ದುಬೈ: 2023ರ ಐಸಿಸಿ ಏಕದಿನ ವಿಶ್ವಕಪ್‌ನ 13ನೇ ಸೀಸನ್’ನಲ್ಲಿ ಇದೇ ಮೊದಲ ಬಾರಿಗೆ ಎರಡು ಬಾರಿಯ ಮಾಜಿ ಚಾಂಪಿಯನ್ ವೆಸ್ಟ್ ಇಂಡೀಸ್ ಐಸಿಸಿ ವಿಶ್ವಕಪ್ ಪಂದ್ಯಾವಳಿಯ ಭಾಗವಾಗಿರಲಿಲ್ಲ.
ಇಂಗ್ಲೆಂಡ್ ವಿರುದ್ಧದ ಮಹತ್ವದ ಸರಣಿಗೆ ವೆಸ್ಟ್ ಇಂಡೀಸ್‌ನ 15 ಸದಸ್ಯರ ತಂಡವನ್ನು ಆಯ್ಕೆ ಮಾಡಲಾಗಿದೆ.
ಅನ್‌ಕ್ಯಾಪ್ಡ್ ಆಲ್‌ರೌಂಡರ್‌ಗಳಾದ ಶೆರ್ಫೇನ್ ರುದರ್‌ಫೋರ್ಡ್ ಮತ್ತು ಮ್ಯಾಥ್ಯೂ ಫೋರ್ಡ್ ಅವರು ಮುಂದಿನ ತಿಂಗಳು ಇಂಗ್ಲೆಂಡ್ ತಂಡಕ್ಕೆ ಆತಿಥ್ಯ ವಹಿಸಲಿರುವ ಕೆರಿಬಿಯನ್ ತಂಡದಲ್ಲಿ ಸ್ಥಾನ ಪಡೆದಿದ್ದು, ಚೊಚ್ಚಲ ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನು ಎದುರಿಸಲು ಸಜ್ಜಾಗಿದ್ದಾರೆ.
2019ರಲ್ಲಿ ತಮ್ಮ ಏಕೈಕ ಏಕದಿನ ಪಂದ್ಯವಾಡಿದ ವಿಕೆಟ್‌ಕೀಪರ್ ಶೇನ್ ಡೌರಿಚ್ ಮತ್ತು 2021ರ ಜನವರಿಯಲ್ಲಿ ಎರಡು ಏಕದಿನ ಪಂದ್ಯಗಳನ್ನು ಆಡಿದ ಆರಂಭಿಕ ಬ್ಯಾಟರ್ ಕ್ಜಾರ್ನ್ ಒಟ್ಲಿ ಅವರನ್ನು ಮರು ಸೇರ್ಪಡೆಗೊಳಿಸಲಾಗಿದೆ.
25 ವರ್ಷದ ಶೆರ್ಫೇನ್ ರುದರ್‌ಫೋರ್ಡ್ ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿದ್ದು, ಆರು ಟಿ20 ಪಂದ್ಯಗಳನ್ನು ಆಡಿದ್ದಾರೆ. ಆದರೆ 2020ರಿಂದ ಯಾವುದೇ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಕಾಣಿಸಿಕೊಂಡಿಲ್ಲ. ಮ್ಯಾಥ್ಯೂ ಫೋರ್ಡ್ 21 ವರ್ಷದ ಮಧ್ಯಮ-ವೇಗದ ಬೌಲರ್ ಆಗಿದ್ದಾರೆ.
ಶಾಯ್ ಹೋಪ್ ನಾಯಕತ್ವದ ವೆಸ್ಟ್ ಇಮಡೀಸ್ ತಂಡವು ಡಿಸೆಂಬರ್ 3 ಮತ್ತು 6ರಂದು ಆಂಟಿಗುವಾದಲ್ಲಿ ಮತ್ತು ಡಿಸೆಂಬರ್ 9ರಂದು ಬಾರ್ಬ ಡೋಸ್‌ನಲ್ಲಿ ಪ್ರವಾಸಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.
ಆಲ್‌ರೌಂಡರ್ ಜಸ್ಟಿನ್ ಗ್ರೀವ್ಸ್ ಗಾಯಗೊಂಡಿದ್ದು, ಜೇಸನ್ ಹೋಲ್ಡರ್ ಮತ್ತು ನಿಕೋಲಸ್ ಪೂರನ್ ಅವರು ಇತರ ಸ್ವರೂಪಗಳಿಗೆ ಆದ್ಯತೆ ನೀಡಿದ್ದರಿಂದ ಅಲಭ್ಯರಾಗಿದ್ದಾರೆ. ಏಕದಿನ ಸರಣಿಯ ಬಳಿಕ ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ತಂಡಗಳು ಐದು ಟಿ20 ಪಂದ್ಯಗಳಲ್ಲಿ ಮುಖಾಮುಖಿಯಾಗಲಿವೆ.
ಇಂಗ್ಲೆಂಡ್ ವಿರುದ್ಧದ ವೆಸ್ಟ್ ಇಂಡೀಸ್ ಏಕದಿನ ತಂಡ
ಶಾಯ್ ಹೋಪ್ (ನಾಯಕ), ಅಲಿಕ್ ಅಥಾನಾಜೆ, ಯಾನಿಕ್ ಕ್ಯಾರಿಯಾ, ಕೀಸಿ ಕಾರ್ಟಿ, ರೋಸ್ಟನ್ ಚೇಸ್, ಶೇನ್ ಡೌರಿಚ್, ಮ್ಯಾಥ್ಯೂ ಫೋರ್ಡ್, ಶಿಮ್ರಾನ್ ಹೆಟ್ಮಿಯರ್, ಅಲ್ಜಾರಿ ಜೋಸೆಫ್, ಬ್ರಾಂಡನ್ ಕಿಂಗ್, ಗುಡಾಕೇಶ್ ಮೋಟಿ, ಕ್ಜೋರ್ನ್ ಒಟ್ಲಿ, ಶೆರ್ಫೇನ್ ರುದರ್ಫೋರ್ಡ್, ರೊಮಾರಿಯೋ ಶೆಫರ್ಡ್, ಓಶೇನ್ ಥಾಮಸ್.