Thursday, 3rd October 2024

Virat Kohli: ಕೊಹ್ಲಿಯ ಸ್ವೀಪ್‌ ಶಾಟ್‌ ಕಂಡು ದಂಗಾದ ಮೆಹದಿ ಹಸನ್‌; ವಿಡಿಯೊ ವೈರಲ್‌

Virat Kohli

ಕಾನ್ಪುರ: ಹೆಚ್ಚಾಗಿ ಕವರ್‌ ಡ್ರೈ ಹೊಡೆಯುವ ವಿರಾಟ್‌ ಕೊಹ್ಲಿ(Virat Kohli) ಬಾಂಗ್ಲಾದೇಶ ವಿರುದ್ಧದ ದ್ವಿತೀಯ ಟೆಸ್ಟ್‌ನ(India vs Bangladesh 2nd Test) ಅಂತಿಮ ದಿನದಂದು ಸ್ವೀಪ್‌ ಶಾಟ್‌ ಮೂಲಕ ಬೌಂಡರಿ ಬಾರಿಸಿದರು. ಕೊಹ್ಲಿಯ ಈ ಅಪರೂಪರ ಸ್ವೀಪ್‌(virat kohli sweep shot) ಹೊಡೆತವನ್ನು ಕಂಡು ಬಾಂಗ್ಲಾ ಬೌಲರ್‌ ಮೆಹದಿ ಹಸನ್‌ ತಲೆ ಮೇಲೆ ಕೈಯಿಟ್ಟು ಒಂದು ಕ್ಷಣ ದಂಗಾದರು. ಅತ್ತ ಸ್ವೀಪ್‌ ಮೂಲಕ ಬೌಂಡರಿ ಬಾರಿಸಿದ ಕೊಹ್ಲಿಯೂ ಇದನ್ನು ನಂಬಲಾಗದ ಸ್ಥಿತಿಯಲ್ಲಿ ನಗೆ ಬೀರಿದರು. ಸದ್ಯ ಕೊಹ್ಲಿಯ ಸ್ವೀಪ್‌ ಶಾಟ್‌ನ ವಿಡಿಯೊ ವೈರಲ್‌ ಆಗಿದೆ. ಪಂದ್ಯ ಮುಗಿದ ಬಳಿಕ ಅಶ್ವಿನ್‌ ಕೂಡ ಕೊಹ್ಲಿಯ ಬಳಿ ಸ್ವೀಪ್‌ ಶಾಟ್‌ ಬಗ್ಗೆ ತಮಾಷೆ ಮಾಡಿದ್ದಾರೆ.

ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 47 ರನ್‌ ಬಾರಿಸಿದ್ದ ಕೊಹ್ಲಿ ದ್ವಿತೀಯ ಇನಿಂಗ್ಸ್‌ನಲ್ಲಿ ಅಜೇಯ 29 ರನ್‌ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಭಾರತ ಪಂದ್ಯವನ್ನು 7 ವಿಕೆಟ್‌ಗಳ ಅಮತರದಿಂದ ಗೆದ್ದು ಸರಣಿಯನ್ನು ಕ್ಲೀನ್‌ ಸ್ವೀಪ್‌ ಮಾಡಿತು.

ಭಾರತ ತಂಡ ಈ ಗೆಲುವಿನೊಂದಿಗೆ ಅತಿ ಹೆಚ್ಚು ಟೆಸ್ಟ್‌ ಗೆಲುವು ಸಾಧಿಸಿದ ತಂಡಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ. ಭಾರತದ ಗೆಲುವಿನ ಸಂಖ್ಯೆ 180ಕ್ಕೆ ಏರಿದೆ. ಇದೇ ವೇಳೆ 179 ಗೆಲುವು ಸಾಧಿಸಿದ್ದ ದಕ್ಷಿಣ ಆಫ್ರಿಕಾವನ್ನು ಹಿಂದಿಕ್ಕಿದೆ. ಈ ಯಾದಿಯಲ್ಲಿ ಆಸ್ಟ್ರೇಲಿಯಾ(414) ಅಗ್ರಸ್ಥಾನದಲ್ಲಿದೆ. ಇಂಗ್ಲೆಂಡ್‌(397) ದ್ವಿತೀಯ ಸ್ಥಾನದಲ್ಲಿದೆ. ಆರ್‌.ಅಶ್ವಿನ್‌(R Ashwin) ಅವರು ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗುವ ಮೂಲಕ ಶ್ರೀಲಂಕಾದ ದಿಗ್ಗಜ ಮುತ್ತಯ್ಯ ಮುರಳೀಧರನ್(Muttiah Muralitharan) ಅವರ ವಿಶ್ವ ದಾಖಲೆಯನ್ನು ಸರಿಗಟ್ಟಿದ್ದಾರೆ. ಉಭಯ ಆಟಗಾರರು 11 ಬಾರಿ ಟೆಸ್ಟ್‌ನಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ. ಅಶ್ವಿನ್‌ ಇನ್ನೊಂದು ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರೆ ವಿಶ್ವ ದಾಖಲೆ ತಮ್ಮ ಹೆಸರಿಗೆ ಬರೆಯಲಿದ್ದಾರೆ.

ಇದನ್ನೂ ಓದಿ WTC Points Table: ಭಾರತದ ಅಗ್ರಸ್ಥಾನ ಸುಭದ್ರ

ವಿರಾಟ್‌ ಕೊಹ್ಲಿ ಅವರು ಟೆಸ್ಟ್‌ ಕ್ರಿಕೆಟ್‌ನಲ್ಲಿ ವಿಶ್ವ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಅತಿ ವೇಗವಾಗಿ 27 ಸಾವಿರ ಅಂತಾರಾಷ್ಟ್ರೀಯ ರನ್‌ ಗಳಿಸಿದ ಆಟಗಾರ ಎಂಬ ದಾಖಲೆ ಬರೆದರು. ಈ ಮೂಲಕ ಸಚಿನ್‌ ದಾಖಲೆಯನ್ನು ಮುರಿದರು. ವಿರಾಟ್ ಕೇವಲ 594 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಭಾರತದ ದಿಗ್ಗಜ ಬ್ಯಾಟರ್ ಸಚಿನ್ ತೆಂಡೂಲ್ಕರ್ 623 ಇನ್ನಿಂಗ್ಸ್‌ ಆಡಿ ಈ ದಾಖಲೆ ಬರೆದಿದ್ದರು. ಇದೀಗ ಅವರ ದಾಖಲೆ ಪತನಗೊಂಡಿದೆ. ಕೊಹ್ಲಿ 600 ಕ್ಕಿಂತ ಕಡಿಮೆ ಇನ್ನಿಂಗ್ಸ್‌ಗಳಲ್ಲಿ 27000 ಅಂತಾರಾಷ್ಟ್ರೀಯ ರನ್‌ಗಳನ್ನು ಪೂರೈಸಿದ ಏಕೈಕ ಕ್ರಿಕೆಟಿಗರಾದರು.