Thursday, 3rd October 2024

Viral Video: ‘ಮನಸಿಲಾಯೋ’ ಹಾಡಿಗೆ ಹೆಜ್ಜೆ ಹಾಕಿದ ಗ್ರ್ಯಾಂಡ್‌ಮಾಸ್ಟರ್ ಗುಕೇಶ್

ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ (Superstar Rajinikanth) ಮತ್ತು ಮಂಜು ವಾರಿಯರ್‌ ನಟಿಸಿರುವ, ಟಿ.ಜೆ. ಜ್ಞಾನವೇಲ್ (T.J. Gnanavel) ನಿರ್ದೇಶನದ ‘ ವೆಟ್ಟೈಯಾನ್‌- ದಿ ಹಂಟರ್’ (Vettaiyan-The Hunter) ಚಿತ್ರ ಅಕ್ಟೋಬರ್ 10ರಂದು ವಿಶ್ವದಾದ್ಯಂತ ತೆರೆಕಾಣಲಿದೆ. ಇದಕ್ಕೂ ಮುನ್ನವೇ ಈ ಸಿನಿಮಾದ ಹಾಡೊಂದು ಎಲ್ಲರ ಮನಸೂರೆಗೊಳಿಸಿದೆ. ಮಾಸ್ ಬೀಟ್ ನೊಂದಿಗೆ ವೈರಲ್ ಆಗುತ್ತಿರುವ ಹೆಣ್ಣಿನ ಧ್ವನಿಯ ‘ಮನಸಿಲಯೋ..’(Manasilayo) ಹಾಡು ವೈರಲ್‌ ಆಗುತ್ತಿದೆ. ನೆಟ್ಟಿಗರು ಈ ಹಾಡಿಗೆ ಹೆಜ್ಜೆ ಹಾಕುವ ರೀಲ್ಸ್‌ಗಳನ್ನು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದೀಗ ಭಾರತದ ಗ್ರ್ಯಾಂಡ್‌ಮಾಸ್ಟರ್ ಡಿ ಗುಕೇಶ್(D Gukesh) ಕೂಡ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೊ ವೈರಲ್‌(Viral Video) ಆಗಿದೆ.

18 ವರ್ಷದ ಗ್ರ್ಯಾಂಡ್‌ಮಾಸ್ಟರ್ ಡಿ ಗುಕೇಶ್ ಕಳೆದ ತಿಂಗಳು ಬುಡಾಪೆಸ್ಟ್‌ನಲ್ಲಿ ನಡೆದ 45ನೇ ಚೆಸ್‌ ಒಲಿಂಪಿಯಾಡ್‌ನ‌ಲ್ಲಿ ಚಿನ್ನದ ಪದಕ ಗೆದ್ದ ಭಾರತದ ಪುರುಷರ ತಂಡ ಸದಸ್ಯನಾಗಿದ್ದರು. ತವರಿಗೆ ಬಂದಿರುವ ಡಿ ಗುಕೇಶ್ ತಮ್ಮ ಕುಟುಂಬ ಸದಸ್ಯರೊಂದಿಗೆ ʼಮನಸಿಲಯೋ..’ ಹಾಡಿಗೆ ಹೆಜ್ಜೆ(D Gukesh dance) ಹಾಕಿದ್ದಾರೆ. ಬಿಳಿ ಪಂಚೆ ಮತ್ತು ಕಪ್ಪು ಬಣ್ಣದ ಕೂಲಿಂಗ್​ ಗ್ಲಾಸ್​ ಧರಿಸಿ ನೃತ್ಯ ಮಾಡಿದ್ದಾರೆ. ಇವರ ಈ ನೃತ್ಯ ಕಂಡ ನೆಟ್ಟಿಗರು ಗ್ರ್ಯಾಂಡ್‌ಮಾಸ್ಟರ್ ಸ್ಟೆಪ್ಸ್‌ ಎಂದು ಕಮೆಂಟ್‌ ಮಾಡಿದ್ದಾರೆ. ಸದ್ಯ ಈ ವಿಡಿಯೊ ಎಲ್ಲಡೆ ಟ್ರೆಂಡ್‌ ಆಗಿದೆ.

ಇದನ್ನೂ ಓದಿ Viral Video: ಹೊಸ ಬಾಯ್ ಫ್ರೆಂಡ್ ಜತೆ ಕಾಣಿಸಿಕೊಂಡ ಹಾರ್ದಿಕ್‌ ಪಾಂಡ್ಯ ಮಾಜಿ ಪತ್ನಿ ನತಾಶಾ

ಇದೇ ವರ್ಷ ಎಪ್ರೀಲ್‌ನಲ್ಲಿ ಟೊರೆಂಟೊದಲ್ಲಿ ನಡೆದಿದ್ದ ಕ್ಯಾಂಡಿಡೇಟ್ಸ್ ಚೆಸ್ ಟೂರ್ನಮೆಂಟ್‌ನಲ್ಲಿ ಡಿ ಗುಕೇಶ್ ಚಾಂಪಿಯನ್‌ ಪಟ್ಟ ಅಲಂಕರಿಸುವ ಮೂಲಕ ಈ ಸಾಧನೆ ಮಾಡಿದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆ ಬರೆದಿದ್ದರು. ಜತೆಗೆ ಶ್ವನಾಥನ್ ಆನಂದ್ ಬಳಿಕ ಕ್ಯಾಂಡಿಡೇಟ್ಸ್ ಕಪ್ ಗೆದ್ದ ಎರಡನೇ ಭಾರತೀಯ ಎನಿಸಿಕೊಂಡಿದ್ದರು.

ಲೈಕಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಬಿಗ್ ಬಜೆಟ್ ಚಿತ್ರ ಇದಾಗಿದ್ದು, ಈಗಾಗಲೇ ಸಾಮಾಜಿಕ ಜಾಲತಾಣದ ಮೂಲಕ ಎಲ್ಲರ ಗಮನ ಸೆಳೆಯುತ್ತಿದೆ. ಬ್ಲಾಕ್‌ಬಸ್ಟರ್ ಚಿತ್ರಗಳಾದ 2.0, ದರ್ಬಾರ್, ಲಾಲ್ ಸಲಾಮ್ ಅನಂತರ ರಜನಿಕಾಂತ್ ಮತ್ತು ಲೈಕಾ ಪ್ರೊಡಕ್ಷನ್ಸ್‌ನ ನಾಲ್ಕನೇ ಚಿತ್ರ ಇದಾಗಿದೆ.

ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಅವರು ಪೇಟಾ, ದರ್ಬಾರ್, ಜೈಲರ್ ಚಿತ್ರದ ಬಳಿಕ ಇದೀಗ ನಾಲ್ಕನೇ ಬಾರಿಗೆ ರಜನಿಕಾಂತ್ ಅಭಿನಯದ ವೆಟ್ಟೈಯಾನ್‌ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಮಾತ್ರವಲ್ಲದೇ ‘ಮನಸಿಲಯೋ..’ ಹಾಡಿನಲ್ಲಿ ರಜನೀಕಾಂತ್ ಜೊತೆ ಹೆಜ್ಜೆಯನ್ನೂ ಹಾಕಿದ್ದಾರೆ.