Sunday, 10th November 2024

ಚಿನ್ನ ಗೆದ್ದ ವಿನೇಶ್‌ ಫೋಗಟ್‌

ನವದೆಹಲಿ: ಭಾರತದ ಕುಸ್ತಿ ಪಟು ವಿನೇಶ್‌ ಫೋಗಟ್‌ ವಾರ್ಸಾದಲ್ಲಿ ನಡೆಯುತ್ತಿರುವ ಪೋಲೆಂಡ್‌ ಕುಸ್ತಿ ಟೂರ್ನಿಯ ಮಹಿಳೆ ಯರ (53 ಕೆಜಿ) ವಿಭಾಗದ ಫೈನಲ್‌ ನಲ್ಲಿ ಉಕ್ರೇನಿನ ಕ್ರಿಸ್ಟಿಯಾನ ಬ್ರೀಜಾ ಅವರನ್ನು ಮಣಿಸಿ ಚಿನ್ನದ ಪದಕ ಗೆದ್ದಿದ್ದಾರೆ.

ಶುಕ್ರವಾರದ ಫೈನಲ್‌ ಪಂದ್ಯದಲ್ಲಿ ಫೋಗಟ್‌ ಎದುರಾಳಿ ಬ್ರೀಜಾ ಅವರನ್ನು 8-0 ಪಾಯಿಂಟ್‌ ಗಳಿಂದ ಸೋಲಿಸಿದರು. ವಿನೀಶ್‌ ಈ ಋತುವಿನಲ್ಲಿ ತಮ್ಮದಾಗಿಸಿಕೊಂಡ ಮೂರನೇ ಚಿನ್ನದ ಪದಕ ಇದಾಗಿದೆ. ಕಳೆದ ಮಾರ್ಚ್‌ ನಲ್ಲಿ ಮೆಟ್ಟಿಯೂ ಪೆಲಿಕಾನ್‌ ಇವೆಂಟ್‌ ಹಾಗೂ ಏಪ್ರಿಲ್‌ ನಲ್ಲಿ ಏಷಿಯನ್‌ ಚಾಂಪಿಯನ್‌ ಶಿಪ್‌ ನಲ್ಲಿ ಸ್ವರ್ಣಪದಕ ಗೆದ್ದಿದ್ದರು.

ಪೊಲೆಂಡ್‌ ಕುಸ್ತಿ ಟೂರ್ನಿಯಲ್ಲಿ ಭಾರತಕ್ಕೆ ಇದು ಎರಡನೇಯ ಪದಕವಾಗಿದೆ. ಇದಕ್ಕೂ ಮೊದಲು ಪುರುಷರ 61 ಕೆ.ಜಿ.ವಿಭಾಗ ದಲ್ಲಿ ರವಿಕುಮಾರ್‌ ದಹಿಯಾ ಬೆಳ್ಳಿ ಪದಕ ಗೆದ್ದಿದ್ದರು.