ್ದಾರೆ. ಗೋವಾ ಕ್ರಿಕೆಟ್ ಅಸೋಸಿಯೇಷನ್ (GCA) ಇಲ್ಲಿಯವರೆಗೆ ಸಹಿ ಮಾಡಿದ ಇಬ್ಬರು ವೃತ್ತಿಪರ ಆಟಗಾರರಲ್ಲಿ ಅವರು ಒಬ್ಬರು. ಕೌಶಿಕ್ ಈಗಾಗಲೇ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (KSCA) ನಿಂದ ನಿರಾಕ್ಷೇಪಣಾ ಪ್ರಮಾಣಪತ್ರ (NoC) ಪಡೆದಿದ್ದಾರೆ.

ವಾಸುಕಿ ಕೌಶಿಕ್‌ ಗೋವಾ ತಂಡ ಸೇರುತ್ತಿರುವುದನ್ನು ಅಲ್ಲಿ ಕ್ರಿಕೆಟ್ ಅಸೋಸಿಯೇಷನ್ (ಜಿಸಿಎ) ಈ ದೃಢಪಡಿಸಿದೆ. "ನಾವು ಕೌಶಿಕ್ ಅವರೊಂದಿಗೆ ಸಹಿ ಹಾಕಿದ್ದೇವೆ. ಇಲ್ಲಿಯವರೆಗೆ, ಅದು ಮಾತ್ರ ದೃಢೀಕೃತ ವರ್ಗಾವಣೆಯಾಗಿದೆ. ನಾವು ಇತರ ಕೆಲ ಆಯ್ಕೆಗಳನ್ನು ಅನ್ವೇಷಿಸುತ್ತಿದ್ದೇವೆ, ಆದರೆ ಇನ್ನೂ ಯಾವುದೇ ಹೆಸರುಗಳನ್ನು ಅಂತಿಮಗೊಳಿಸಲಾಗಿಲ್ಲ" ಎಂದು ಜಿಸಿಎ ಕಾರ್ಯದರ್ಶಿ ಶಂಭಾ ದೇಸಾಯಿ ಕ್ರಿಕ್‌ಬಜ್‌ಗೆ ತಿಳಿಸಿದ್ದಾರೆ.

ಕಳೆದ ಋತುವಿನಲ್ಲಿ ಕರ್ನಾಟಕ ಪರ ಕೌಶಿಕ್‌, ಏಳು ರಣಜಿ ಟ್ರೋಫಿ ಪಂದ್ಯಗಳು, ಐದು ವಿಜಯ್ ಹಜಾರೆ ಪಂದ್ಯಗಳು ಮತ್ತು 10 ಟಿ20 ಪಂದ್ಯಗಳಲ್ಲಿ ಆಡಿದ್ದು, ಕ್ರಮವಾಗಿ 23, ಎಂಟು ಮತ್ತು 18 ವಿಕೆಟ್‌ಗಳನ್ನು ಕಬಳಿಸಿದ್ದರು. ಮುಂಬರುವ ಋತುವಿನಲ್ಲಿ ಅವರು ಸಚಿನ್‌ ತೆಂಡೂಲ್ಕರ್‌ ಪುತ್ರ ಅರ್ಜುನ್‌ ತೆಂಡೂಲ್ಕರ್ ಜತೆ ಆಡಲಿದ್ದಾರೆ. ಅರ್ಜುನ್‌ ತೆಂಡೂಲ್ಕರ್‌ 2022ರಲ್ಲಿ ಗೋವಾ ತಂಡ ಸೇರಿದ್ದರು. ಯಶಸ್ವಿ ಜೈಸ್ವಾಲ್ ಮುಂಬೈ ತೊರೆದು ಗೋವಾ ತಂಡ ಸೇರಲು ಮುಂದಾಗಿದ್ದರು. ಆದರೆ ಆ ಬಳಿಕ ಅವರು ತಮ್ಮ ನಿರ್ಧಾರ ಬಲಿಸಿ ಮುಂಬೈ ಪರ ಮುಂದುವರಿಯುವುದಾಗಿ ತಿಳಿಸಿದರು.

ವಿಜಯ್ ಹಜಾರೆ ಟ್ರೋಫಿಯಲ್ಲಿ, ಗೋವಾ ತಂಡವು ಗ್ರೂಪ್ ಎ ನಲ್ಲಿ ಐದನೇ ಸ್ಥಾನ ಪಡೆದರೆ, ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಆರನೇ ಸ್ಥಾನ ಗಳಿಸಿತ್ತು. ದರ್ಶನ್ ಮಿಸಾಲ್ ರಣಜಿ ಮತ್ತು ವಿಜಯ್ ಹಜಾರೆ ಪಂದ್ಯಾವಳಿಗಳಲ್ಲಿ ತಂಡವನ್ನು ಮುನ್ನಡೆಸಿದರೆ, ದೀಪರಾಜ್ ಗಾಂವ್ಕರ್ ಮುಷ್ತಾಕ್ ಅಲಿ ಸ್ಪರ್ಧೆಯಲ್ಲಿ ತಂಡವನ್ನು ಮುನ್ನಡೆಸಿದ್ದರು.

ಇದನ್ನೂ ಓದಿ ENG vs IND: ಮ್ಯಾಂಚೆಸ್ಟರ್ ಟೆಸ್ಟ್‌ನಲ್ಲಿ 19 ವರ್ಷದ ಏಷ್ಯನ್ ದಾಖಲೆ ಮೇಲೆ ಕಣ್ಣಿಟ್ಟ ಶುಭ್‌ಮನ್ ಗಿಲ್