Thursday, 19th September 2024

ವಿನೇಶ್ ಫೋಗಟ್ ಅನರ್ಹ

ಪ್ಯಾರಿಸ್ ಒಲಿಂಪಿಕ್: ಪ್ರಸಕ್ತ ಸಾಲಿನ ಒಲಿಂಪಿಕ್ಸ್ ನಲ್ಲಿ ೫೦ ಕೆಜಿ ಭಾರ ಎತ್ತುವ ಸ್ಪರ್ಧೆಯಲ್ಲಿ ದೇಶಕ್ಕೆ ಮತ್ತೊಂದು ಚಿನ್ನ ತರುವ ಭರವಸೆ ಮೂಡಿಸಿದ್ದ ದೇಹಧಾರ್ಡ್ಯ ಪಟು ವಿನೇಶ ಫೋಗಟ್ ಅವರು ಅಗತ್ಯಕ್ಕಿಂತ ಹೆಚ್ಚಿನ ತೂಕ ಹೊಂದಿದ್ದ ಕಾರಣ, ಒಲಿಂಪಿಕ್ಸ್ ಸ್ಪರ್ಧೆಯಿಂದಲೇ ಹೊರ ಬಿದ್ದಿದ್ದಾರೆ. ಈ ಮೂಲಕ ದೇಶದ ಚೆನ್ನ ಗೆಲ್ಲುವ ಕನಸು ನುಚ್ಚುನೂರಾಗಿದೆ.

ಸಾಮಾನ್ಯವಾಗಿ ವಿನೇಶ್ ಅವರು ೫೩ ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಾರೆ. ಆದರೆ, ಈ ಬಾರಿಯ ಪ್ಯಾರಿಸ್ ಒಲಿಂಪಿಕ್ಸ್ ಗಾಗಿ ತನ್ನ ದೇಹ ತೂಕ ೫೦ಕ್ಕೆ ಇಳಿಸಿಕೊಂಡಿದ್ದರು. ಆದರೆ, ಕೊನೆ ಕ್ಷಣದಲ್ಲಿ ಅವರ ತೂಕದಲ್ಲಿ ಸುಮಾರು ನೂರು ಗ್ರಾಂ ನಷ್ಟು ಹೆಚ್ಚಳ ಕಂಡುಬಂದ ಕಾರಣ, ಮುಂದಿನ ಸ್ಪರ್ಧೆಯಿಂದ ಅವರನ್ನು ಅನರ್ಹಗೊಳಿಸಲಾಗಿದೆ.

Leave a Reply

Your email address will not be published. Required fields are marked *