ಟ್ರಿನಿಡಾಡ್: ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ವೆಸ್ಟ್ ಇಂಡೀಸ್ ತಂಡವನ್ನು ಪ್ರಕಟಿಸಲಾಗಿದೆ. ಈ ತಂಡದಲ್ಲಿ ಅನುಭವಿ ಆಟಗಾರರಿಗೆ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.
ವೆಸ್ಟ್ ಇಂಡೀಸ್ ತಂಡದ ಅನುಭವಿ ಆಟಗಾರರು ವಿದೇಶಿ ಲೀಗ್ಗಳಲ್ಲಿ ಅಮೋಘ ಪ್ರದರ್ಶನ ನೀಡಿ ತಂಡಕ್ಕೆ ನೆರವಾಗುತ್ತಿದ್ದಾರೆ. ವಿಂಡೀಸ್ ತಂಡದಲ್ಲಿ ಆಲ್ರೌಂಡರ್ಗಳಾದ ಆಂಡ್ರೆ ರಸೆಲ್ ಮತ್ತು ಜೇಸನ್ ಹೋಲ್ಡರ್ ಸ್ಥಾನ ಪಡೆಯುವಲ್ಲಿ ಸಫಲರಾಗಿದ್ದಾರೆ.
ದಕ್ಷಿಣ ಆಫ್ರಿಕಾ ಹಾಗೂ ವೆಸ್ಟ್ ಇಂಡೀಸ್ ನಡುವಣ ಟಿ20 ಸರಣಿ ಆ.23 ರಿಂದ 27 ರವರೆಗೆ ನಡೆಯಲಿದೆ. ಸರಣಿಯ ಎಲ್ಲಾ ಪಂದ್ಯಗಳು ಟ್ರಿನಿಡಾಡ್ನ ಬ್ರಿಯಾನ್ ಲಾರಾ ಕ್ರಿಕೆಟ್ ಅಕಾಡೆಮಿ ಸ್ಟೇಡಿಯಂನಲ್ಲಿ ನಡೆಯಲಿವೆ.
ವೆಸ್ಟ್ ಇಂಡೀಸ್ ತಂಡ ಮುಂದಿನ ಬಾರಿ ನಡೆಯಲಿರುವ ವಿಶ್ವಕಪ್ನ್ನು ಗಮನದಲ್ಲಿಟ್ಟುಕೊಂಡು ಹಲವು ಬದಲಾವಣೆಗಳನ್ನು ಮಾಡಿದೆ. ಮುಂದಿನ ಬಾರಿಯ ಟಿ20 ವಿಶ್ವಕಪ್ ತಂಡ ಚಾಂಪಿಯನ್ ಪಟ್ಟವನ್ನು ಅಲಂಕರಿಸಲು ಪ್ಲ್ಯಾನ್ ಮಾಡಿದೆ.
ವೆಸ್ಟ್ ಇಂಡೀಸ್ ಟಿ20 ತಂಡ:
ರೋವ್ಮನ್ ಪೊವೆಲ್ (ನಾಯಕ), ರೋಸ್ಟನ್ ಚೇಸ್ (ಉಪನಾಯಕ), ಅಲೆಕ್ ಅಥನಾಜೆ, ಜಾನ್ಸನ್ ಚಾರ್ಲ್ಸ್, ಮ್ಯಾಥ್ಯೂ ಫೋರ್ಡ್, ಶಿಮ್ರಾನ್ ಹೆಟ್ಮೆ ಯರ್, ಫ್ಯಾಬಿಯನ್ ಅಲೆನ್, ಶಾಯ್ ಹೋಪ್, ಅಕೇಲ್ ಹೊಸೈನ್, ಶಮರ್ ಜೋಸೆಫ್, ಓಬೆಡ್ ಮೆಕಾಯ್, ಗುಡಕೇಶ್ ಮೋತಿ, ನಿಕೋಲಸ್ ಪೂರನ್, ಶೆರ್ಫಾನ್ ರುಥರ್ ರೊಮಾರಿಯೋ ಶೆಫರ್ಡ್,
ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾ ಪಂದ್ಯಗಳ ವೇಳಾಪಟ್ಟಿ
23 ಆಗಸ್ಟ್ – 1 ನೇ T20 ಬ್ರಿಯಾನ್ ಲಾರಾ ಕ್ರಿಕೆಟ್ ಅಕಾಡೆಮಿ, ಟ್ರಿನಿಡಾಡ್
25 ಆಗಸ್ಟ್ – 2 ನೇ T20 ಬ್ರಿಯಾನ್ ಲಾರಾ ಕ್ರಿಕೆಟ್ ಅಕಾಡೆಮಿ, ಟ್ರಿನಿಡಾಡ್
27 ಆಗಸ್ಟ್ – 3ನೇ T20 ಬ್ರಿಯಾನ್ ಲಾರಾ ಕ್ರಿಕೆಟ್ ಅಕಾಡೆಮಿ, ಟ್ರಿನಿಡಾಡ್