ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸಿಂಹಾಚಲಂ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ವಿರಾಟ್‌ ಕೊಹ್ಲಿ

Virat Kohli visits Simachalam temple: ಭಾನುವಾರ ಕೊಹ್ಲಿ ಏಕಾಂಗಿಯಾಗಿ ದೇವಸ್ಥಾನಕ್ಕೆ ಭೇಟಿ ನೀಡಿ ವರಾಹ ಲಕ್ಷ್ಮಿ ನರಸಿಂಹನಿಗೆ ಪ್ರಾರ್ಥನೆ ಸಲ್ಲಿಸಿ, ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ವೇಳೆ ದೇವಳದ ವತಿಯಿಂದ ಕೊಹ್ಲಿಯನ್ನು ಬರಮಾಡಿಕೊಳ್ಳಲಾಯಿತು. ಮತ್ತು ಗೌರವಿಸಲಾಯಿತು.

ಬ್ಯಾಟಿಂಗ್‌ ಸಕ್ಸಸ್ ಬೆನ್ನಲ್ಲೇ ವಿರಾಟ್‌ ಕೊಹ್ಲಿ ಟೆಂಪಲ್ ರನ್

Virat Kohli visit Simachalam temple -

Abhilash BC
Abhilash BC Dec 7, 2025 3:37 PM

ವಿಶಾಖಪಟ್ಟಣಂ, ಡಿ. 7: ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯದ ಸರಣಿಯಲ್ಲಿ ಅಮೋಘ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದ ಟೀಮ್‌ ಇಂಡಿಯಾದ ಹಿರಿಯ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ(Virat Kohli) ವಿಶಾಖಪಟ್ಟಣದಲ್ಲಿರುವ ಸಿಂಹಾಚಲಂ ದೇವಾಲಯ(Simhachalam Temple)ದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಮೂರು ಪಂದ್ಯಗಳ ಸರಣಿಯಲ್ಲಿ ಎರಡು ಶತಕ ಮತ್ತು ಒಂದು ಅರ್ಧಶತಕ ಗಳಿಸುವ ಮೂಲಕ ಕೊಹ್ಲಿ ತಮ್ಮ ಫಾರ್ಮ್ ಅನ್ನು ಮರುಕಳಿಸಿದರು.

ಭಾನುವಾರ ಕೊಹ್ಲಿ ಏಕಾಂಗಿಯಾಗಿ ದೇವಸ್ಥಾನಕ್ಕೆ ಭೇಟಿ ನೀಡಿ ವರಾಹ ಲಕ್ಷ್ಮಿ ನರಸಿಂಹನಿಗೆ ಪ್ರಾರ್ಥನೆ ಸಲ್ಲಿಸಿ, ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ವೇಳೆ ದೇವಳದ ವತಿಯಿಂದ ಕೊಹ್ಲಿಯನ್ನು ಬರಮಾಡಿಕೊಳ್ಳಲಾಯಿತು. ಮತ್ತು ಗೌರವಿಸಲಾಯಿತು.

ಆಸ್ಟ್ರೇಲಿಯಾ ಪ್ರವಾಸದಲ್ಲಿ ಕೊಹ್ಲಿ ತಂಡಕ್ಕೆ ಕಮ್‌ಬ್ಯಾಕ್‌ ಮಾಡಲು ಕಷ್ಟ ಅನುಭವಿಸಿದ್ದರು. ಆದಾಗ್ಯೂ, ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಅವರು ತಮ್ಮ ಲಯ ಕಂಡುಕೊಂಡರು. ಆ ಬಳಿಕ ಸರಣಿಯಲ್ಲಿ ಒಟ್ಟು 300 ಪ್ಲಸ್‌ ರನ್‌ ಕಲೆಹಾಕಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಸರಣಿ ಶ್ರೇಷ್ಠ ಪಡೆಯವ ಮೂಲಕ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 20ನೇ ಬಾರಿಗೆ ಈ ಪ್ರಶಸ್ತಿಗೆ ಭಾಜನರಾದರು. ಇದೇ ವೇಳೆ 19 ಬಾರಿ ಸರಣಿ ಶ್ರೇಷ್ಠಪಡೆದಿದ್ದ ಸಿನ್‌ ತೆಂಡೂಲ್ಕರ್‌ ದಾಖಲೆ ಪತನಗೊಂಡಿತು.



ಸರಣಿ ಮುಗಿಸಿ ವಿಶ್ರಾಂತಿಯಲ್ಲಿರುವ ಕೊಹ್ಲಿ, ಡಿಸೆಂಬರ್ 24ರಂದು ಆರಂಭವಾಗುವ ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡಲಿದ್ದಾರೆ. 37 ವರ್ಷ ವಯಸ್ಸಿನ ಕೊಹ್ಲಿ 2010ರಲ್ಲಿ ಸರ್ವಿಸಸ್‌ ವಿರುದ್ಧ ಕೊನೆಯ ಬಾರಿ ವಿಜಯ್ ಹಜಾರೆ ಟ್ರೋಫಿ ಪಂದ್ಯ ಆಡಿದ್ದರು. ಕೊಹ್ಲಿ ಈ ಬಾರಿ ವಿಜಯ್‌ ಹಜಾರೆ ಆಡುವುದನ್ನು ಡೆಲ್ಲಿ ಮತ್ತು ಜಿಲ್ಲಾ ಕ್ರಿಕೆಟ್‌ ಸಂಸ್ಥೆ (ಡಿಡಿಸಿಎ) ಅಧ್ಯಕ್ಷ ರೋಹನ್ ಜೇಟ್ಲಿ ಖಚಿತಪಡಿಸಿದ್ದಾರೆ.

ಇದನ್ನೂ ಓದಿ ವಿಜಯ್ ಹಜಾರೆ ಟ್ರೋಫಿಯಲ್ಲಿ ಕೊಹ್ಲಿ ಸಾಧನೆ ಹೇಗಿದೆ?; ಕೊನೆಯ ಬಾರಿಗೆ ಆಡಿದ್ದು ಯಾವಾಗ?

ಡೆಲ್ಲಿ ತಂಡವು ಆರು ಪಂದ್ಯಗಳನ್ನು ಆಡಲಿದೆ. ಕೇಂದ್ರೀಯ ಗುತ್ತಿಗೆಯಲ್ಲಿರುವ ಆಟಗಾರರು ದೇಶಿ ಕ್ರಿಕೆಟ್‌ನಲ್ಲಿ ಆಡುವುದನ್ನು ಬಿಸಿಸಿಐ ಕಡ್ಡಾಯಗೊಳಿಸಿದೆ. ಗಾಯಾಳಾದಲ್ಲಿ ಅಥವಾ ರಾಷ್ಟ್ರೀಯ ತಂಡಕ್ಕೆ ಆಡುತ್ತಿದ್ದರೆ ಮಾತ್ರ ವಿನಾಯಿತಿ ಸಿಗುತ್ತದೆ. 2027ರ ಏಕದಿನ ವಿಶ್ವಕಪ್‌ ಆಡುವ ನಿಟ್ಟಿನಲ್ಲಿ ಕೊಹ್ಲಿ ದೇಶೀಯ ಟೂರ್ನಿ ಆಡಲು ನಿರ್ಧರಿಸಿದಂತಿದೆ.

ಕೊಹ್ಲಿ ಕೊನೆಯ ಬಾರಿಗೆ 2009/10 ಆವೃತ್ತಿಯಲ್ಲಿ ವಿಜಯ್ ಹಜಾರೆಯಲ್ಲಿ ಆಡಿದ್ದರು, ಇದು ಫೆಬ್ರವರಿ-ಮಾರ್ಚ್ 2010 ರಲ್ಲಿ ನಡೆಯಿತು. ಅವರ ಕೊನೆಯ ಪಂದ್ಯ ಫೆಬ್ರವರಿ 18, 2010 ರಂದು ನಡೆಯಿತು. 2009ರ ಆವೃತ್ತಿಯಲ್ಲಿ ಕೊಹ್ಲಿ 7 ಪಂದ್ಯಗಳಿಂದ 4 ಶತಕ ಸಿಡಿಸಿ 534ರನ್‌ ಬಾರಿಸಿ ಗರಿಷ್ಠ ಸ್ಕೋರರ್‌ ಎನಿಸಿಕೊಂಡಿದ್ದರು.