MI vs RR: ಸೂರ್ಯವಂಶಿಗೆ ಹೆದರಿ ವಿಶ್ರಾಂತಿ ಪಡೆದರೆ ಜಸ್‌ಪ್ರೀತ್ ಬುಮ್ರಾ!
IPL 2026: ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ ಬೌಲಿಂಗ್ ಆಯ್ದುಕೊಂಡರು. ಬಳಿಕ ಮಾತನಾಡಿದ ಪಾಂಡ್ಯ, "ಪಿಚ್ ಕಠಿಣವಾಗಿ ಕಾಣುತ್ತಿದೆ. ಸೂರ್ಯ ಮುಳುಗಿದ ನಂತರ ಪಿಚ್ ಉತ್ತಮಗೊಳ್ಳುವ ಸಾಧ್ಯತೆಯಿದೆ. ಇದು ನಮಗೆ ಕಠಿಣ ಋತುವಾಗಿತ್ತು, ಆದರೆ ನಾವು ಉತ್ತಮ ಪ್ರದರ್ಶನ ನೀಡಲು ಬಯಸುತ್ತೇವೆ" ಎಂದು ಹೇಳಿದರು.
Jasprit Bumrah -
ಮುಂಬಯಿ, ಮೇ 24: ಭಾನುವಾರದ 2026ರ ಐಪಿಎಲ್ (IPL 2026) ನ 69 ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್(Rajasthan Royals) ಮತ್ತು ಮುಂಬೈ ಇಂಡಿಯನ್ಸ್ ಮುಖಾಮುಖಿಯಾದವು. ಈ ಪಂದ್ಯದಲ್ಲಿ ಜಸ್‌ಪ್ರೀತ್ ಬುಮ್ರಾ( Jasprit Bumrah) ಕಣಕ್ಕಿಳಿಯಲಿಲ್ಲ. ಪಂದ್ಯ ಆರಂಭವಾಗುತ್ತಿದ್ದಂತೆ, ಮುಂಬೈ ಇಂಡಿಯನ್ಸ್ ತಂಡವು ವೇಗಿ ಜಸ್ಪ್ರೀತ್ ಬುಮ್ರಾ ಅವರ ಸೇವೆ ಇಲ್ಲದೆ ಆಡುತ್ತಿದೆ ಎಂದು ಬಹಿರಂಗಪಡಿಸಿತು.
ಮುಂಬೈ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರು ಜಸ್ಪ್ರೀತ್ ಬುಮ್ರಾಗೆ ಈ ಪಂದ್ಯಕ್ಕೆ ವಿಶ್ರಾಂತಿ ನೀಡಲಾಗಿದೆ ಮತ್ತು ಶಾರ್ದೂಲ್ ಠಾಕೂರ್, ಬುಮ್ರಾ ಬದಲಿಗೆ ಆಡುವ ಹನ್ನೊಂದರಲ್ಲಿ ಸ್ಥಾನ ಪಡೆದಿದ್ದಾರೆ ಎಂದು ಬಹಿರಂಗಪಡಿಸಿದರು.
ಬುಮ್ರಾ ಆಡುತ್ತಿಲ್ಲ ಎಂಬ ವಿಚಾರ ತಿಳಿಯುತ್ತಿದಂತೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ಕೂಡ ಜೋರಾಯಿತು. ವೈಭವ್ ಸೂರ್ಯವಂಶಿಗೆ ಬೆದರಿ ಬುಮ್ರಾ ಈ ಪಂದ್ಯದಿಂದ ಹೊರಗುಳಿದರ ಎಂಬ ಕಮೆಂಟ್‌ಗಳು ಬರಲಾರಂಭಿಸಿದೆ.
ಉಭಯ ತಂಡಗಳ ಮೊದಲ ಮುಖಾಮುಖಿಯಲ್ಲಿ ಸೂರ್ಯವಂಶಿ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಬಮ್ರಾಗೆ ಸರಿಯಾಗಿ ದಂಡಿಸಿದ್ದರು. ಇದು ಬುಮ್ರಾ ಅವರ ಖ್ಯಾತಿಗೂ ಭಾರೀ ಧಕ್ಕೆ ಉಂಟು ಮಾಡಿತ್ತು. ಹೀಗಾಗಿ ಎರಡನೇ ಬಾರಿ ಮತ್ತೆ ಅವಮಾನ ಎದುರಿಸುವುದು ಬೇಡ ಎನ್ನುವ ಕಾರಣದಿಂದಲೇ ಬುಮ್ರಾ ವಿಶ್ರಾಂತಿ ಪಡೆದರು ಎಂದು ನೆಟ್ಟಿಗರು ಹೇಳಲಾರಂಭಿಸಿದ್ದಾರೆ.
Rishabh Pant: ಮುಂದಿನ ಆವೃತ್ತಿಯಲ್ಲಿ ಲಖನೌ ತಂಡದ ನಾಯಕತ್ವದಿಂದ ಪಂತ್ ಕಿಕ್ ಔಟ್!
ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ ಬೌಲಿಂಗ್ ಆಯ್ದುಕೊಂಡರು. ಬಳಿಕ ಮಾತನಾಡಿದ ಪಾಂಡ್ಯ, "ಪಿಚ್ ಕಠಿಣವಾಗಿ ಕಾಣುತ್ತಿದೆ. ಸೂರ್ಯ ಮುಳುಗಿದ ನಂತರ ಪಿಚ್ ಉತ್ತಮಗೊಳ್ಳುವ ಸಾಧ್ಯತೆಯಿದೆ. ಇದು ನಮಗೆ ಕಠಿಣ ಋತುವಾಗಿತ್ತು, ಆದರೆ ನಾವು ಉತ್ತಮ ಪ್ರದರ್ಶನ ನೀಡಲು ಬಯಸುತ್ತೇವೆ" ಎಂದು ಹೇಳಿದರು.
ಉಭಯ ಆಡುವ ಬಳಗ
ರಾಜಸ್ಥಾನ್ ರಾಯಲ್ಸ್ (ಪ್ಲೇಯಿಂಗ್ XI): ಯಶಸ್ವಿ ಜೈಸ್ವಾಲ್, ವೈಭವ್ ಸೂರ್ಯವಂಶಿ, ಧ್ರುವ್ ಜುರೆಲ್(ವಿ.ಕೀ.), ರಿಯಾನ್ ಪರಾಗ್(ನಾಯಕ), ಡೊನೊವನ್ ಫೆರೇರಾ, ಶುಭಂ ದುಬೆ, ದಾಸುನ್ ಶನಕ, ಜೋಫ್ರಾ ಆರ್ಚರ್, ನಾಂದ್ರೆ ಬರ್ಗರ್, ಯಶ್ ರಾಜ್ ಪುಂಜಾ, ಬ್ರಿಜೇಶ್ ಶರ್ಮಾ.
ಮುಂಬೈ ಇಂಡಿಯನ್ಸ್ (ಪ್ಲೇಯಿಂಗ್ XI): ರಿಯಾನ್ ರಿಕೆಲ್ಟನ್(ವಿ.ಕೀ.), ನಮನ್ ಧೀರ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ(ನಾಯಕ), ವಿಲ್ ಜಾಕ್ಸ್, ಕಾರ್ಬಿನ್ ಬಾಷ್, ದೀಪಕ್ ಚಾಹರ್, ಶಾರ್ದೂಲ್ ಠಾಕೂರ್, ಎಎಮ್ ಗಜನ್ಫರ್, ರಘು ಶರ್ಮಾ.