Friday, 13th December 2024

Virat Kohli: ಕಿಂಗ್ ಕೊಹ್ಲಿಯ ಪ್ರಮುಖ ಸಾಧನೆಗಳ ಪಟ್ಟಿ

ಮುಂಬಯಿ: ಸಮಕಾಲೀನ ಕ್ರಿಕೆಟ್‌ ಜಗತ್ತಿನ ಅತ್ಯಂತ ಯಶಸ್ವಿ ಬ್ಯಾಟ್ಸ್‌ ಮನ್‌ ವಿರಾಟ್‌ ಕೊಹ್ಲಿ(Virat Kohli) 36ನೇ ವರ್ಷಕ್ಕೆ ಕಾಲಿರಿಸಿದ್ದಾರೆ. ತಮ್ಮ ಜೀವನದ ಆರಂಭಿಕ ಕಾಲಘಟ್ಟದಲ್ಲಿ ಎಲ್ಲ ಕ್ರಿಕೆಟಿಗರ ಹಾಗೆಯೇ ವಿರಾಟ್‌ ಕೊಹ್ಲಿ ಕೂಡ ಸಾಕಷ್ಟು ವೈಫ‌ಲ್ಯಗಳನ್ನು ಎದುರಿಸಿದ್ದರು. ಇದೆಲ್ಲವನ್ನು ಮೆಟ್ಟಿ ನಿಂತು ಇಂದು ವಿಶ್ವ ಕ್ರಿಕೆಟ್‌ನಲ್ಲಿ ಕೊಹ್ಲಿ ದಾಖಲೆಗಳ ಸರದಾರನಾಗಿ ಮೆರೆದಾಡುತ್ತಿದ್ದಾರೆ. ದಿಗ್ಗಜ ಆಟಗಾರ ಸಚಿನ್‌ ತೆಂಡೂಲ್ಕರ್‌ ಅವರ ಸರ್ವಕಾಲಿಕ ಏಕದಿನ ಕ್ರಿಕೆಟ್‌ನ ಅತ್ಯಧಿಕ ಶತಕ ದಾಖಲೆಯನ್ನು ಮೀರಿ ನಿಂತ ಸಾಧಕ. ಇದುವರೆಗಿನ 16 ವರ್ಷದ ಕ್ರಿಕೆಟ್‌ ಬಾಳ್ವೆಯಲ್ಲಿ ಕೊಹ್ಲಿ ನಿರ್ಮಿಸಿದ ದಾಖಲೆ ಪಟ್ಟಿ ಹೀಗಿದೆ.

1. 2019: ಐಸಿಸಿ ಕ್ರೀಡಾಸ್ಫೂರ್ತಿಯ ಪ್ರಶಸ್ತಿ

2. 2012, 2017, 2018, 2023: ಐಸಿಸಿ ವರ್ಷದ ಏಕದಿನ ಆಟಗಾರ

2018: ಐಸಿಸಿ ವರ್ಷದ ಟೆಸ್ಟ್ ಆಟಗಾರ

2012, 2014, 2016-2019: ಐಸಿಸಿ ವರ್ಷದ ಏಕದಿನ ತಂಡದ ಆಟಗಾರ

2017-2019: ಐಸಿಸಿ ವರ್ಷದ ಟೆಸ್ಟ್ ತಂಡದ ಆಟಗಾರ

2022: ಐಸಿಸಿ ವರ್ಷದ ಟಿ20 ತಂಡದ ಆಟಗಾರ

2013: ಅರ್ಜುನ ಪ್ರಶಸ್ತಿ

2017: ಪದ್ಮಶ್ರೀ

2018: ಮೇಜರ್ ಧ್ಯಾನ್‌ಚಂದ್ ಖೇಲ್ ರತ್ನ ಪ್ರಶಸ್ತಿ

2011-2020: ಐಸಿಸಿ ಪುರುಷರ ದಶಕದ ಏಕದಿನ ಕ್ರಿಕೆಟಿಗ

2017,2018: ಐಸಿಸಿ ವರ್ಷದ ಕ್ರಿಕೆಟಿಗ

2011-2020: ಸರ್ ಗ್ಯಾರಿ‌ಫೀಲ್ಡ್ ಸೋಬರ್ಸ್ ಟ್ರೋಫಿ

ಇದನ್ನೂ ಓದಿ Virat Kohli Birthday Special: ಜನ್ಮದಿನದಂದೇ ಶತಕ ಬಾರಿಸಿದ ಸಾಧಕರ ಯಾದಿಯಲ್ಲಿ ಕೊಹ್ಲಿಗೆ ಎಷ್ಟನೇ ಸ್ಥಾನ?

21: ಅತಿ ಹೆಚ್ಚು ಸರಣಿಶ್ರೇಷ್ಠ ಪುರಸ್ಕಾರ (ಎಲ್ಲ ಮೂರು ಮಾದರಿಗಳು ಸೇರಿ)

13,000: ಏಕದಿನದಲ್ಲಿ ಅತಿ ವೇಗದಲ್ಲಿ 13,000 ರನ್ ಸಾಧನೆ (267 ಪಂದ್ಯ)

3,500: ಟಿ20ನಲ್ಲಿ ಅತಿ ವೇಗದಲ್ಲಿ 3,500 ರನ್ ಸಾಧನೆ (96)

38: ಟಿ20ನಲ್ಲಿ ಅತಿ ಹೆಚ್ಚು ಅರ್ಧಶತಕ ಸಾಧನೆ

50: ಏಕದಿನದಲ್ಲಿ ಅತಿ ಹೆಚ್ಚು ಶತಕ

10: ಏಕದಿನದಲ್ಲಿ ತಂಡವೊಂದರ ವಿರುದ್ಧ ಅತಿ ಹೆಚ್ಚು ಶತಕ (ಶ್ರೀಲಂಕಾ ವಿರುದ್ಧ)

765 ರನ್: ಏಕದಿನ ಟೂರ್ನಿಯೊಂದರಲ್ಲಿ ಅತಿ ಹೆಚ್ಚು ರನ್ ದಾಖಲೆ (2023ರ ಏಕದಿನ ವಿಶ್ವಕಪ್)

27 ಸಾವಿರ ರನ್: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವೇಗವಾಗಿ 27 ಸಾವಿರ ರನ್ ಪೂರೈಸಿದ ಬ್ಯಾಟರ್( (594 ಇನಿಂಗ್ಸ್)

https://twitter.com/mufaddal_vohra/status/1853705697868890313
ಒಟ್ಟಾರೆ ಸಾಧನೆ

538 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ಕೊಹ್ಲಿ ಈ ಹಾದಿಯಲ್ಲಿ 27,134 ರನ್‌ ಬಾರಿಸಿದ್ದಾರೆ. 2011ರ ಏಕದಿನ ವಿಶ್ವಕಪ್‌, 2013 ಐಸಿಸಿ ಚಾಂಪಿಯನ್ಸ್‌ ಟ್ರೋಫಿ, 2024ರ ಟಿ20ವಿಶ್ವ ಕಪ್‌ ತಂಡದ ಸದಸ್ಯನಾಗಿದ್ದರು. ಏಕದಿನದಲ್ಲಿ 13906 ರನ್‌, 50 ಶತಕ, ಟೆಸ್ಟ್‌ನಲ್ಲಿ 9040 ರನ್‌, 29 ಶತಕ, ಟಿ20ಯಲ್ಲಿ 4188 ರನ್‌, 1 ಶತಕ ಬಾರಿಸಿದ್ದಾರೆ.